ಹೌದು, ಮಿಸ್ಟರ್ ಐಪಿಎಲ್ ಎಂದೇ ಕರೆಸಿಕೊಳ್ಳುವ ಸ್ಟಾರ್ ಬ್ಯಾಟ್ಸ್ಮನ್ ಸುರೇಶ್ ರೈನಾ ಈ ಬಾರಿಯ ಐಪಿಎಲ್ನಿಂದ ವೈಯಕ್ತಿಕ ಕಾರಣ ಹೇಳಿ ಹಿಂದೆ ಸರಿದಿದ್ದರು. ಆದರೆ, ರೈನಾ ಸೂಪರ್ ಕಿಂಗ್ಸ್ ತಂಡದ ಟೀಂ ಮ್ಯಾನೇಜ್ಮೆಂಟ್ ಜೊತೆ ಹೋಟೆಲ್ ರೂಮ್ ವಿಚಾರವಾಗಿ ಗಲಾಟೆ ನಡೆದಿದೆ. ಧೋನಿ ಮತ್ತು ರೈನಾ ನಡುವೆ ವೈಮನಸ್ಸು ಮೂಡಿದೆ. ಹೀಗೆ ಹಲವಾರು ಊಹಾಪೋಹಗಳು ತಲೆಯೆತ್ತಿದ್ದವು.