ಜೋಶ್ ಫಿಲಿಪ್: ಬಿಗ್ಬ್ಯಾಶ್ ಲೀಗ್ನಲ್ಲಿ ಅಬ್ಬರಿಸಿದ್ದ ಜೋಶ್ ಫಿಲಿಪ್ ಐಪಿಎಲ್ನಲ್ಲಿ ಮಂಕಾಗಿ ಹೋದರು. ಮಧ್ಯಮ ಕ್ರಮಾಂಕ ಮತ್ತು ಓಪನರ್ ಆಗಿ ಕಣಕ್ಕಿಳಿದ ಇವರು ನಿಧಾನಗತಿಯಲ್ಲಿ ಬ್ಯಾಟ್ ಬೀಸಿ ಹೊಡಿಬಡಿ ಆಟಕ್ಕೆ ಸೂಕ್ತ ಕೊಡುಗೆ ನೀಡಲಿಲ್ಲ. ಇವರು ಗಳಿಸಿದ್ದು ಕೇವಲ 78 ರನ್ಗಳನ್ನಷ್ಟೆ. ಹೀಗಾಗಿ ಮುಂದಿನ ಸೀಸನ್ನಲ್ಲಿ ಇವರ ಆರ್ಸಿಬಿ ತಂಡದಲ್ಲಿ ಇರುವುದು ಅನುಮಾನ.
ಉಮೇಶ್ ಯಾದವ್: ಆರ್ಸಿಬಿ ತಂಡದ ದುಬಾರಿ ಬೌಲರ್ ಎಂದರೆ ಅದು ಉಮೇಶ್ ಯಾದವ್. ಆಡಿದ ಮೊದಲ ಪಂದ್ಯದಲ್ಲಿ 48 ಹಾಗೂ ಎರಡನೇ ಪಂದ್ಯದಲ್ಲಿ 35 ರನ್ ನೀಡಿದ್ದು ಅಷ್ಟೆ. ಮತ್ತೆ ಪ್ಲೇಯಿಂಗ್ 11ರಲ್ಲಿ ಕಾಣಿಸಲೇ ಇಲ್ಲ. ಭಾರತ ಟೆಸ್ಟ್ ತಂಡದಲ್ಲಿ ಕ್ಲಿಕ್ ಆಗಿರುವ ಯಾದವ್ ಐಪಿಎಲ್ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ. ಹೀಗಾಗಿ ಇವರು ಕೂಡ ಮುಂದಿನ ಸೀಸನ್ಗೆ ಅನುಮಾನ.