ನಿನ್ನೆ ಕೋಲ್ಕತ್ತಾದಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಎಲ್ಲರ ಗಮನ ಸೆಳೆದಿದ್ದು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯಲ್ಲಿದ್ದ ಈ ಮುದ್ದು ಮುಖದ ಚೆಲುವೆ. ಹರಾಜಿಗೆ ಆಟಗಾರರ ಹೆಸರು ಕರೆಯುತ್ತಿದ್ದಂತೆ ತಮ್ಮ ತಂಡಕ್ಕೆ ಬೇಕಿರುವ ಪ್ಲೇಯರ್ಗಳನ್ನು ಆಯ್ಕೆ ಮಾಡುವಲ್ಲಿ ಇವರದ್ದು ಪ್ರಮುಖ ಪಾತ್ರವಿತ್ತು. ವಿವಿಎಸ್ ಲಕ್ಷ್ಮಣ್, ಮುತ್ತಯ್ಯ ಮುರಳೀಧರನ್ ಜೊತೆ ಕೂತಿದ್ದ ಇವರು ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಲೀಕ ಕಲಾನಿಧಿ ಮಾರನ್ ಅವರ ಮಗಳು ಕವಿಯಾ ಮಾರನ್. 27 ವರ್ಷದ ಕವಿಯಾ ಅವರು ಸನ್ರೈಸರ್ಸ್ ತಂಡದ ಸಹ ಮಾಲೀಕೆ ಕೂಡ ಹೌದು. ಅಲ್ಲದೆ ಸನ್ ಮ್ಯೂಜಿಕ್ ಮತ್ತು ಸನ್ ಟಿವಿ ರೇಡಿಯೋ ಚಾನೆಲ್ನ ಪಾಲುದಾರರಾಗಿದ್ದಾರೆ. ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಕವಿಯಾ, ಕ್ಯಾಮೆರಾ ಕಣ್ಣಿಗೆ ಪದೇಪದೇ ಕಾಣಿಸುತ್ತಿದ್ದರು. ಅಲ್ಲದೆ ಇವರ ಫೋಟೋ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಚೆನ್ನೈನಲ್ಲಿ ಎಂಬಿಎ ಓದಿ ಮುಗಿಸಿರುವ ಇವರಿಗೆ ಕ್ರಿಕೆಟ್ ಎಂದರೆ ಅಚ್ಚುಮೆಚ್ಚಂತೆ. ಹೀಗಾಗಿ ಹೈದರಾಬಾದ್ ಫ್ರಾಂಚೈಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿಯಾ ಮಾರನ್. ಕವಿಯಾ ಮಾರನ್. ಕವಿಯಾ ಮಾರನ್. ಕವಿಯಾ ಮಾರನ್. ಕವಿಯಾ ಮಾರನ್. ಕವಿಯಾ ಮಾರನ್. ಕವಿಯಾ ಮಾರನ್.