2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಬಿಸಿಸಿಐನಿಂದ ನಿಷೇಧಕ್ಕೊಳಗಾಗಿದ್ದ ವೇಗಿ ಎಸ್ ಶ್ರೀಶಾಂತ್, ಇದೀಗ ಮತ್ತೆ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಇತ್ತ ಶ್ರೀಗೆ ಕೋರ್ಟ್ ಕ್ಲೀನ್ ಚಿಟ್ ನೀಡಿದ ಬಳಿಕ ಬಿಸಿಸಿಐ ಶಿಕ್ಷೆ ಕಡಿತಗೊಳಿಸಿತ್ತು.
2/ 9
ಇದೀಗ ಸೈಯದ್ ಮುಷ್ತಾಕ್ ಆಲಿ ಟೂರ್ನಿ ಮೂಲಕ 7 ವರ್ಷಗಳ ಬಳಿಕ ಶ್ರೀಶಾಂತ್ ಕ್ರಿಕೆಟ್ಗೆ ಮರಳುತ್ತಿದ್ದಾರೆ. ಇದರ ಬೆನ್ನಲ್ಲೇ ಶ್ರೀಶಾಂತ್ ಮುಂದಿ ಐಪಿಎಲ್ ಟೂರ್ನಿ ಆಡೋ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
3/ 9
ಮುಂದಿನ ವರ್ಷದ 2021ನೇ ಐಪಿಎಲ್ ಟೂರ್ನಿಯಲ್ಲೂ ಅವರು ಕಣಕ್ಕಿಳಿಯುವ ನಿರೀಕ್ಷೆ ಇದೆ. ಹೀಗಾಗಿ, ವಿವಿಧ ಐಪಿಎಲ್ ತಂಡಗಳು ತಮ್ಮನ್ನು ಸಂಪರ್ಕಿಸುತ್ತಿವೆ ಎಂದು 37 ವರ್ಷದ ಶ್ರೀಶಾಂತ್ ಹೇಳಿಕೊಂಡಿದ್ದಾರೆ.
4/ 9
ಎಸ್. ಶ್ರೀಶಾಂತ್ 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ 7 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಈ ನಿಷೇಧ ಕಳೆದ ಸೆಪ್ಟೆಂಬರ್ನಲ್ಲಿ ಕೊನೆಗೊಂಡಿತ್ತು. ಮುಂದಿನ ವರ್ಷದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಗೆ ಅವರು ಈಗಾಗಲೆ ಕೇರಳ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
5/ 9
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮಾತ್ರವಲ್ಲದೆ ರಣಜಿ-ಇರಾನಿ ಟ್ರೋಫಿಗಳಲ್ಲಿ ಆಡುವುದನ್ನೂ ನಾನು ಎದುರು ನೋಡುತ್ತಿದ್ದೇನೆ ಎಂದು ಶ್ರೀಶಾಂತ್ ಹೇಳಿದ್ದಾರೆ.
6/ 9
ನಾನು ಉತ್ತಮ ನಿರ್ವಹಣೆ ತೋರಿದಲ್ಲಿ ಇನ್ನಷ್ಟು ಅವಕಾಶಗಳು ಒದಗಿ ಬರಲಿವೆ. ಐಪಿಎಲ್ನ ವಿವಿಧ ತಂಡಗಳಿಂದಲೂ ನನ್ನನ್ನು ಸಂಪರ್ಕಿಸಲಾಗುತ್ತಿದೆ. ನಾನು ಫಿಟ್ ಆಗಿದ್ದರೆ, ಉತ್ತಮ ಬೌಲಿಂಗ್ ಮಾಡುವ ವಿಶ್ವಾಸವಿದೆ ಎಂದು ಶ್ರೀಶಾಂತ್ ಹೇಳಿದ್ದಾರೆ.
7/ 9
ನಿಷೇಧದಿಂದಾಗಿ ಕ್ರಿಕೆಟ್ ಆಡದಿದ್ದ ಸಂದರ್ಭ ಬಾಲಿವುಡ್ ಸಹಿತ ಹಲವು ಚಿತ್ರರಂಗಗಳಲ್ಲಿ ಶ್ರೀಶಾಂತ್ ನಟಿಸಿದ್ದರು. ಹೀಗಾಗಿ ಅಲ್ಲಿನ ಪಾತ್ರಕ್ಕಾಗಿ ದೇಹತೂಕವನ್ನು ಹೆಚ್ಚಿಸಿಕೊಂಡಿದ್ದರು.
8/ 9
ಬಳಿಕ ನಿಷೇಧ ಮುಕ್ತರಾಗಿ ಕ್ರಿಕೆಟ್ಗೆ ಮರಳುವ ಮುನ್ನ ಸುಮಾರು 20ಕೆಜಿ ದೇಹತೂಕವನ್ನು ಕರಗಿಸಿಕೊಳ್ಳಬೇಕಾಯಿತು ಎಂದು ಶ್ರೀಶಾಂತ್ ಹೇಳಿದ್ದಾರೆ.
9/ 9
2013ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ಶ್ರೀಶಾಂತ್ ಬಳಿಕ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ನಿಷೇಧಕ್ಕೊಳಾಗಿದ್ದರು. ಐಪಿಎಲ್ ಟೂರ್ನಿ 44 ಪಂದ್ಯಗಳಿಂದ ಶ್ರೀಶಾಂತ್ 40 ವಿಕೆಟ್ ಕಬಳಿಸಿದ್ದಾರೆ.