IPL ​ನಲ್ಲಿ ಅತೀ ಹೆಚ್ಚು ಬಾರಿ ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್ ಪ್ರಶಸ್ತಿ ಗೆದ್ದ ಆಟಗಾರರು

2008 ರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ವಾಟ್ಸನ್ 47.2 ರ ಸರಾಸರಿಯಲ್ಲಿ 472 ರನ್ ಹಾಗೂ 17 ವಿಕೆಟ್ ಪಡೆಯುವ ಮೂಲಕ ಎಂವಿಪಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು.

First published:

  • 110

    IPL ​ನಲ್ಲಿ ಅತೀ ಹೆಚ್ಚು ಬಾರಿ ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್ ಪ್ರಶಸ್ತಿ ಗೆದ್ದ ಆಟಗಾರರು

    ಪ್ರತಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್​​ನಲ್ಲಿ ನೀಡಲಾಗುವ ಅತ್ಯಂತ ಪ್ರತಿಷ್ಠಿತ ಪುರಸ್ಕಾರಗಳಲ್ಲಿ ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್ (ಎಂವಿಪಿ) ಪ್ರಶಸ್ತಿ ಕೂಡ ಒಂದು .

    MORE
    GALLERIES

  • 210

    IPL ​ನಲ್ಲಿ ಅತೀ ಹೆಚ್ಚು ಬಾರಿ ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್ ಪ್ರಶಸ್ತಿ ಗೆದ್ದ ಆಟಗಾರರು

    ಈ ಹಿಂದೆ ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಎಂದು ಕರೆಯಲಾಗುತ್ತಿದ್ದ ಎಂವಿಪಿ ಪ್ರಶಸ್ತಿಯು ಆಲ್‌ರೌಂಡರ್‌ಗಳಿಗೆ ಅನುಕೂಲಕರವಾದ ವಿಶಿಷ್ಟ ಪಾಯಿಂಟ್ ವ್ಯವಸ್ಥೆಯನ್ನು ಹೊಂದಿದೆ. ಇದು ತಂಡಗಳಲ್ಲಿನ ಆಟಗಾರ ಒಟ್ಟಾರೆ ಪ್ರದರ್ಶನದ ಮೇಲೆ ಬೆಳಕು ಚೆಲ್ಲುತ್ತದೆ.

    MORE
    GALLERIES

  • 310

    IPL ​ನಲ್ಲಿ ಅತೀ ಹೆಚ್ಚು ಬಾರಿ ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್ ಪ್ರಶಸ್ತಿ ಗೆದ್ದ ಆಟಗಾರರು

    ಅಂಕಗಳ ವ್ಯವಸ್ಥೆ ಹೀಗಿರುತ್ತದೆ: ಬೌಂಡರಿಗಳು 2.5 ಅಂಕಗಳು; ಸಿಕ್ಸರ್‌ಗಳು ಮತ್ತು ವಿಕೆಟ್‌ಗಳು ತಲಾ 3.5 ಪಾಯಿಂಟ್‌ಗಳು; ಕ್ಯಾಚ್‌ಗಳು ಮತ್ತು ಸ್ಟಂಪಿಂಗ್‌ಗಳು ತಲಾ 2.5 ಪಾಯಿಂಟ್‌ಗಳು; ಬೌಲ್ಡ್ 1 ಪಾಯಿಂಟ್.

    MORE
    GALLERIES

  • 410

    IPL ​ನಲ್ಲಿ ಅತೀ ಹೆಚ್ಚು ಬಾರಿ ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್ ಪ್ರಶಸ್ತಿ ಗೆದ್ದ ಆಟಗಾರರು

    ಹೀಗೆ ಐಪಿಎಲ್​ನಲ್ಲಿ ಅತೀ ಹೆಚ್ಚು ಪಾಯಿಂಟ್​ಗಳನ್ನು ಪಡೆಯುವ ಮೂಲಕ ಮೂವರು ಕ್ರಿಕೆಟಿಗರು ತಲಾ 2 ಬಾರಿ ಮೋಸ್ಟ್​ ವ್ಯಾಲ್ಯೂಯೆಬಲ್ ಪ್ಲೇಯರ್ ಎನಿಸಿಕೊಂಡಿದ್ದಾರೆ. ಆ ಆಟಗಾರರು ಯಾರು ಎಂಬ ಮಾಹಿತಿ  ಇಲ್ಲಿದೆ.

    MORE
    GALLERIES

  • 510

    IPL ​ನಲ್ಲಿ ಅತೀ ಹೆಚ್ಚು ಬಾರಿ ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್ ಪ್ರಶಸ್ತಿ ಗೆದ್ದ ಆಟಗಾರರು

    # 3 ಶೇನ್ ವಾಟ್ಸನ್: ಐಪಿಎಲ್‌ನಲ್ಲಿ ಶೇನ್ ವ್ಯಾಟ್ಸನ್ 3 ಫ್ರಾಂಚೈಸಿಗಳ ಪರ ಆಡಿದ್ದಾರೆ. ರಾಜಸ್ಥಾನ್ ರಾಯಲ್ಸ್ , ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿರುವ ವಾಟ್ಸನ್ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಪ್ರಭಾವ ಬೀರಿದ್ದರು.

    MORE
    GALLERIES

  • 610

    IPL ​ನಲ್ಲಿ ಅತೀ ಹೆಚ್ಚು ಬಾರಿ ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್ ಪ್ರಶಸ್ತಿ ಗೆದ್ದ ಆಟಗಾರರು

    2008 ರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ವಾಟ್ಸನ್ 47.2 ರ ಸರಾಸರಿಯಲ್ಲಿ 472 ರನ್ ಹಾಗೂ 17 ವಿಕೆಟ್ ಪಡೆಯುವ ಮೂಲಕ ಎಂವಿಪಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು. ಹಾಗೆಯೇ 2013 ರ ಐಪಿಎಲ್‌ನಲ್ಲೂ 543 ರನ್ ಮತ್ತು 13 ವಿಕೆಟ್‌ ಉರುಳಿಸಿ ಮತ್ತೊಮ್ಮೆ ಮೋಸ್ಟ್ ವ್ಯಾಲುಯೇಬಲ್ ಪ್ಲೇಯರ್ ಎನಿಸಿಕೊಂಡಿದ್ದರು.

    MORE
    GALLERIES

  • 710

    IPL ​ನಲ್ಲಿ ಅತೀ ಹೆಚ್ಚು ಬಾರಿ ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್ ಪ್ರಶಸ್ತಿ ಗೆದ್ದ ಆಟಗಾರರು

    # 2 ಸುನಿಲ್ ನರೈನ್: ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಆಲ್‌ರೌಂಡರ್ ಸುನಿಲ್ ನರೈನ್ ಇತ್ತೀಚೆಗೆ ಬ್ಯಾಟಿಂಗ್​ನಲ್ಲೂ ಮಿಂಚುತ್ತಿದ್ದಾರೆ. 2012 ರ ಐಪಿಎಲ್ ಅಭಿಯಾನದಲ್ಲಿ 15 ಪಂದ್ಯಗಳಲ್ಲಿ 24 ವಿಕೆಟ್​ಗಳನ್ನು ಉರುಳಿಸುವ ಮೂಲಕ ಮೊದಲ ಎಂವಿಪಿ ಪ್ರಶಸ್ತಿ ಗೆದ್ದುಕೊಂಡಿದ್ದರು.

    MORE
    GALLERIES

  • 810

    IPL ​ನಲ್ಲಿ ಅತೀ ಹೆಚ್ಚು ಬಾರಿ ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್ ಪ್ರಶಸ್ತಿ ಗೆದ್ದ ಆಟಗಾರರು

    2018 ರಲ್ಲಿ 16 ಪಂದ್ಯಗಳಲ್ಲಿ 357 ರನ್ ಗಳಿಸಿ,17 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಮತ್ತೊಮ್ಮೆ ಮೋಸ್ಟ್ ವ್ಯಾಲುಯೇಬಲರ್ ಪ್ಲೇಯರ್ ಪ್ರಶಸ್ತಿಗೆ ಭಾಜನರಾಗಿದ್ದರು.

    MORE
    GALLERIES

  • 910

    IPL ​ನಲ್ಲಿ ಅತೀ ಹೆಚ್ಚು ಬಾರಿ ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್ ಪ್ರಶಸ್ತಿ ಗೆದ್ದ ಆಟಗಾರರು

    # 1 ಆಂಡ್ರೆ ರಸೆಲ್: ಕೊಲ್ಕತ್ತಾ ನೈಟ್​ ರೈಡರ್ಸ್ ತಂಡದ ಆಟಗಾರ ಆಂಡ್ರೆ ರಸೆಲ್, ಐಪಿಎಲ್​ನ ಅಪಾಯಕಾರಿ ಆಲ್​ರೌಂಡರ್ ಎಂಬುದರಲ್ಲಿ ಡೌಟೇ ಇಲ್ಲ. 2015 ರ ಐಪಿಎಲ್‌ನಲ್ಲಿ 13 ಪಂದ್ಯಗಳಲ್ಲಿ 326 ರನ್ ಗಳಿಸಿದ್ದಲ್ಲದೆ, 14 ವಿಕೆಟ್‌ಗಳನ್ನು ಪಡೆದು ಎಂವಿಪಿ ಅವಾರ್ಡ್​ ಗೆದ್ದಿದ್ದರು.

    MORE
    GALLERIES

  • 1010

    IPL ​ನಲ್ಲಿ ಅತೀ ಹೆಚ್ಚು ಬಾರಿ ಮೋಸ್ಟ್ ವ್ಯಾಲ್ಯೂಯೆಬಲ್ ಪ್ಲೇಯರ್ ಪ್ರಶಸ್ತಿ ಗೆದ್ದ ಆಟಗಾರರು

    ಹಾಗೆಯೇ 2019 ರ ಐಪಿಎಲ್‌ನಲ್ಲಿ 14 ಪಂದ್ಯಗಳಲ್ಲಿ 510 ರನ್ ಮತ್ತು 11 ವಿಕೆಟ್​ಗಳನ್ನು ಕಬಳಿಸುವ ಮೂಲಕ ಮೋಸ್ಟ್ ವ್ಯಾಲುಯೇಬಲ್ ಪ್ರಶಸ್ತಿಯನ್ನು ರಸೆಲ್ ಎರಡನೇ ಬಾರಿ ತಮ್ಮದಾಗಿಸಿಕೊಂಡಿದ್ದರು.

    MORE
    GALLERIES