IPL 2021: ಐಪಿಎಲ್ ಟಾಪ್-5 ರನ್ ಸರದಾರರು ಯಾರು ಗೊತ್ತಾ?
ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್ಗಳಿಗೆ ನಡುಕ ಹುಟ್ಟಿಸಿ ಐಪಿಎಲ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಹೀಗೆ ಕಳೆದ 13 ಸೀಸನ್ಗಳಲ್ಲೂ ರನ್ ಮಳೆ ಸುರಿಸಿದ ಟಾಪ್ 5 ಬ್ಯಾಟ್ಸ್ಮನ್ಗಳ ಪಟ್ಟಿ ಇಲ್ಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೆಲ ಆಟಗಾರರಿದ್ದಾರೆ. ಈ ಪ್ಲೇಯರ್ಸ್ ಪ್ರತಿ ಸೀಸನ್ನಲ್ಲೂ ಅವರು ಸ್ಥಿರ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
2/ 12
ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್ಗಳಿಗೆ ನಡುಕ ಹುಟ್ಟಿಸಿ ಐಪಿಎಲ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಹೀಗೆ ಕಳೆದ 13 ಸೀಸನ್ಗಳಲ್ಲೂ ರನ್ ಮಳೆ ಸುರಿಸಿದ ಟಾಪ್ 5 ಬ್ಯಾಟ್ಸ್ಮನ್ಗಳ ಪಟ್ಟಿ ಇಲ್ಲಿದೆ.
3/ 12
5- ಶಿಖರ್ ಧವನ್:
4/ 12
ಐಪಿಎಲ್ನಲ್ಲಿ ಶಿಖರ್ ಧವನ್ ಇದುವರೆಗೂ 176 ಪಂದ್ಯಗಳನ್ನು ಆಡಿದ್ದಾರೆ. ಸಾಕಷ್ಟು ರನ್ ಪೇರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರೂ ಗಬ್ಬರ್ ಸಿಂಗ್ ಬ್ಯಾಟ್ನಿಂದ ಶತಕ ಮಾತ್ರ ಮೂಡಿಬಂದಿಲ್ಲ. ಆದರೂ 41 ಅರ್ಧಶತಕದೊಂದಿಗೆ 5197 ರನ್ ಪೇರಿಸಿ ಟಾಪ್ 5 ರನ್ ಸರದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
5/ 12
4- ರೋಹಿತ್ ಶರ್ಮಾ
6/ 12
200 ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ ಐಪಿಎಲ್ನಲ್ಲಿ ಒಂದು ಶತಕ ಹಾಗೂ 39 ಅರ್ಧಶತಕ ಬಾರಿಸಿದ್ದಾರೆ. ಇದರೊಂದಿಗೆ ಹಿಟ್ಮ್ಯಾನ್ ಬ್ಯಾಟ್ನಿಂದ ಒಟ್ಟಾರೆ ಮೂಡಿಬಂದಿರುವುದು 5230 ರನ್ಗಳು.
7/ 12
3- ಡೇವಿಡ್ ವಾರ್ನರ್:
8/ 12
ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಐಪಿಎಲ್ನಲ್ಲಿ ಇದುವರೆಗೂ 142 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 4 ಶತಕ ಮತ್ತು 48 ಅರ್ಧಶತಕಗಳೊಂದಿಗೆ 5254 ರನ್ ಕಲೆಹಾಕಿದ್ದಾರೆ. ಈ ಮೂಲಕ ರನ್ ಸರದಾರರ ಪಟ್ಟಿಯಲ್ಲಿ 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
9/ 12
2- ಸುರೇಶ್ ರೈನಾ:
10/ 12
ಐಪಿಎಲ್ನಲ್ಲಿ 1 ಶತಕ ಮತ್ತು 38 ಅರ್ಧಶತಕ ಬಾರಿಸಿರುವ ಸುರೇಶ್ ರೈನಾ 193 ಪಂದ್ಯಗಳಿಂದ ಪೇರಿಸಿರುವುದು ಬರೋಬ್ಬರಿ 5368 ರನ್ಗಳು. ಈ ಮೂಲಕ ಐಪಿಎಲ್ ರನ್ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದ್ದಾರೆ.
11/ 12
1- ವಿರಾಟ್ ಕೊಹ್ಲಿ:
12/ 12
ಐಪಿಎಲ್ನಲ್ಲಿ 192 ಪಂದ್ಯಗಳನ್ನಾಡಿರುವ ರನ್ ಮಿಷನ್, ಇಲ್ಲೂ ಕೂಡ ಅತೀ ಹೆಚ್ಚು ರನ್ ಬಾರಿಸಿ ತಮ್ಮ ಬ್ಯಾಟಿಂಗ್ ಚಾಕಚಕ್ಯತೆ ಮೆರೆದಿದ್ದಾರೆ. 5 ಶತಕ ಮತ್ತು 39 ಅರ್ಧಶತಕಗಳೊಂದಿಗೆ ಕೊಹ್ಲಿ ಗಳಿಸಿರುವುದು ಒಟ್ಟು 5878 ರನ್ಗಳು. ಹಾಗೆಯೇ ರನ್ ಸರದಾರರ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ ಕೊಹ್ಲಿ.