ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿ ಆರಂಭಕ್ಕೆ ಇನ್ನೇನು ಕೆಲವೇ ತಿಂಗಳುಗಳು ಬಾಕಿಯುಳಿದಿವೆ. ಇದೇ ಫೆಬ್ರವರಿ 18 ರಂದು ಚೆನ್ನೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಎಲ್ಲ ಫ್ರಾಂಚೈಸಿ ಭರ್ಜರಿ ಸಿದ್ಧತೆಯಲ್ಲಿವೆ.
2/ 12
ಹೀಗಿರುವಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತನ್ನ ತಂಡದಲ್ಲಿ ಮೇಜರ್ ಸರ್ಜರಿಯೊಂದನ್ನ ಮಾಡಿದೆ. ಕೊಹ್ಲಿ ತಂಡಕ್ಕೆ ಹೊಸ ಸದಸ್ಯನ ಆಗಮನವಾಗಿದೆ.
3/ 12
ಕಳೆದ ಸೀಸನ್ ನಲ್ಲಿ ಕೊಹ್ಲಿ ಪಡೆ ಪ್ಲೇಆಫ್ಗೆ ಪ್ರವೇಶಿಸಿತ್ತಾದರೂ ಫೈನಲ್ಗೆ ಅರ್ಹತೆ ಗಿಟ್ಟಿಸುವಲ್ಲಿ ವಿಫಲವಾಗಿತ್ತು. ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
4/ 12
ಆದರೆ, ಈ ಬಾರಿ ಆರ್ಸಿಬಿ ಫ್ರಾಂಚೈಸಿ ಟೀಂ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರನ್ನು 2021ರ ಐಪಿಎಲ್ಗೂ ಮುನ್ನ ಬ್ಯಾಟಿಂಗ್ ಸಲಹೆಗಾರನನ್ನಾಗಿ ನೇಮಕ ಮಾಡಿದೆ.
5/ 12
ಬಂಗಾರ್ ಭಾರತ ರಾಷ್ಟ್ರೀಯ ತಂಡ ಹಾಗೂ ಐಪಿಎಲ್ನಲ್ಲೂ ಕೆಲವು ತಂಡದಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದು, ಅಪಾರ ಅನುಭವವನ್ನು ಹೊಂದಿದ್ದಾರೆ.
6/ 12
ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯಲ್ಲಿರುವ ಬ್ಯಾಟಿಂಗ್ ಹಾಗೂ ಸ್ಪಿನ್ ಬೌಲಿಂಗ್ ಕೋಚ್ ಶ್ರೀದರನ್ ಶ್ರೀರಾಮ್ ಹಾಗೂ ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ಅವರ ಜೊತೆ 2021ರ ಐಪಿಎಲ್ನಲ್ಲಿ ಕೋಚಿಂಗ್ ಸಿಬ್ಬಂದಿಯಾಗಿ ಸೇರಿಕೊಳ್ಳಲಿದ್ದಾರೆ.
7/ 12
ಈ ಬಗ್ಗೆ ಆರ್ಸಿಬಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. 'ಬ್ಯಾಟಿಂಗ್ ಸಲಹೆಗಾರರಾಗಿ ಸಂಜಯ್ ಬಂಗಾರ್ ಅವರನ್ನು ಆರ್ಸಿಬಿ ಕುಟುಂಬಕ್ಕೆ ಬರ ಮಾಡಿಕೊಳ್ಳಲು ನಮಗೆ ಸಂತಸವಾಗುತ್ತಿದೆ,' ಎಂದು ಟ್ವೀಟ್ನಲ್ಲಿ ಬರೆದುಕೊಂಡಿದೆ.
8/ 12
ಇನ್ನೂ ತಂಡದಲ್ಲಿ ಬಂಗಾರ್ ಪಾತ್ರದ ಬಗ್ಗೆ ಮಾತನಾಡಿರುವ ಮೈಕ್ ಹೆಸನ್, " 48 ವರ್ಷದ ಬಂಗಾರ್ ಐಪಿಎಲ್ ಪೂರ್ವ ಶಿಬಿರಗಳಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಶಿಬಿರಗಳಲ್ಲಿ ಸಂಪೂರ್ಣ ತಂಡದ ಬ್ಯಾಟಿಂಗ್ ಸಲಹೆಗಾರನಾಗಿ ಬಂಗಾರ್ ತಂಡದೊಂದಿಗೆ ಕೆಲಸ ಮಾಡಲಿದ್ದಾರೆ" ಎಂದು ತಿಳಿಸಿದ್ದಾರೆ.
9/ 12
ಬ್ಯಾಟಿಂಗ್ ಆಲ್ ರೌಂಡರ್ ಆಗಿದ್ದ ಬಂಗಾರ್, ಭಾರತದ ಪರ 12 ಟೆಸ್ಟ್ನಲ್ಲಿ 470 ರನ್, 7 ವಿಕೆಟ್ಗಳು, 15 ಏಕದಿನ ಪಂದ್ಯಗಳಲ್ಲಿ 180 ರನ್, 7 ವಿಕೆಟ್ ಪಡೆದಿದ್ದಾರೆ.
10/ 12
ಭಾರತ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿದ್ದ ಬಂಗಾರ್ ಬ್ಯಾಟಿಂಗ್ ಸಲಹೆಗಾರರಾಗಿ ಆಯ್ಕೆಯಾಗಿರುವುದರಿಂದ ಆರ್ಸಿಬಿ ಈ ಬಾರಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.
11/ 12
ಹರಾಜಿಗೂ ಮುನ್ನ ಆರ್ಸಿಬಿ ಫ್ರಾಂಚೈಸಿ ಕಳೆದ ಸೀಸನ್ನಲ್ಲಿ ಕಳಪೆ ಪ್ರದರ್ಶನ ತೋರಿದ ಒಟ್ಟು 10 ಆಟಗಾರರನ್ನು ಕೈಬಿಟ್ಟಿದೆ.
12/ 12
ಕ್ರಿಸ್ ಮೋರಿಸ್, ಆರೋನ್ ಫಿಂಚ್, ಮೊಯೀನ್ ಅಲಿ, ಇಸುರು ಉದಾನಾ, ಡೇಲ್ ಸ್ಟೇನ್, ಶಿವಂ ದುಬೆ, ಉಮೇಶ್ ಯಾದವ್, ಪವನ್ ನೇಗಿ, ಗುರ್ಕೀರತ್ ಮನ್, ಪಾರ್ಥಿವ್ ಪಟೇಲ್ ಅವರನ್ನು ತಂಡದಿಂದ ರಿಲೀಸ್ ಮಾಡಿದೆ.