IPL 2021: ಆರ್​ಸಿಬಿಗೆ ಬಿಗ್ ಶಾಕ್: 2021ರ ಐಪಿಎಲ್​ನಲ್ಲಿ ನಾನು ಆಡಲ್ಲ ಎಂದ ಸ್ಟಾರ್ ಆಟಗಾರ

ವಿಶ್ವದ ಶ್ರೇಷ್ಠ ಬೌಲರ್​ಗಳಲ್ಲಿ ಒಬ್ಬರೆನಿಸಿರುವ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ 2021ರ ಐಪಿಎಲ್​ನಿಂದ ಹೊರ ಹೋಗುತ್ತಿದ್ದೇನೆ ಎಂದು ಘೋಷಣೆ ಮಾಡಿದ್ದಾರೆ.

First published:

  • 110

    IPL 2021: ಆರ್​ಸಿಬಿಗೆ ಬಿಗ್ ಶಾಕ್: 2021ರ ಐಪಿಎಲ್​ನಲ್ಲಿ ನಾನು ಆಡಲ್ಲ ಎಂದ ಸ್ಟಾರ್ ಆಟಗಾರ

    ಕಳೆದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟಾಪ್ ನಾಲ್ಕರಲ್ಲಿ ಸ್ಥಾನ ಪಡೆದಿತ್ತು. ಫೈನಲ್​ಗೇರಲು ವಿಫಲವಾದರು ಹಿಂದಿನ ಸೀಸನ್​ಗಿಂತ ಐಪಿಎಲ್ 2020 ರಲ್ಲಿ ಕೊಹ್ಲಿ ಪಡೆ ಹೋರಾಡಿ ಸೋತಿತು.

    MORE
    GALLERIES

  • 210

    IPL 2021: ಆರ್​ಸಿಬಿಗೆ ಬಿಗ್ ಶಾಕ್: 2021ರ ಐಪಿಎಲ್​ನಲ್ಲಿ ನಾನು ಆಡಲ್ಲ ಎಂದ ಸ್ಟಾರ್ ಆಟಗಾರ

    ಸದ್ಯ ಐಪಿಎಲ್ 14ನೇ ಆವೃತ್ತಿಗೆ ಎಲ್ಲ ತಂಡಗಳು ಈಗಾಗಲೇ ಸಿದ್ಧತೆಗಳನ್ನು ನಡೆಸುತ್ತಿವೆ. ಬಿಸಿಸಿಐ ಕೂಡ ಭಾರತದಲ್ಲೇ 2021 ಐಪಿಎಲ್ ಅನ್ನು ಆಯೋಜಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದು, ತಯಾರಿಯಲ್ಲಿದೆ.

    MORE
    GALLERIES

  • 310

    IPL 2021: ಆರ್​ಸಿಬಿಗೆ ಬಿಗ್ ಶಾಕ್: 2021ರ ಐಪಿಎಲ್​ನಲ್ಲಿ ನಾನು ಆಡಲ್ಲ ಎಂದ ಸ್ಟಾರ್ ಆಟಗಾರ

    ಆದರೆ, 2021 ಐಪಿಎಲ್​ನಲ್ಲಿ ಕಪ್ ಗೆಲ್ಲುವ ಪ್ಲ್ಯಾನ್ ಹಾಕಿಕೊಂಡಿರುವ ಆರ್​ಸಿಬಿಗೆ ದೊಡ್ಡ ಆಘಾತ ಉಂಟಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14ನೇ ಐಪಿಎಲ್ ಆರಂಭಕ್ಕೂ ಮುನ್ನವೇ ಸ್ಟಾರ್ ವೇಗಿಯೊಬ್ಬರನ್ನು ಕಳೆದುಕೊಂಡಿದೆ.

    MORE
    GALLERIES

  • 410

    IPL 2021: ಆರ್​ಸಿಬಿಗೆ ಬಿಗ್ ಶಾಕ್: 2021ರ ಐಪಿಎಲ್​ನಲ್ಲಿ ನಾನು ಆಡಲ್ಲ ಎಂದ ಸ್ಟಾರ್ ಆಟಗಾರ

    ಹೌದು, ವಿಶ್ವದ ಶ್ರೇಷ್ಠ ಬೌಲರ್​ಗಳಲ್ಲಿ ಒಬ್ಬರೆನಿಸಿರುವ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ 14ನೇ ಐಪಿಎಲ್​ಗೆ 3 ತಿಂಗಳು ಬಾಕಿ ಇರುವಾಗಲೇ ದೂರ ಸರಿಯುವುದಾಗಿ ಘೋಷಣೆ ಮಾಡಿದ್ದಾರೆ.

    MORE
    GALLERIES

  • 510

    IPL 2021: ಆರ್​ಸಿಬಿಗೆ ಬಿಗ್ ಶಾಕ್: 2021ರ ಐಪಿಎಲ್​ನಲ್ಲಿ ನಾನು ಆಡಲ್ಲ ಎಂದ ಸ್ಟಾರ್ ಆಟಗಾರ

    ಕೇವಲ 2021ರ ಐಪಿಎಲ್​ನಿಂದ ಮಾತ್ರ ಹೊರ ಹೋಗುತ್ತಿದ್ದೇನೆ. ಆದರೆ ಈ ನಿರ್ಧಾರವನ್ನು ಆರ್​ಸಿಬಿ ಅಥವಾ ಕ್ರಿಕೆಟ್ ತ್ಯಜಿಸುತ್ತಿದ್ದೇನೆ ಎಂದು ತಿಳಿದುಕೊಳ್ಳುವ ಅಗತ್ಯವಿಲ್ಲ ಎಂದು ಸ್ಟೇನ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

    MORE
    GALLERIES

  • 610

    IPL 2021: ಆರ್​ಸಿಬಿಗೆ ಬಿಗ್ ಶಾಕ್: 2021ರ ಐಪಿಎಲ್​ನಲ್ಲಿ ನಾನು ಆಡಲ್ಲ ಎಂದ ಸ್ಟಾರ್ ಆಟಗಾರ

    "ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಅಲಭ್ಯನಾಗುತ್ತಿದ್ದೇನೆಂದು ಒಂದು ಸಣ್ಣ ಸಂದೇಶದ ಮೂಲಕ ಪ್ರತಿಯೊಬ್ಬರಿಗೂ ತಿಳಿಸುತ್ತಿದ್ದೇನೆ. ಬೇರೊಂದು ತಂಡಕ್ಕೆ ಆಡುವ ಬಗ್ಗೆಯೂ ನಾನು ಯಾವುದೇ ಪ್ಲ್ಯಾನ್ ಮಾಡುತ್ತಿಲ್ಲ. ಈ ಅವಧಿಯಲ್ಲಿ ಕ್ರಿಕೆಟ್​ನಿಂದ ವಿರಾಮ ಪಡೆಯಲು ಬಯಸುತ್ತಿದ್ದೇನೆ. ನನ್ನ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದಕ್ಕಾಗಿ ಆರ್​ಸಿಬಿಗೆ ಧನ್ಯವಾದ," ಎಂದು ಸ್ಟೇನ್ ಬರೆದಿದ್ದಾರೆ.

    MORE
    GALLERIES

  • 710

    IPL 2021: ಆರ್​ಸಿಬಿಗೆ ಬಿಗ್ ಶಾಕ್: 2021ರ ಐಪಿಎಲ್​ನಲ್ಲಿ ನಾನು ಆಡಲ್ಲ ಎಂದ ಸ್ಟಾರ್ ಆಟಗಾರ

    ಆರ್​ಸಿಬಿ ಫ್ರಾಂಚೈಸಿ ಸ್ಟೇನ್ ಅವರ ಈ ನಿರ್ಧಾರಕ್ಕೆ ಪ್ರತಿಕ್ರಿಯಿಸಿ, ನೆನಪುಗಳಿಗೆ ಧನ್ಯವಾದಗಳು. ನಿಮ್ಮನ್ನು ಮಿಸ್ ಮಾಡಿಕೊಳ್ಳಲಿದ್ದೇವೆ ಡೇಲ್ ಸ್ಟೇನ್! ಎಂದು ಟ್ವೀಟ್ ಮಾಡಿದೆ.

    MORE
    GALLERIES

  • 810

    IPL 2021: ಆರ್​ಸಿಬಿಗೆ ಬಿಗ್ ಶಾಕ್: 2021ರ ಐಪಿಎಲ್​ನಲ್ಲಿ ನಾನು ಆಡಲ್ಲ ಎಂದ ಸ್ಟಾರ್ ಆಟಗಾರ

    2020ರ ಐಪಿಎಲ್​ನಲ್ಲಿ ಆರ್​ಸಿಬಿ ಪರ ಒಂದೆರಡು ಪಂದ್ಯಗಳಲ್ಲಿ ಆಡಿದ್ದ ಸ್ಟೇನ್ ಹೆಚ್ಚು ರನ್ ನೀಡಿದ್ದರು. ಗಮನಾರ್ಹ ಅನ್ನುವಂತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಉಳಿದ ಪಂದ್ಯಗಳಲ್ಲಿ ಸ್ಟೇನ್​ಗೆ ಅವಕಾಶ ನೀಡಿರಲಿಲ್ಲ.

    MORE
    GALLERIES

  • 910

    IPL 2021: ಆರ್​ಸಿಬಿಗೆ ಬಿಗ್ ಶಾಕ್: 2021ರ ಐಪಿಎಲ್​ನಲ್ಲಿ ನಾನು ಆಡಲ್ಲ ಎಂದ ಸ್ಟಾರ್ ಆಟಗಾರ

    ಟೆಸ್ಟ್ ಕ್ರಿಕೆಟ್ ತಂಡಕ್ಕೆ ನಿವೃತ್ತಿ ಘೋಷಿಸಿರುವ ದಕ್ಷಿಣ ಆಫ್ರಿಕಾದ ವೇಗಿ, 439 ವಿಕೆಟ್ ಪಡೆಯುವ ಮೂಲಕ ದೀರ್ಘ ಮಾದರಿಯ ಕ್ರಿಕೆಟ್​ನಲ್ಲಿ ಆಫ್ರಿಕನ್ನರ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅಲ್ಲದೆ ಐಸಿಸಿ ಘೋಷಿಸಿದ ದಶಕದ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದಿದ್ದರು.

    MORE
    GALLERIES

  • 1010

    IPL 2021: ಆರ್​ಸಿಬಿಗೆ ಬಿಗ್ ಶಾಕ್: 2021ರ ಐಪಿಎಲ್​ನಲ್ಲಿ ನಾನು ಆಡಲ್ಲ ಎಂದ ಸ್ಟಾರ್ ಆಟಗಾರ

    37 ವರ್ಷದ ಈ ವೇಗಿ ಐಪಿಎಲ್​ನಲ್ಲಿ ಈವರೆಗೆ ಒಟ್ಟು 95 ಪಂದ್ಯಗಳಿಂದ 97 ವಿಕೆಟ್ ಪಡೆದಿದ್ದಾರೆ.

    MORE
    GALLERIES