ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಬ್ಯಾಟಿಂಗ್ ಅಂಕಿ ಅಂಶ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಅತ್ಯುತ್ತಮವಾಗಿದೆ. ಐಪಿಎಲ್ ಆರಂಭದಿಂದಲೂ ಸಿಎಸ್ಕೆ ಪರ ಕಣಕ್ಕಿಳಿಯುತ್ತಿರುವ ಧೋನಿ ಇದುವರೆಗೆ ಆರ್ಸಿಬಿ ವಿರುದ್ಧ 27 ಪಂದ್ಯಗಳನ್ನಾಡಿದ್ದಾರೆ. ಅದರಲ್ಲಿ 25 ಇನಿಂಗ್ಸ್ನಲ್ಲಿ ಬೆಂಗಳೂರು ವಿರುದ್ಧ ಬ್ಯಾಟ್ ಬೀಸಿದ್ದಾರೆ.