ಕೊರೋನಾ ವೈರಸ್ನಿಂದ ಕ್ರೀಡಾ ಅಂಗಳ ಸ್ತಬ್ಧವಾಗಿದೆ. ವಿಶ್ವದಾದ್ಯಂತ ಜರುಗಬೇಕಿದ್ದ ಅನೇಕ ಕ್ರೀಡಾಕೂಟಗಳನ್ನು ರದ್ದುಗೊಳಿಸಲಾಗಿದೆ. ಅದರಲ್ಲೂ ಭಾರತೀಯ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ನ್ನು ಮುಂದೂಡಲಾಗಿದೆ.
2/ 13
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಐಪಿಎಲ್ ಪ್ರಾರಂಭವಾಗಿ ನಾಲ್ಕೈದು ಪಂದ್ಯಗಳು ಮುಗಿದಿರಬೇಕಿತ್ತು. ಆದರೆ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಬಿಸಿಸಿಐ ಟೂರ್ನಿಯನ್ನು ಏಪ್ರಿಲ್ 15 ರವರೆಗೆ ಮುಂದೂಡಲಾಗಿದೆ.
3/ 13
ಆದರೆ ದೇಶದಲ್ಲಿ ಕೊರೋನಾ ಸೋಂಕು ಹರಡುವಿಕೆ ನಿಮಿತ್ತ ಏಪ್ರಿಲ್ನಲ್ಲಿ ರಂಗುರಂಗಿನ ಕ್ರಿಕೆಟ್ ಟೂರ್ನಿ ನಡೆಯುವುದು ಬಹುತೇಕ ಡೌಟ್.
4/ 13
ಹೀಗಾಗಿ ಈ ವರ್ಷದ ಐಪಿಎಲ್ ಅನ್ನು ರದ್ದುಗೊಳಿಸಬೇಕಾದ ಒತ್ತಡದಲ್ಲಿದೆ ಬಿಸಿಸಿಐ. ಅಲ್ಲದೆ 13ನೇ ಆವೃತ್ತಿಯ ಟೂರ್ನಿಯನ್ನು ಮುಂದಿನ ವರ್ಷ ನಡೆಸುವ ಬಗ್ಗೆ ಕೂಡ ಚಿಂತಿಸಲಾಗಿದೆ.
5/ 13
ಇದರ ಬೆನ್ನಲ್ಲೇ ಇದೀಗ ಇಂಡಿಯನ್ ಪ್ರಿಮಿಯರ್ ಲೀಗ್ನ್ನು ಇದೇ ವರ್ಷ ಆಯೋಜಿಸಲು ತೆರೆ ಮರೆಯ ಪ್ರಯತ್ನಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಕೈ ಹಾಕಿದೆ.
6/ 13
ಅಂದರೆ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮುಂದೂಡಿದರೆ ಐಪಿಎಲ್ನ್ನು ಆಯೋಜಿಸಲು ಸಾಧ್ಯವಾಗಲಿದೆ ಎಂದು ಬಿಸಿಸಿಐ ತಿಳಿಸಿದೆ.
7/ 13
ಒಂದು ಮೂಲದ ಪ್ರಕಾರ ಭಾರತೀಯ ಕ್ರಿಕೆಟ್ ಮಂಡಳಿ, ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಜೊತೆ ಈ ಬಗ್ಗೆ ಚರ್ಚಿಸಿದ್ದು, ಐಸಿಸಿ ನಿರ್ಧಾರದ ಮೇಲೆ ಐಪಿಎಲ್ ನಡೆಯುವ ಸಾಧ್ಯತೆ ಇದೆ.
8/ 13
ಏಕೆಂದರೆ ಈ ಬಾರಿ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಅತ್ತ ಆಸ್ಟ್ರೇಲಿಯಾದಲ್ಲೂ ಕೊರೋನಾ ವೈರಸ್ ಮರಣ ಮೃದಂಗವಾಡುತ್ತಿದ್ದು, ಅಲ್ಲಿ ಕೂಡ ಲಾಕ್ಡೌನ್ ಹೇರಲಾಗಿದೆ. ಈ ಕರ್ಫ್ಯೂ ಮುಂದಿನ ಆರು ತಿಂಗಳವರೆಗೂ ಮುಂದುವರೆಯುವ ಸಾಧ್ಯತೆ ಎಂದು ಹೇಳಲಾಗಿದೆ.
9/ 13
ಹೀಗಾಗಿ ಟಿ20 ವಿಶ್ವಕಪ್ ದಿನಾಂಕದಲ್ಲಿ ಬದಲಾವಣೆಯಾಗುವ ಸಾಧ್ಯತೆ ಹೆಚ್ಚು. ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಹಾಗೂ ಐಸಿಸಿ ಒಂದು ವೇಳೆ ವಿಶ್ವಕಪ್ ಟೂರ್ನಿಯನ್ನು ಮುಂದೂಡಿದರೆ ಐಪಿಎಲ್ ನಡೆಸಲು ಅವಕಾಶವಿದೆ.
10/ 13
ಅಂದರೆ ಟಿ20 ವಿಶ್ವಕಪ್ ದಿನಾಂಕ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಐಪಿಎಲ್ ನಡೆಸಲು ಬಿಸಿಸಿಐ ಸಕಲ ರೀತಿಯಲ್ಲೂ ಸನ್ನದ್ಧವಾಗಿ ನಿಂತಿದೆ.
11/ 13
ಬಹುತೇಕ ಎಲ್ಲಾ ದೇಶಗಳು 6 ತಿಂಗಳವರೆಗೂ ನಿಯಂತ್ರಿತ ಲಾಕ್ಡೌನ್ ಘೋಷಿಸುವ ಸಾಧ್ಯತೆ ಇದೆ. ಅಂದರೆ ಅಕ್ಟೋಬರ್ ಆರಂಭದಲ್ಲಿ ಲಾಕ್ಡೌನ್ ಮುಗಿಯಲಿದೆ. ಹೀಗಾಗಿ ಐಸಿಸಿ ಟಿ20 ವಿಶ್ವಕಪ್ನ್ನು 2021 ಗೆ ಮುಂದೂಡುವ ಸಾಧ್ಯತೆ ಹೆಚ್ಚು.
12/ 13
ಹೀಗಾಗಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದೇ ಹೇಳಲಾಗುತ್ತಿದೆ.
13/ 13
ipl
First published:
113
ಈ ಬಾರಿಯ IPL ರದ್ದಾಗಲ್ಲ: ಈ ತಿಂಗಳಲ್ಲಿ ನಡೆಯಲಿದೆ ರಂಗು ರಂಗಿನ ಕ್ರಿಕೆಟ್ ಟೂರ್ನಿ?