IPL ನಲ್ಲಿ 500ಕ್ಕೂ ಅಧಿಕ ಬೌಂಡರಿ ಬಾರಿಸಿದ ಬ್ಯಾಟ್ಸ್​ಮನ್​ ಪಟ್ಟಿ ಹೀಗಿದೆ..!

ಐಪಿಎಲ್​ನಲ್ಲಿ 500ಕ್ಕೂ ಅಧಿಕ ಬೌಂಡರಿ ಬಾರಿಸಿರುವುದು ಮೂವರು ಆಟಗಾರರು. ಅದರಲ್ಲಿ ಇಬ್ಬರು ಭಾರತೀಯ ಬ್ಯಾಟ್ಸ್​ಮನ್ಸ್​ ಎಂಬುದು ವಿಶೇಷ. ಹಾಗಿದ್ರೆ ಐಪಿಎಲ್​ನಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಆಟಗಾರರ ಟಾಪ್ 5 ಪಟ್ಟಿ ಈ ಕೆಳಗಿನಂತಿವೆ.

First published:

  • 18

    IPL ನಲ್ಲಿ 500ಕ್ಕೂ ಅಧಿಕ ಬೌಂಡರಿ ಬಾರಿಸಿದ ಬ್ಯಾಟ್ಸ್​ಮನ್​ ಪಟ್ಟಿ ಹೀಗಿದೆ..!

    ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ನಾನಾ ದಾಖಲೆಗಳು ಮೂಡಿಬಂದಿವೆ. ಕಳೆದ 12 ಸೀಸನ್​ಗಳಲ್ಲಿ 5 ಸಾವಿರಕ್ಕೂ ಅಧಿಕ ರನ್ ಬಾರಿಸಿ ವಿರಾಟ್ ಕೊಹ್ಲಿ ರನ್ ಸರದಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ರೆ, ಗರಿಷ್ಠ 175 ರನ್ ಬಾರಿಸುವ ಮೂಲಕ ಕ್ರಿಸ್ ಗೇಲ್ ಐಪಿಎಲ್​ನಲ್ಲಿ ಇತಿಹಾಸ ರಚಿಸಿದ್ದಾರೆ.

    MORE
    GALLERIES

  • 28

    IPL ನಲ್ಲಿ 500ಕ್ಕೂ ಅಧಿಕ ಬೌಂಡರಿ ಬಾರಿಸಿದ ಬ್ಯಾಟ್ಸ್​ಮನ್​ ಪಟ್ಟಿ ಹೀಗಿದೆ..!

    ಇನ್ನು ಸಿಕ್ಸರ್ ಸುರಿಮಳೆ ಮೂಲಕ ಕೂಡ ಐಪಿಎಲ್ ದಾಖಲೆ ಬರೆದಿರುವುದು ಕೂಡ ಕ್ರಿಸ್ ಗೇಲ್. ಆದರೆ ಬೌಂಡರಿ ವಿಚಾರದಲ್ಲಿ ಮಾತ್ರ ಟೀಮ್ ಇಂಡಿಯಾದ ಈ ಆಟಗಾರ ಬಳಿಗೂ ಗೇಲ್​ ಸುಳಿದಿಲ್ಲ ಎಂಬುದು ವಿಶೇಷ.

    MORE
    GALLERIES

  • 38

    IPL ನಲ್ಲಿ 500ಕ್ಕೂ ಅಧಿಕ ಬೌಂಡರಿ ಬಾರಿಸಿದ ಬ್ಯಾಟ್ಸ್​ಮನ್​ ಪಟ್ಟಿ ಹೀಗಿದೆ..!

    ಹೌದು, ಐಪಿಎಲ್​ನಲ್ಲಿ 500ಕ್ಕೂ ಅಧಿಕ ಬೌಂಡರಿ ಬಾರಿಸಿರುವುದು ಮೂವರು ಆಟಗಾರರು. ಅದರಲ್ಲಿ ಇಬ್ಬರು ಭಾರತೀಯ ಬ್ಯಾಟ್ಸ್​ಮನ್ಸ್​ ಎಂಬುದು ವಿಶೇಷ. ಹಾಗಿದ್ರೆ ಐಪಿಎಲ್​ನಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ಆಟಗಾರರ ಟಾಪ್ 5 ಪಟ್ಟಿ ನೋಡೋಣ...

    MORE
    GALLERIES

  • 48

    IPL ನಲ್ಲಿ 500ಕ್ಕೂ ಅಧಿಕ ಬೌಂಡರಿ ಬಾರಿಸಿದ ಬ್ಯಾಟ್ಸ್​ಮನ್​ ಪಟ್ಟಿ ಹೀಗಿದೆ..!

    5- ಗೌತಮ್ ಗಂಭೀರ್: ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಐಪಿಎಲ್​ನಲ್ಲಿ 154 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ ಗೌತಿ ಬ್ಯಾಟ್​ನಿಂದ ಸಿಡಿದದ್ದು ಬರೋಬ್ಬರಿ 491 ಬೌಂಡರಿಗಳು ಎಂಬುದು ವಿಶೇಷ.

    MORE
    GALLERIES

  • 58

    IPL ನಲ್ಲಿ 500ಕ್ಕೂ ಅಧಿಕ ಬೌಂಡರಿ ಬಾರಿಸಿದ ಬ್ಯಾಟ್ಸ್​ಮನ್​ ಪಟ್ಟಿ ಹೀಗಿದೆ..!

    4- ಸುರೇಶ್ ರೈನಾ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್​ ರೈನಾ ಐಪಿಎಲ್​ನಲ್ಲಿ ಇದುವರೆಗೆ 193 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ 493 ಫೋರ್​ಳನ್ನು ಬಾರಿಸುವ ಮೂಲಕ ಈ ಪಟ್ಟಿಯಲ್ಲಿ  4ನೇ ಸ್ಥಾನದಲ್ಲಿದ್ದಾರೆ.

    MORE
    GALLERIES

  • 68

    IPL ನಲ್ಲಿ 500ಕ್ಕೂ ಅಧಿಕ ಬೌಂಡರಿ ಬಾರಿಸಿದ ಬ್ಯಾಟ್ಸ್​ಮನ್​ ಪಟ್ಟಿ ಹೀಗಿದೆ..!

    3- ವಿರಾಟ್ ಕೊಹ್ಲಿ: ಐಪಿಎಲ್​ನಲ್ಲಿ 192 ಪಂದ್ಯಗಳನ್ನಾಡಿರುವ ಆರ್​ಸಿಬಿ ನಾಯಕ ಕೊಹ್ಲಿ 503 ಫೋರ್ ಬಾರಿಸಿ ಈ ದಾಖಲೆ ಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿದ್ದಾರೆ.

    MORE
    GALLERIES

  • 78

    IPL ನಲ್ಲಿ 500ಕ್ಕೂ ಅಧಿಕ ಬೌಂಡರಿ ಬಾರಿಸಿದ ಬ್ಯಾಟ್ಸ್​ಮನ್​ ಪಟ್ಟಿ ಹೀಗಿದೆ..!

    2- ಡೇವಿಡ್ ವಾರ್ನರ್: ಐಪಿಎಲ್​ನಲ್ಲಿ 142 ಪಂದ್ಯಗಳನ್ನಾಡಿರುವ ಡೇವಿಡ್ ವಾರ್ನರ್ 510 ಬೌಂಡರಿ ಬಾರಿಸಿ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

    MORE
    GALLERIES

  • 88

    IPL ನಲ್ಲಿ 500ಕ್ಕೂ ಅಧಿಕ ಬೌಂಡರಿ ಬಾರಿಸಿದ ಬ್ಯಾಟ್ಸ್​ಮನ್​ ಪಟ್ಟಿ ಹೀಗಿದೆ..!

    1- ಶಿಖರ್ ಧವನ್: ಐಪಿಎಲ್​ನಲ್ಲಿ 176 ಪಂದ್ಯಗಳನ್ನಾಡಿರುವ ಶಿಖರ್ ಧವನ್ ಇದುವರೆಗೆ  5197 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 41 ಅರ್ಧಶತಕಗಳೊಂದಿಗೆ ಧವನ್ ಬ್ಯಾಟ್​ನಿಂದ ಸಿಡಿದದ್ದು ಬರೋಬ್ಬರಿ 591 ಫೋರ್​ಗಳು. ಇದು ಕಳೆದ 13 ಸೀಸನ್​ಗಳಲ್ಲಿ ಬ್ಯಾಟ್ಸ್​ಮನ್​ ಒಬ್ಬರು ಸಿಡಿಸಿದ ಅತ್ಯಧಿಕ ಬೌಂಡರಿ ದಾಖಲೆಯಾಗಿದೆ.

    MORE
    GALLERIES