IPL 2020: ಐಪಿಎಲ್ 2020ರಲ್ಲಿ ಬಿಸಿಸಿಐ ಗಳಿಸಿದ ಲಾಭವೆಷ್ಟು?: ಅಧಿಕೃತವಾಗಿ ಹೊರಬಿತ್ತು ಲೆಕ್ಕಾಚಾರ
ಭಾರತದಲ್ಲಿ ಕೋವಿಡ್-19ನಿಂದ ಐಪಿಎಲ್ ಸಂಪೂರ್ಣ ರದ್ದಾಗಿದ್ದರೆ ಬಿಸಿಸಿಐ ಬರೋಬ್ಬರಿ 4,000 ಕೋಟಿ ರೂಪಾಯಿಗಳ ನಷ್ಟ ಅನುಭವಿಸುತ್ತಿತ್ತು. ಇದೇ ಕಾರಣಕ್ಕೆ ವಿದೇಶದಲ್ಲಾದರೂ ಟೂರ್ನಿಯನ್ನು ನಡೆಸುವ ಅನಿವಾರ್ಯ ಬಿಸಿಸಿಐಗೆ ಎದುರಾಗಿತ್ತು.
News18 Kannada | November 23, 2020, 3:25 PM IST
1/ 11
ಐಪಿಎಲ್ 2020ಕ್ಕೆ ತೆರೆಬಿದ್ದಿದ್ದು ವಿದೇಶದಲ್ಲಿ ಆಯೋಜಿಸಿ ಬಿಸಿಸಿಐ ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸಿದೆ ಎಂಬ ಲೆಕ್ಕಾಚಾರ ಶುರುವಾಗಿದೆ. ಹೀಗಿರುವಾಗಲೇ ಸ್ವತಃ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ವಿಚಾರವನ್ನು ಬಹಿರಂಗ ಪಡಿಸಿದೆ.
2/ 11
ಕೊರೋನಾ ವೈರಸ್ ತಾಂಡವವಾಡುತ್ತಿದ್ದ ಕಾರಣ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ದೂರದ ಯುಎಇನಲ್ಲಿ ಆಯೋಜನೆ ಮಾಡಿತ್ತು. ಇದರಲ್ಲಿ ಬಿಸಿಸಿಐ ಅಭೂತಪೂರ್ವ ಯಶಸ್ಸು ಕೂಡ ಕಂಡಿದೆ.
3/ 11
ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್, ನಾವು ಕೊರೋನಾ ಮಧ್ಯೆ ಐಪಿಎಲ್ 2020 ಆಯೋಜಿಸಿ 4,000 ಕೋಟಿ ಆಧಾಯ ಗಳಿಸಿದ್ದೇವೆ ಎಂದಿದ್ದಾರೆ. ಅಲ್ಲದೆ ನಮ್ಮ ಟಿವಿ ವೀಕ್ಷಣೆಯಲ್ಲಿ ಶೇ. 25 ರಷ್ಟು ಹೆಚ್ಚಾಗಿದೆ. ಮುಂಬೈ-ಚೆನ್ನೈ ನಡುವಣ ಓಪನಿಂಗ್ ಪಂದ್ಯ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಣೆ ಕಂಡ ಉದ್ಘಾಟನಾ ಪಂದ್ಯ ಎಂದು ತಿಳಿಸಿದ್ದಾರೆ.
4/ 11
ಈ ಬಾರಿಯ ಐಪಿಎಲ್ ಅನ್ನು ಯುಎಇನ ದುಬೈ, ಶಾರ್ಜಾ ಮತ್ತು ಅಬುಧಾಬಿಯ ಒಟ್ಟು 3 ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಸೆಪ್ಟೆಂಬರ್ 19ರಿಂದ ಆರಂಭವಾಗಿ ನವೆಂಬರ್ 10ರವರೆಗೆ ಟೂರ್ನಿ ನಡೆದಿತ್ತು.
5/ 11
ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಗೆಲುವು ಸಾಧಿಸಿ ದಾಖಲೆಯ ಐದನೇ ಬಾರಿ ಪ್ರಶಸ್ತಿಗೆ ಮುತ್ತಿಟ್ಟಿತು.
6/ 11
ಭಾರತದಲ್ಲಿ ಕೋವಿಡ್-19ನಿಂದ ಐಪಿಎಲ್ ಸಂಪೂರ್ಣ ರದ್ದಾಗಿದ್ದರೆ ಬಿಸಿಸಿಐ ಬರೋಬ್ಬರಿ 4,000 ಕೋಟಿ ರೂಪಾಯಿಗಳ ನಷ್ಟ ಅನುಭವಿಸುತ್ತಿತ್ತು. ಇದೇ ಕಾರಣಕ್ಕೆ ವಿದೇಶದಲ್ಲಾದರೂ ಟೂರ್ನಿಯನ್ನು ನಡೆಸುವ ಅನಿವಾರ್ಯ ಬಿಸಿಸಿಐಗೆ ಎದುರಾಗಿತ್ತು.
7/ 11
ಅದರಂತೆ ಯುಎಇ ಐಪಿಎಲ್ 2020 ಆತಿಥ್ಯ ವಹಿಸಿ ಯಶಸ್ವಿಯಾಗಿ ನಡೆಸಿದ ಕಾರಣಕ್ಕೆ ಬಿಸಿಸಿಐ ಬರೋಬ್ಬರಿ 100 ಕೋಟಿ ರೂ. ನೀಡಿದೆ .
8/ 11
ವರದಿಯ ಪ್ರಕಾರ ಬಿಸಿಸಿಐ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ಗೆ 14 ಮಿಲಿಯನ್ ಡಾಲರ್ಸ್(100 ಕೋಟಿ ರೂ.) ಮೊತ್ತವನ್ನು ನೀಡಿದೆ.
9/ 11
ಈ ಬಾರಿಯ ಐಪಿಎಲ್ ಟೂರ್ನಿ ಯುಎಇನಲ್ಲಿ ನಡೆದರೂ ಪ್ರೇಕ್ಷಕರಿಲ್ಲದೆ ಖಾಲಿ ಮೈದಾನದಲ್ಲಿ ಆಯೋಜಿಸಲಾಗಿತ್ತು.
10/ 11
ಹೀಗಿದ್ದರೂ ಬಿಸಿಸಿಐ ಯಾವುದೇ ನಷ್ಟ ಅನುಭಿಸದೆ ವೀಕ್ಷಣೆಯಲ್ಲಿ, ಜಾಹೀರಾತುಗಳಲ್ಲಿ ಯಶಸ್ಸು ಕಂಡಿದೆ.
11/ 11
ಸದ್ಯ ಬಿಸಿಸಿಐ ಬಿಸಿಸಿಐ ಐಪಿಎಲ್ 2021ರ ಸಿದ್ದತೆಯಲ್ಲಿದೆ. ಮುಂದಿನ ಆವೃತ್ತಿಯನ್ನು ಭಾರತದಲ್ಲೇ ನಡೆಸಲಾಗುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾಹಿತಿ ನೀಡಿದ್ದಾರೆ.