ಕರ್ನಾಟಕ ಪ್ರೀಮಿಯರ್ ಲೀಗ್ ಮ್ಯಾಚ್ ಫಿಕ್ಸಿಂಗ್ ಸಂಬಂಧಿಸಿದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಐಪಿಎಲ್ ಆಟಗಾರರು ಸಹ ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವ ಮಾಹಿತಿಗಳು ಹೊರಬೀಳುತ್ತಿದೆ.
2/ 12
ಈಗಾಗಲೇ ಸಿಸಿಬಿ ಅಧಿಕಾರಿಗಳು ಕರ್ನಾಟಕದ ಕ್ರಿಕೆಟಿಗರಾದ ಸಿಎಂ ಗೌತಮ್ ಹಾಗೂ ಅಬ್ರಾರ್ ಖಾಜಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಗೌತಮ್ ಮಾಹಿತಿಯಾಧರಿಸಿ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರ ಕೆ.ಸಿ ಕಾರ್ಯಪ್ಪ ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ.
3/ 12
ಕರ್ನಾಟಕ ಪ್ರೀಮಿಯರ್ ಲೀಗ್ 2019 ಫೈನಲ್ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ಸಂಬಂಧ ಬಳ್ಳಾರಿ ಟಸ್ಕರ್ಸ್ ತಂಡದ ಕಪ್ತಾನ ಗೌತಮ್ ಹಾಗೂ ಆಲ್ರೌಂಡರ್ ಅಬ್ರಾರ್ ಖಾಜಿರನ್ನು ವಾರಗಳ ಹಿಂದೆಯೇ ಬಂಧಿಸಲಾಗಿತ್ತು. ಈ ಆಟಗಾರರು ನೀಡಿರುವ ಮಾಹಿತಿಯಂತೆ ಇದೀಗ ತನಿಖೆಯು ಐಪಿಎಲ್ ಪಂದ್ಯಾವಳಿಯತ್ತ ಸಾಗಿದೆ.
4/ 12
ರಣಜಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿರುವ ಕೆ.ಸಿ ಕಾರ್ಯಪ್ಪ ಕೆಪಿಎಲ್ನಲ್ಲಿ ಬಿಜಾಪುರ ಬುಲ್ಸ್ ಪರ ಕಣಕ್ಕಿಳಿದಿದ್ದರು.
5/ 12
ಅಲ್ಲದೆ ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಕೋಲ್ಕತ್ತಾ ನೈಟ್ರೈಡರ್ಸ್ ತಂಡವನ್ನು ಕೊಡಗಿನ ಆಟಗಾರ ಪ್ರತಿನಿಧಿಸಿದ್ದಾನೆ.
6/ 12
ಪ್ರಸ್ತುತ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಲೆಗ್ ಸ್ಪಿನ್ನರ್ ಆಗಿರುವ ಕಾರ್ಯಪ್ಪ ಅವರನ್ನು ಗೌತಮ್ ನೀಡಿದ ಮಾಹಿತಿಯ ಮೇಲೆ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
7/ 12
2016–2017 ಐಪಿಎಲ್ ಸೀಸನ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ಯುವ ಆಟಗಾರನನ್ನು 2018ರ ಹರಾಜಿನಲ್ಲಿ 3.5 ಲಕ್ಷ ಡಾಲರ್ಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಖರೀದಿಸಿತ್ತು.
8/ 12
ಕೆಪಿಎಲ್ ಫಿಕ್ಸಿಂಗ್ ಹಗರಣದ ಹಿನ್ನಲೆಯಲ್ಲಿ ತನಿಖೆ ನಡೆಸಲಾಗುತ್ತಿದ್ದು, ಇದೇ ವೇಳೆ ಐಪಿಎಲ್ನಲ್ಲಿ ಆಡುತ್ತಿರುವ ಕೆಲ ಆಟಗಾರರೊಂದಿಗೂ ಕೂಡ ಬುಕ್ಕಿಗಳು ಸಂಪರ್ಕ ಹೊಂದಿದ್ದಾರೆಂಬ ಮಾಹಿತಿಗಳು ಸಿಸಿಬಿ ಲಭ್ಯವಾಗಿದೆ.
9/ 12
ಈ ಹಿನ್ನೆಲೆಯಲ್ಲಿ ರಾಜ್ಯದ ಕೆಲ ಸ್ಟಾರ್ ಆಟಗಾರರನ್ನು ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.