ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾಗೆ ರನ್ಗಳ ಸುರಿಮಳೆಗೈದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಐಪಿಎಲ್ನಲ್ಲೂ ರನ್ಗಳ ಸುರಿಮಳೆಗೈದಿದ್ದಾರೆ. ಐಪಿಎಲ್ ಆರಂಭದಿಂದಲೂ ಬೆಂಗಳೂರು ತಂಡದ ಪರ ಆಡುತ್ತಿರುವ ಕೊಹ್ಲಿ, ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕ್ರಿಕೆಟಿಗರಾಗಿದ್ದಾರೆ. ಅವರು 207 ಪಂದ್ಯಗಳಲ್ಲಿ 6,283 ರನ್ ಗಳಿಸಿದ್ದಾರೆ. ಇದುವರೆಗಿನ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.
ಲೀಗ್ನ ಅತ್ಯಂತ ಯಶಸ್ವಿ ನಾಯಕ ರೋಹಿತ್ ಶರ್ಮಾ ಐಪಿಎಲ್ ಪ್ರಮುಖ ಸ್ಕೋರರ್ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 213 ಪಂದ್ಯಗಳಲ್ಲಿ 5,611 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಅರ್ಧ ಶತಕ ಹಾಗೂ 40 ಅರ್ಧ ಶತಕಗಳು ಸೇರಿವೆ. ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ, ರೋಹಿತ್ ಇದುವರೆಗೆ ಕೇವಲ ಎರಡು ತಂಡಗಳಿಗಾಗಿ ಆಡಿದ್ದಾರೆ. ಅವರು ಮೊದಲು ಡೆಕ್ಕನ್ ಚಾರ್ಜರ್ಸ್ಗಾಗಿ ಆಡಿದರು. ನಂತರ ಮುಂಬೈ ಇಂಡಿಯನ್ಸ್ ತಂಡ ಸೇರಿದ್ದಾರೆ.
ಆಸ್ಟ್ರೇಲಿಯಾದ ಸ್ಟಾರ್ ಓಪನರ್ ಡೇವಿಡ್ ವಾರ್ನರ್ ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ವಾರ್ನರ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಸನ್ ರೈಸರ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಅವರು 150 ಪಂದ್ಯಗಳಲ್ಲಿ 5,449 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕಗಳು 50 ಅರ್ಧ ಶತಕಗಳು ಸೇರಿವೆ.