IPL 2021: ರಾಜಸ್ಥಾನ್ ರಾಯಲ್ಸ್​ನಿಂದ ಮಹತ್ವದ ನಿರ್ಧಾರ: ಸ್ಟಾರ್ ಆಟಗಾರನಿಗೆ ಗೇಟ್ ಪಾಸ್, ತಂಡಕ್ಕೆ ಹೊಸ ನಾಯಕ

Steve Smith: ಐಪಿಎಲ್ 2021 ರಲ್ಲಿ ರಾಜಸ್ಥಾನ್ ರಾಯಲ್ಸ್​ ಫ್ರಾಂಚೈಸಿ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. ನಾಯಕನಾಗಿರುವ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್ ಸ್ಟೀವ್ ಸ್ಮಿತ್ ಅವರನ್ನು ತಂಡದಿಂದ ಕೈಬಿಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

First published:

  • 112

    IPL 2021: ರಾಜಸ್ಥಾನ್ ರಾಯಲ್ಸ್​ನಿಂದ ಮಹತ್ವದ ನಿರ್ಧಾರ: ಸ್ಟಾರ್ ಆಟಗಾರನಿಗೆ ಗೇಟ್ ಪಾಸ್, ತಂಡಕ್ಕೆ ಹೊಸ ನಾಯಕ

    ರಾಜಸ್ಥಾನ್ ರಾಯಲ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿದ್ದು ಬಿಟ್ಟರೆ ನಂತರದಲ್ಲಿ ಅಷ್ಟೇನು ಪರಿಣಾಮಕಾರಿ ತಂಡವಾಗಿ ಹೊರಹೊಮ್ಮಲಿಲ್ಲ. ವಿಶ್ವಶ್ರೇಷ್ಠ ಆಟಗಾರರು ತಂಡದಲ್ಲಿ ಆಡಿದ್ದರೂ ಸಂಘಟಿತ ಪ್ರದರ್ಶನ ಬಂದಿರಲಿಲ್ಲ.

    MORE
    GALLERIES

  • 212

    IPL 2021: ರಾಜಸ್ಥಾನ್ ರಾಯಲ್ಸ್​ನಿಂದ ಮಹತ್ವದ ನಿರ್ಧಾರ: ಸ್ಟಾರ್ ಆಟಗಾರನಿಗೆ ಗೇಟ್ ಪಾಸ್, ತಂಡಕ್ಕೆ ಹೊಸ ನಾಯಕ

    ಸದ್ಯ ಮುಂಬರುವ ಐಪಿಎಲ್ 2021 ರಲ್ಲಿ ಆರ್​ಆರ್​ ಫ್ರಾಂಚೈಸಿ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. ಏನದು..?

    MORE
    GALLERIES

  • 312

    IPL 2021: ರಾಜಸ್ಥಾನ್ ರಾಯಲ್ಸ್​ನಿಂದ ಮಹತ್ವದ ನಿರ್ಧಾರ: ಸ್ಟಾರ್ ಆಟಗಾರನಿಗೆ ಗೇಟ್ ಪಾಸ್, ತಂಡಕ್ಕೆ ಹೊಸ ನಾಯಕ

    ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿರುವ ಆಸ್ಟ್ರೇಲಿಯಾ ಸ್ಟಾರ್ ಬ್ಯಾಟ್ಸ್​ಮನ್ ಸ್ಟೀವ್ ಸ್ಮಿತ್ ಅವರನ್ನು ಫ್ರಾಂಚೈಸಿ ಕೈಬಿಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಈ ದಿಢೀರ್ ನಿರ್ಧಾರಕ್ಕೆ ಕಾರಣ ಕೂಡ ಇದೆ.

    MORE
    GALLERIES

  • 412

    IPL 2021: ರಾಜಸ್ಥಾನ್ ರಾಯಲ್ಸ್​ನಿಂದ ಮಹತ್ವದ ನಿರ್ಧಾರ: ಸ್ಟಾರ್ ಆಟಗಾರನಿಗೆ ಗೇಟ್ ಪಾಸ್, ತಂಡಕ್ಕೆ ಹೊಸ ನಾಯಕ

    ಹೌದು, ಸೋಮವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ಅಂತ್ಯಕಂಡ ಭಾರತ – ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಸಾಕಷ್ಟು ಚರ್ಚೆಗೆ ಎಡೆಮಾಡಿ ಕೊಟ್ಟಿತು. ಯಾಕಂದ್ರೆ ಸ್ಟೀವ್ ಸ್ಮಿತ್ ಅವರ ಮೋಸದಾಟ.

    MORE
    GALLERIES

  • 512

    IPL 2021: ರಾಜಸ್ಥಾನ್ ರಾಯಲ್ಸ್​ನಿಂದ ಮಹತ್ವದ ನಿರ್ಧಾರ: ಸ್ಟಾರ್ ಆಟಗಾರನಿಗೆ ಗೇಟ್ ಪಾಸ್, ತಂಡಕ್ಕೆ ಹೊಸ ನಾಯಕ

    ಮೂರನೇ ಟೆಸ್ಟ್​ನ ಅಂತಿಮ ದಿನದ ಮೊದಲ ಸೆಷನ್ನ ಡ್ರಿಂಗ್ಸ್ ಬ್ರೇಕ್ ನಂತರ ಪಂದ್ಯ ಆರಂಭವಾಗುವುದಕ್ಕೂ ಮೊದಲು ಫೀಲ್ಡಿಂಗ್ ಮಾಡುತ್ತಿದ್ದ ಸ್ಟೀವ್ ಸ್ಮಿತ್ ಬ್ಯಾಟ್ಸ್​ಮನ್​ಗಳ ಗಾರ್ಡ್ ಅಳಿಸಿ ಹಾಕಿ ಮೋಸ ಮಾಡಿದ್ದಾರೆ. ಇದರ ವಿಡಿಯೋ ಕೂಡ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.

    MORE
    GALLERIES

  • 612

    IPL 2021: ರಾಜಸ್ಥಾನ್ ರಾಯಲ್ಸ್​ನಿಂದ ಮಹತ್ವದ ನಿರ್ಧಾರ: ಸ್ಟಾರ್ ಆಟಗಾರನಿಗೆ ಗೇಟ್ ಪಾಸ್, ತಂಡಕ್ಕೆ ಹೊಸ ನಾಯಕ

    ಟೆಸ್ಟ್ ಕ್ರಿಕೆಟ್​ನಲ್ಲಿ ಬ್ಯಾಟ್ಸ್​ಮನ್ ತನ್ನ ವಿಕೆಟ್ ಉಳಿಸಿಕೊಳ್ಳಲು ಲೆಗ್ ಮತ್ತು ಮಿಡ್ಲ್ ಸ್ಟಂಪ್​ನ ಗಾರ್ಡ್ ತೆಗೆದುಕೊಂಡಿರುತ್ತಾರೆ. ಇದು ಚೆಂಡು ಯಾವ ನೇರದಲ್ಲಿ ಬರುತ್ತಿದೆ ಎಂಬುದನ್ನು ಅರಿತು ತಮ್ಮ ಆಫ್ ಸ್ಟಂಪ್ ಉಳಿಸಿಕೊಳ್ಳಲು ಬ್ಯಾಟ್ಸ್​ಮನ್​ಗಳಿಗೆ ನೆರವಾಗುತ್ತದೆ.

    MORE
    GALLERIES

  • 712

    IPL 2021: ರಾಜಸ್ಥಾನ್ ರಾಯಲ್ಸ್​ನಿಂದ ಮಹತ್ವದ ನಿರ್ಧಾರ: ಸ್ಟಾರ್ ಆಟಗಾರನಿಗೆ ಗೇಟ್ ಪಾಸ್, ತಂಡಕ್ಕೆ ಹೊಸ ನಾಯಕ

    ಆದರೆ ರಿಷಭ್ ಪಂತ್ ತೆಗೆದುಕೊಂಡಿದ್ದ ಗಾರ್ಡ್ ಅನ್ನು ತಮಗೇನೂ ಗೊತ್ತೇ ಇಲ್ಲ ಎಂಬ ರೀತಿ ನಟಿಸಿ ಅದನ್ನು ತಮ್ಮ ಶೂ ನಿಂದ ಉಜ್ಜಿ ಸ್ಮಿತ್ ಅಳಿಸಿ ಹಾಕುತ್ತಿರುವುದು ಸ್ಟಂಪ್ ಮೈಕ್​ನಲ್ಲಿ ರೆಕಾರ್ಡ್ ಆಗಿತ್ತು.

    MORE
    GALLERIES

  • 812

    IPL 2021: ರಾಜಸ್ಥಾನ್ ರಾಯಲ್ಸ್​ನಿಂದ ಮಹತ್ವದ ನಿರ್ಧಾರ: ಸ್ಟಾರ್ ಆಟಗಾರನಿಗೆ ಗೇಟ್ ಪಾಸ್, ತಂಡಕ್ಕೆ ಹೊಸ ನಾಯಕ

    ಸ್ಮಿತ್ ಅವರ ಈ ಮೋಸದಾಟಕ್ಕೆ ಅನೇಕರು ಕಿಡಿ ಕಾರಿದ್ದರು. ಟೀಂ ಇಂಡಿಯಾ ಮಾಜಿ ಆಟಗಾರರು ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದರು.

    MORE
    GALLERIES

  • 912

    IPL 2021: ರಾಜಸ್ಥಾನ್ ರಾಯಲ್ಸ್​ನಿಂದ ಮಹತ್ವದ ನಿರ್ಧಾರ: ಸ್ಟಾರ್ ಆಟಗಾರನಿಗೆ ಗೇಟ್ ಪಾಸ್, ತಂಡಕ್ಕೆ ಹೊಸ ನಾಯಕ

    ಸದ್ಯ ಇದರಿಂದ ಎಚ್ಚೆತ್ತುಕೊಂಡಿರುವ ರಾಜಸ್ಥಾನ್ ರಾಯಲ್ಸ್ ಸ್ಮಿತ್ ಅವರನ್ನು ಐಪಿಎಲ್ 2021 ರಿಂದ ತಂಡದಿಂದ ಕೈಬಿಡಲು ಮುಂದಾಗಿದೆ. ಅಲ್ಲದೆ ನಾಯಕನ ಪಟ್ಟ ಸಂಜು ಸ್ಯಾಮ್ಸನ್​ಗೆ ನೀಡುವುದರ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ.

    MORE
    GALLERIES

  • 1012

    IPL 2021: ರಾಜಸ್ಥಾನ್ ರಾಯಲ್ಸ್​ನಿಂದ ಮಹತ್ವದ ನಿರ್ಧಾರ: ಸ್ಟಾರ್ ಆಟಗಾರನಿಗೆ ಗೇಟ್ ಪಾಸ್, ತಂಡಕ್ಕೆ ಹೊಸ ನಾಯಕ

    ಸಂಜು ಸ್ಯಾಮ್ಸನ್ ಸದ್ಯ ಸಾಗುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ-20 ಟ್ರೋಫಿಯಲ್ಲಿ ಕೇರಳ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ.

    MORE
    GALLERIES

  • 1112

    IPL 2021: ರಾಜಸ್ಥಾನ್ ರಾಯಲ್ಸ್​ನಿಂದ ಮಹತ್ವದ ನಿರ್ಧಾರ: ಸ್ಟಾರ್ ಆಟಗಾರನಿಗೆ ಗೇಟ್ ಪಾಸ್, ತಂಡಕ್ಕೆ ಹೊಸ ನಾಯಕ

    ಬಿಸಿಸಿಐ ಈಗಾಗಲೇ ಎಲ್ಲ ಫ್ರಾಂಚೈಸಿಗೆ ಜನವರಿ 21ರ ಒಳಗೆ ತಮ್ಮ ಆಟಗಾರರ ಪಟ್ಟಿ ಬಿಡುಗಡೆ ಮಾಡುವಂತೆ ತಿಳಿಸಿದೆ. ಅಂದರೆ ಇನ್ನು ಎರಡು ವಾರದೊಳಗೆ ಯಾರನ್ನು ತಂಡದಲ್ಲಿ ಉಳಿಸಿಕೊಳ್ಳುತ್ತೇವೆ. ಯಾರನ್ನು ಬಿಡುಗಡೆ ಮಾಡುತ್ತೇವೆ ಎಂಬುದನ್ನು ತಿಳಿಸಬೇಕಾಗುತ್ತದೆ ಎಂದು ವರದಿಯಾಗಿದೆ.

    MORE
    GALLERIES

  • 1212

    IPL 2021: ರಾಜಸ್ಥಾನ್ ರಾಯಲ್ಸ್​ನಿಂದ ಮಹತ್ವದ ನಿರ್ಧಾರ: ಸ್ಟಾರ್ ಆಟಗಾರನಿಗೆ ಗೇಟ್ ಪಾಸ್, ತಂಡಕ್ಕೆ ಹೊಸ ನಾಯಕ

    ಇದಾದ ಬಳಿಕ ಮಿನಿ ಹರಾಜು ನಡೆಯಲಿದೆ. ಬಿಸಿಸಿಐ ಮೂಲಗಳ ಪ್ರಕಾರ ಫೆಬ್ರವರಿ 11 ರಂದು ಹರಾಜು ಪ್ರಕ್ರಿಯೆಗೆ ವೇದಿಕೆ ರೂಪಿಸಲು ತಾತ್ಕಾಲಿಕ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ.

    MORE
    GALLERIES