IPL 2020: ದುಬೈನಲ್ಲಿ ಟೀಮ್ ಇಂಡಿಯಾಗೆ ಟ್ರೈನಿಂಗ್: ಐಪಿಎಲ್ ಬಹುತೇಕ ಖಚಿತ..?
IPL 2020: 2009 ರಲ್ಲಿ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಸಂಪೂರ್ಣ ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿತ್ತು. ಇದೀಗ ಮತ್ತೊಮ್ಮೆ ಬಿಸಿಸಿಐ ಇಡೀ ಟೂರ್ನಿಯನ್ನು ವಿದೇಶದಲ್ಲಿ ಆಯೋಜಿಸಲಿದೆಯಾ ಕಾದು ನೋಡಬೇಕಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಮಾರ್ಚ್ 29 ರಂದು ಐಪಿಎಲ್ ಆರಂಭವಾಗಿ ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಚಾಂಪಿಯನ್ ಯಾರೆಂಬುದು ಗೊತ್ತಾಗಿರುತ್ತಿತ್ತು.
2/ 11
ಆದರೆ ಎಲ್ಲರ ಲೆಕ್ಕಚಾರಗಳನ್ನು ಕೊರೋನಾ ಎಂಬ ವೈರಸ್ವೊಂದು ತಲೆ ಕೆಳಗಾಗಿಸಿದೆ. ಇತ್ತ ಐಪಿಎಲ್ ನಡೆಯದಿದ್ರೆ ಉಂಟಾಗುವ ನಷ್ಟದಿಂದ ಪಾರಾಗಲು ಬಿಸಿಸಿಐ ನಾನಾ ಸರ್ಕಸ್ ನಡೆಸುತ್ತಿದೆ.
3/ 11
ಅದಕ್ಕನುಗುಣವಾಗಿ ಖಾಲಿ ಸ್ಟೇಡಿಯಂನಲ್ಲಾದರೂ ಟೂರ್ನಿ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಆದರೆ ಸದ್ಯದ ಭಾರತದಲ್ಲಿನ ಪರಿಸ್ಥಿತಿ ಗಮನಿಸಿದ್ರೆ ಐಪಿಎಲ್ ನಡೆಯುವುದು ಅನುಮಾನ.
4/ 11
ಹೀಗಾಗಿ ವಿದೇಶದಲ್ಲಿ ಟೂರ್ನಿ ನಡೆಸಲು ಬಿಸಿಸಿಐ ಉತ್ಸುಕವಾಗಿದೆ. ಅದರಂತೆ ಭಾರತೀಯ ಕ್ರಿಕೆಟ್ ಮಂಡಳಿಯ ಮೊದಲ ಆಯ್ಕೆ ಯುಎಇ. ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ನ 20 ಪಂದ್ಯಗಳನ್ನು ದುಬೈನಲ್ಲಿ ಆಯೋಜಿಸಲಾಗಿತ್ತು.
5/ 11
ಅದರಂತೆ ಈ ಬಾರಿ ಕೂಡ ದುಬೈನಲ್ಲೇ ಟೂರ್ನಿ ನಡೆಸಲು ನಿರ್ಧರಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಇದರ ನಡುವೆ ಭಾರತ ಕ್ರಿಕೆಟ್ ತಂಡಕ್ಕೆ ದುಬೈನಲ್ಲಿ ಟ್ರೈನಿಂಗ್ ಕ್ಯಾಂಪ್ ಆಯೋಜಿಸಲು ಬಿಸಿಸಿಐ ಯೋಜಿಸಿದೆ.
6/ 11
ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ ಟೀಮ್ ಇಂಡಿಯಾ ಸಜ್ಜಾಗಬೇಕಿದೆ. ಆದರೆ ಕಳೆದ ಕೆಲ ತಿಂಗಳಿಂದ ಮೈದಾನದಿಂದ ದೂರವೇ ಉಳಿದಿರುವ ಬ್ಲೂ ಬಾಯ್ಸ್ಗೆ ಅಭ್ಯಾಸದ ಅವಶ್ಯಕತೆಯಿದೆ. ಹೀಗಾಗಿ ದುಬೈನಲ್ಲೇ 6 ವಾರಗಳ ಕಾಲ ರಾಷ್ಟ್ರೀಯ ಶಿಬಿರವನ್ನು ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.
7/ 11
ಇದರೊಂದಿಗೆ ಐಪಿಎಲ್ 13ನೇ ಆವೃತ್ತಿ ಕೂಡ ದುಬೈನಲ್ಲೇ ನಡೆಯಲಿದೆ ಎನ್ನಲಾಗುತ್ತಿದೆ. ಔಟ್ಲುಕ್ ವರದಿ ಪ್ರಕಾರ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ಮುಂದೂಡುವುದು ಬಹುತೇಕ ಖಚಿತ. ಹಾಗೆಯೇ ಯುಎಇ ಐಪಿಎಲ್ ಆತಿಥ್ಯವಹಿಸಲಿದೆ ಎಂದು ತಿಳಿಸಲಾಗಿದೆ.
8/ 11
ಯುಎಇ ಈ ಮೊದಲು 2014ರಲ್ಲಿ ಐಪಿಎಲ್ ಆಯೋಜಿಸಿದೆ. ಕೊನೆಯ 20 ಪಂದ್ಯಗಳನ್ನು ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ನಡೆಸಲಾಯಿತು. ಇದೀಗ ಮತ್ತೊಮ್ಮೆ ಯುಎಇನ ಖಾಲಿ ಸ್ಟೇಡಿಯಂನಲ್ಲಿ ಪಂದ್ಯ ಆಯೋಜಿಸಲು ಚರ್ಚಿಸಲಾಗಿದೆ.
9/ 11
ಅದರಂತೆ ಮುಂದಿನ ದಿನಗಳ ಪರಿಸ್ಥಿತಿ ಗಮನಿಸಿ ಸೆಪ್ಟೆಂಬರ್-ನವೆಂಬರ್ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ್ನು ಮಧ್ಯಪ್ರಾಚ್ಯ ದೇಶದಲ್ಲಿ ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.