6- ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಐಪಿಎಲ್-2020 ಯ ನಾಲ್ಕನೇ ಪಂದ್ಯದಲ್ಲಿ ಲುಂಗಿ ಎನ್ಗಿಡಿ 30 ರನ್ಗಳನ್ನು ನೀಡಿದರು. ಕೊನೆಯ ಓವರ್ ಎಸೆದ ಎನ್ಗಿಡಿ ಮೊದಲ 4 ಎಸೆತಗಳನ್ನು ಆರ್ಆರ್ ಬೌಲರ್ ಜೋಫ್ರಾ ಆರ್ಚರ್ ಸಿಕ್ಸರ್ಗೆ ಅಟ್ಟಿದರು. ಇದರ ಜೊತೆ 2 ನೋಬಾಲ್, 1 ವೈಡ್ ಹಾಗೂ ಮೂರು ಸಿಂಗಲ್ ಜೊತೆ ಒಟ್ಟು 30 ರನ್ ಬಿಟ್ಟುಕೊಟ್ಟರು.
ಕಠಿಣ ಗುರಿ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಎಸೆತದಲ್ಲಿ ತಮ್ಮ ಮೊದಲ ವಿಕೆಟ್ ಕಳೆದುಕೊಂಡಿತು. ಬಳಿಕ ಕ್ರೀಸ್ಗಿಳಿದ ಸುರೇಶ್ ರೈನಾ ಸ್ಪೋಟಕ ಬ್ಯಾಟಿಂಗ್ ಆರಂಭಿಸಿದ್ದರು. ಪಂದ್ಯದ ಆರನೇ ಓವರ್‌ನಲ್ಲಿ ಸಿಡಿಲಬ್ಬರ ಬ್ಯಾಟಿಂಗ್ ನಡೆಸಿ ಪರ್ವಿಂದರ್ ಅವನಾ ಅವರನ್ನು ಬೆಂಡೆತ್ತಿದ್ದರು. ಆ ಓವರ್‌ನಲ್ಲಿ ಸುರೇಶ್ ರೈನಾ 5 ಬೌಂಡರಿ ಮತ್ತು 2 ಸಿಕ್ಸರ್ನೊಂದಿಗೆ ಒಟ್ಟು 33 ರನ್ ಗಳಿಸಿದ್ದರು.
ಸಾಧಾರಣ ಗುರಿಯನ್ನು ಬೆನ್ನತ್ತಲು ಆರ್ಸಿಬಿ ಆರಂಭಿಕರಾಗಿ ಕ್ರಿಸ್ ಗೇಲ್ ಕಣಕ್ಕಿಳಿದಿದ್ದರು. ಇನಿಂಗ್ಸ್ನ ಮೂರನೇ ಓವರ್ ಎಸೆಯಲು ಪ್ರಶಾಂತ್ ಪರಮೇಶ್ವರನ್ ಬಂದರು. ಇತ್ತ ಗೇಲ್ ಕೂಡ ರೆಡಿಯಾಗಿ ನಿಂತಿದ್ದರು. ಕೆರಿಬಿಯನ್ ದೈತ್ಯನ ಬ್ಯಾಟಿಂಗ್ ಮುಂದೆ ಯುವ ವೇಗಿ ಟ್ರ್ಯಾಕ್ ತಪ್ಪಿದರು. ಇದನ್ನೇ ಬಳಸಿಕೊಂಡ ಗೇಲ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದರು. ಅತ್ತ ಪರಮೇಶ್ವರನ್ ನೋ ಬಾಲ್ಗಳನ್ನು ಎಸೆದು ತಪ್ಪು ಮಾಡಿದರು. ಫಲವಾಗಿ 6 ಸಿಕ್ಸ್, 3 ಬೌಂಡರಿಗಳು ಸೇರಿದಂತೆ ಒಟ್ಟು 37 ರನ್ಗಳನ್ನು ಗೇಲ್ ಚಚ್ಚಿದರು. ಇದರೊಂದಿಗೆ ಇದು ಐಪಿಎಲ್‌ನ ಅತ್ಯಂತ ದುಬಾರಿ ಓವರ್ ಎನಿಸಿಕೊಂಡಿತು.