ಮುರಳಿ ವಿಜಯ್: ಚೆನ್ನೈ ತಂಡದಲ್ಲೆ ಒಂದು ಕಾಲದಲ್ಲಿ ಖಾಯಂ ಆರಂಭಿಕ ಆಟಗಾರನಾಗಿದ್ದ ಮುರಳಿ ವಿಜಯ್ಗೆ ಬಳಿಕ ಅವಕಾಶವೇ ಸಿಗಲಿಲ್ಲ. ಕಳೆದ ಸೀಸನ್ನಲ್ಲಿ ಕೆಲ ಪಂದ್ಯಗಳನ್ನ ಆಡಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ, ಸರಿಯಾದ ಕ್ರಮಾಂಕದಲ್ಲಿ ಕಣಕ್ಕಿಳಿಯಲಿಲ್ಲ. ಈ ಬಾರಿ 3ನೇ ಜಾಗಕ್ಕೆ ಇವರೇ ಸೂಕ್ತ ಎಂದು ಹೇಳಬಹುದು.