ಪ್ರತಿ ವರ್ಷ ಐಪಿಎಲ್ ಜ್ವರ ಭಾರತದಲ್ಲಿ ಸಂಚಲನ ಉಂಟುಮಾಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. IPL 2008 ರಲ್ಲಿ ಪ್ರಾರಂಭವಾಯಿತು. ಇದು ಈಗ 14 ಋತುಗಳನ್ನು ಪೂರ್ಣಗೊಳಿಸಿದೆ. ಪ್ರತಿವರ್ಷ IPL ಬಹುಮಾನದ ಹಣ ಹೆಚ್ಚುತ್ತಲೇ ಇದೆ. ಆದರೆ ಪ್ರತಿವರ್ಷ ಐಪಿಎಲ್ ಬಹುಮಾನದ ಹಣ ಎಷ್ಟು ಹೆಚ್ಚಿದೆ ಎಂಬುದನ್ನು ತಿಳಿದುಕೊಳ್ಳಿ.
2/ 8
BCCI 2008 ರಲ್ಲಿ IPL ಅನ್ನು ಪ್ರಾರಂಭಿಸಿತು. IPL ದೂರದರ್ಶನ ವೀಕ್ಷಕರ ಮತ್ತು ಪ್ರಾಯೋಜಕತ್ವಗಳ ಮೂಲಕ ಹೆಚ್ಚಿನ ಆದಾಯವನ್ನು ಪಡೆಯುತ್ತದೆ.
3/ 8
ಈ ಋತುವಿನಲ್ಲಿ ಬಿಸಿಸಿಐ ರೂ. 1,000 ಕೋಟಿಗೂ ಅಧಿಕ ಆದಾಯ ಗಳಿಸಲಿದೆ ಎನ್ನುತ್ತವೆ ಮಾರುಕಟ್ಟೆಯ ಮೂಲಗಳು. ಇದು ಟೂರ್ನಿಯ ಆರಂಭದ ನಂತರ ಒಂದೇ ಋತುವಿನಲ್ಲಿ ಬಿಸಿಸಿಐ ಪಡೆದ ಗರಿಷ್ಠ ಆದಾಯವಾಗಿದೆ. (ಸಾಂಕೇತಿಕ ಚಿತ್ರ)
4/ 8
2008-2009ರಲ್ಲಿ ಮೊದಲ ಎರಡು ಸೀಸನ್ಗಳ ವಿಜೇತರು ರೂ. 4.8 ಕೋಟಿ ನಗದು ಬಹುಮಾನ ಮತ್ತು ರೂ. 2.4 ಕೋಟಿ ನೀಡಲಾಗಿದೆ. (ಸಾಂಕೇತಿಕ ಚಿತ್ರ)
5/ 8
IPL 2014 ಮತ್ತು 2015 ವಿಜೇತರಿಗೆ ರೂ. 15 ಕೋಟಿ ಮತ್ತು ಫೈನಲಿಸ್ಟ್ ತಂಡಗಳಿಗೆ ರೂ. 10 ಕೋಟಿ ಬಹುಮಾನ ನೀಡಲಾಗಿತ್ತು. 2016 ರಲ್ಲಿ ವಿಜೇತರಿಗೆ ಬಹುಮಾನದ ಮೊತ್ತ ರೂ. 20 ಕೋಟಿ ಮತ್ತು ಫೈನಲಿಸ್ಟ್ಗಳಿಗೆ ರೂ. 11 ಕೋಟಿ ನೀಡಲಾಗಿತ್ತು. ನಂತರ IPL 2019 ರವರೆಗೆ ವಿಜೇತ ತಂಡಕ್ಕೆ ನಗದು ಬಹುಮಾನದ ಮೊತ್ತ ಬದಲಾಗಿಲ್ಲ. (ಸಾಂಕೇತಿಕ ಚಿತ್ರ)
6/ 8
ಆದರೂ 2016-2017 ರಲ್ಲಿ ರೂ. 11 ಕೋಟಿಗೆ ಹೋಲಿಸಿದರೆ ರೂ. 12.5 ಕೋಟಿ ಸಿಕ್ಕಿತ್ತು. 2020 ರಲ್ಲಿ ಐಪಿಎಲ್ ಬಹುಮಾನದ ಮೊತ್ತವು ಕೊಂಚ ಕಡಿಮೆಯಾಗಿತ್ತು. ವಿಜೇತರು ರೂ 10 ಕೋಟಿ ನಗದು ಬಹುಮಾನ ಮತ್ತು ರನ್ನರ್ ಅಪ್ ರೂ 6.25 ಕೋಟಿ ಪಡೆದುಕೊಂಡಿದ್ದರು.
7/ 8
ಕೋವಿಡ್-19 ರ ಎರಡನೇ ಅಲೆಯು ಕಳೆದ ವರ್ಷ ಭಾರತ ಸೇರಿದಂತೆ ಹಲವು ದೇಶಗಳನ್ನು ಹೆಚ್ಚಾಗಿದ್ದರೂ ಐಪಿಎಲ್ 2021 ರ ಬಹುಮಾನದ ಮೊತ್ತ ರೂ. 20 ಕೋಟಿಗೆ ಏರಿಸಲಾಯಿತು. ರನ್ನರ್ ಅಪ್ ತಂಡ ರೂ. 12.5 ಕೋಟಿ ಗಳಿಸಿತ್ತು. (ಸಾಂಕೇತಿಕ ಚಿತ್ರ)
8/ 8
2022 ರಲ್ಲಿ ವಿಜೇತ ತಂಡಕ್ಕೆ ಬಹುಮಾನದ ಮೊತ್ತ ರೂ. 20 ಕೋಟಿ ಘೋಷಿಸಲಾಗಿದೆ. ರನ್ನರ್ಸ್ ಅಪ್ ತಂಡಕ್ಕೆ ರೂ. 13 ಕೋಟಿ ನೀಡಲಾಗುವುದು. ಐಪಿಎಲ್ ಕ್ರೇಜ್ ಜೊತೆಗೆ ಆದಾಯ ಬಹುಮಾನದ ಹಣವೂ ವರ್ಷವರ್ಷವೂ ಹೆಚ್ಚುತ್ತಿದೆ. (ಸಾಂಕೇತಿಕ ಚಿತ್ರ)