#5 ಹಾರ್ಡಸ್ ವಿಲ್ಜೋಯೆನ್: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಈ ಹೆಸರಿನ ಆಟಗಾರರೊಬ್ಬರು ಇದ್ದಾರೆ ಎಂದು ಬಹುತೇಕರಿಗೆ ಗೊತ್ತಿಲ್ಲ. ಕಳೆದ 3 ಸೀಸನ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸಿರುವ ವಿಲ್ಜೋಯೆನ್ 6 ಪಂದ್ಯಗಳನ್ನು ಆಡಿದ್ದಾರೆ. ಆದರೆ ಪಡೆದಿರುವುದು ಕೇವಲ 7 ವಿಕೆಟ್ ಮಾತ್ರ. ಅಷ್ಟೇ ಅಲ್ಲದೆ 9.65 ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಈ ವಿದೇಶಿ ಆಟಗಾರನನ್ನು ಉಳಿಸಿಕೊಳ್ಳುವುದು ಡೌಟ್ ಎನ್ನಬಹುದು.
# 4 ಕರುಣ್ ನಾಯರ್: 2018 ರಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕಾಣಿಸಿಕೊಂಡಿರುವ ಕರುಣ್ ನಾಯರ್ ಪ್ರದರ್ಶನ ಮಾತ್ರ ಹೇಳಿಕೊಳ್ಳುವಂತಿಲ್ಲ. ಆದರೆ ಪಂಜಾಬ್ ಫ್ರಾಂಚೈಸಿ ಕರುಣ್ಗೆ ನೀಡುತ್ತಿರುವುದು ಬರೋಬ್ಬರಿ 5.6 ಕೋಟಿ ರೂ. ಇನ್ನು ಕಳೆದ ಸೀಸನ್ನಲ್ಲಿ 4 ಪಂದ್ಯಗಳಿಂದ ಕಲೆಹಾಕಿದ್ದು 16 ರನ್ ಮಾತ್ರ. ಹೀಗಾಗಿ ನಾಯರ್ ಅನ್ನು ಕಿಂಗ್ಸ್ ಇಲೆವೆನ್ ಕೈ ಬಿಡಲಿದೆ.
#3 ಕ್ರಿಸ್ ಜೋರ್ಡಾನ್: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಡೆತ್ ಬೌಲರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದ ಕ್ರಿಸ್ ಜೋರ್ಡನ್ ಕಳೆದ ಸೀಸನ್ನಲ್ಲಿ ಗಮನ ಸೆಳೆದಿದ್ದರು. ಆದರೆ ಒಟ್ಟಾರೆ ಪ್ರದರ್ಶನ ನೋಡಿದರೆ ಪಂಜಾಬ್ ತಂಡ ಇಂಗ್ಲೆಂಡ್ ಆಟಗಾರನನ್ನು ಉಳಿಸಿಕೊಳ್ಳುವುದು ಅನುಮಾನ. ಏಕೆಂದರೆ ತಂಡದ ಪ್ರಮುಖ ವೇಗಿಯಾಗಿ ಕಾಣಿಸಿಕೊಂಡಿದ್ದರೂ ಕ್ರಿಸ್ ಜೋರ್ಡನ್ ರನ್ ಬಿಟ್ಟುಕೊಟ್ಟಿದ್ದು 9.65 ಸರಾಸರಿಯಲ್ಲಿ. ಐಪಿಎಲ್ನಲ್ಲಿ ದುಬಾರಿ ಎನಿಸಿಕೊಂಡಿರುವ ಜೋರ್ಡನ್ ಅವರನ್ನು ಕೈ ಬಿಟ್ಟು ಅವರ ಸ್ಥಾನದಲ್ಲಿ ಮತ್ತೋರ್ವ ವೇಗಿಯನ್ನು ಖರೀದಿಸಲು ಕಿಂಗ್ಸ್ ಇಲೆವೆನ್ ಫ್ರಾಂಚೈಸಿ ಮುಂದಾಗಲಿದೆ.
#2 ಶೆಲ್ಡನ್ ಕಾಟ್ರೆಲ್: ವೆಸ್ಟ್ ಇಂಡೀಸ್ ತಂಡದ ವೇಗಿ ಶೆಲ್ಡನ್ ಕಾಟ್ರೆಲ್ನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಖರೀದಿಸಿದ್ದು ಬರೋಬ್ಬರಿ 8.5 ಕೋಟಿಗೆ. ಆದರೆ ಪಂಜಾಬ್ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಕಾಟ್ರೆಲ್ ವಿಫಲರಾಗಿದ್ದರು. ಇನ್ನು ಕಾಟ್ರೆಲ್ ನೀಡಿರುವ ರನ್ ಸರಾಸರಿ 9 ರ ಅಸುಪಾಸಿನಲ್ಲಿದೆ. ಭಾರೀ ಮೊತ್ತ ನೀಡಿ ಕಾಟ್ರೆಲ್ ಅವರನ್ನು ಉಳಿಸಿಕೊಳ್ಳುವ ಬದಲು ಬಿಡುಗಡೆಗೊಳಿಸಲಿದೆ. ಅಲ್ಲದೆ ಕಡಿಮೆ ಬೆಲೆಗೆ ಪಂಜಾಬ್ ತಂಡವೇ ಮತ್ತೆ ಖರೀದಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
#1 ಗ್ಲೆನ್ ಮ್ಯಾಕ್ಸ್ ವೆಲ್: ಐಪಿಎಲ್ನ ದುಬಾರಿ ಆಟಗಾರರಲ್ಲಿ ಒಬ್ಬರಾಗಿರುವ ಗ್ಲೆನ್ ಮ್ಯಾಕ್ಸ್ವೆಲ್ ಈ ಭಾರಿ ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಆದರೆ ಯಾವ ಫ್ರಾಂಚೈಸಿ ಮತ್ತೆ ಖರೀದಿಸಲಿದೆ ಎಂಬುದೇ ಪ್ರಶ್ನೆ. ಏಕೆಂದರೆ ಮ್ಯಾಕ್ಸ್ವೆಲ್ ಪಂಜಾಬ್ ಪರ ಆಡಿದ್ದು 10 ಕೋಟಿ 75 ಲಕ್ಷಕ್ಕೆ. ಆದರೆ ಕಲೆಹಾಕಿದ್ದು ಮಾತ್ರ ಕೇವಲ 108 ರನ್ಗಳು. ಇನ್ನು ಕಳೆದ ಸೀಸನ್ನಲ್ಲಿ ಈತನ ಬ್ಯಾಟ್ನಿಂದ ಬಂದ ಫೋರ್ ಕೇವಲ 9 ಮಾತ್ರ. ಇದಕ್ಕಿಂತ ವಿಚಿತ್ರ ಎಂದರೆ ಮ್ಯಾಕ್ಸ್ವೆಲ್ ಬ್ಯಾಟ್ನಿಂದ ಕಳೆದ ಐಪಿಎಲ್ನಲ್ಲಿ ಒಂದೇ ಒಂದು ಸಿಕ್ಸ್ ಮೂಡಿಬಂದಿರಲಿಲ್ಲ ಎಂಬುದು. ಹೀಗಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ಈ ದುಬಾರಿ ಆಟಗಾರನನ್ನು ಕೈ ಬಿಡುವುದು ಖಚಿತ. ಆದರೆ ಅತ್ತ ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾ ವಿರುದ್ಧ ಅಬ್ಬರಿಸಿದ್ದ ಮ್ಯಾಕ್ಸ್ವೆಲ್ ಈ ಬಾರಿ ಕೂಡ ಹರಾಜಿನಲ್ಲಿ ಸೇಲ್ ಆಗಲಿದ್ದಾರೆ ಎಂದೇ ಹೇಳಲಾಗುತ್ತಿದೆ.