13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಕೆಲ ದಿನಗಳ ಹಿಂದೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಬರೋಬ್ಬರಿ 15.5 ಕೋಟಿಗೆ ಸೇಲ್ ಆಗಿದ್ದರು.
2/ 12
ಈ ಮೂಲಕ 15 ಕೋಟಿ 5 ಲಕ್ಷಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾಗಿ ಈ ಬಾರಿಯ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಸೇಲ್ ಆದ ಆಟಗಾರ ಎಂಬ ದಾಖಲೆ ಬರೆದರು.
3/ 12
ಅಷ್ಟೆ ಅಲ್ಲದೆ ಐಪಿಎಲ್ ಇತಿಹಾಸದಲ್ಲೇ ಈವರೆಗೆ ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ಮೊದಲ ವಿದೇಶಿ ಆಟಗಾರ ಎನಿಸಿಕೊಂಡರು. 2017ರ ಆವೃತ್ತಿಯಲ್ಲಿ ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್ 14.5 ಕೋಟಿ ರೂ.ಗಳನ್ನು ಪಡೆದಿದ್ದು ಈ ಹಿಂದಿನ ದಾಖಲೆಯಾಗಿತ್ತು.
4/ 12
ಇದೀಗ ತಾವು ಪಡೆದುಕೊಂಡಿರುವ ಇಷ್ಟೊಂದು ಹಣವನ್ನು ಏನು ಮಾಡಲಿದ್ದಾರೆ ಎಂಬ ಬಗ್ಗೆ ಸ್ವತಃ ಕಮಿನ್ಸ್ ಅವರೆ ಮಾತನಾಡಿದ್ದಾರೆ.
5/ 12
ಅಷ್ಟೊಂದು ಮೊತ್ತ ಏನು ಮಾಡಬೇಕು ಎಂದು ನನಗೆ ಗೊತ್ತಿಲ್ಲ ಎಂದಿರುವ ಕಮಿನ್ಸ್, ನನ್ನ ಗೆಳತಿ ಮಾತ್ರ ಆ ಮೊತ್ತದಲ್ಲಿ ಮೊದಲ ಉಪಯೋಗಿಸಬೇಕಾದ ಯೋಜನೆಯನ್ನು ತಿಳಿಸಿದ್ದಾಳೆ ಎಂದು ಹೇಳಿದ್ದಾರೆ.
6/ 12
ನನ್ನ ಗರ್ಲ್ಫ್ರೆಂಡ್ ಬೆಕಿ ಬೋಸ್ಟನ್ ಈ ಹಣದಲ್ಲಿ ಹೆಚ್ಚು ನಾಯಿ ಮರಿ ಮತ್ತು ಈಗಿರುವ ನಾಯಿಗೆ ಹಲವು ಆಟಿಕೆಗಳನ್ನು ಖರೀದಿಸಲು ಬಯಸಿದ್ದಾಳೆ ಎಂದು ಕಮಿನ್ಸ್ ಹೇಳಿದ್ದಾರೆ.
7/ 12
ಗರ್ಲ್ಫ್ರೆಂಡ್ ಬೆಕಿ ಬೋಸ್ಟನ್ ಜೊತೆ ಪ್ಯಾಟ್ ಕಮಿನ್ಸ್
8/ 12
ಗರ್ಲ್ಫ್ರೆಂಡ್ ಬೆಕಿ ಬೋಸ್ಟನ್ ಜೊತೆ ಪ್ಯಾಟ್ ಕಮಿನ್ಸ್
9/ 12
ಟೆಸ್ಟ್ ಕ್ರಿಕೆಟ್ನ ನಂಬರ್ 1 ಬೌಲರ್ ಎಂಬ ದಾಖಲೆ ನಿರ್ಮಾಣ ಮಾಡಿರುವ ಕಮಿನ್ಸ್ ಐಪಿಎಲ್ನಲ್ಲಿ ಇಲ್ಲಿಯವರೆಗೆ 16 ಪಂದ್ಯಗಳಿಂದ 17 ವಿಕೆಟ್ ಪಡೆದುಕೊಂಡಿದ್ದಾರೆ.
10/ 12
ನಾನು ನನ್ನಂತೆಯೇ ಇರಲು ಬಯಸುತ್ತೇನೆ. ಸುತ್ತಮುತ್ತ ಒಳ್ಳೆಯ ಜನರನ್ನು ಹೊಂದಿರುವ ನಾನು ಅತ್ಯಂತ ಪುಣ್ಯವಂತ. ನಾನು ಇನ್ನೂ ಕ್ರಿಕೆಟ್ ಆಡುತ್ತಿದ್ದೇನೆ ಎಂದರೆ, ಅದಕ್ಕೆ ಕಾರಣ ನಾನು ಕ್ರಿಕೆಟ್ ಕ್ರೀಡೆಯನ್ನು ಹೆಚ್ಚು ಪ್ರೀತಿಸುತ್ತೇನೆ- ಕಮಿನ್ಸ್.
11/ 12
ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ 10 ಕೋಟಿ 75 ಲಕ್ಷಕ್ಕೆ ಕಿಂಗ್ಸ್ ಇಲೆವೆನ್ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಇವರು ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಎರಡನೇ ಆಟಗಾರನಾಗಿದ್ದಾರೆ.
12/ 12
ಆರ್ಸಿಬಿ ಫ್ರಾಂಚೈಸಿ ಕ್ರಿಸ್ ಮೊರೀಸ್ ಅವರನ್ನು 10 ಕೋಟಿ ಕೊಟ್ಟು ಖರೀದಿ ಮಾಡಿದ್ದು ಗರಿಷ್ಠ ಮೊತ್ತಕ್ಕೆ ಸೇಲ್ ಆದ 3ನೇ ಆಟಗಾರರಾಗಿದ್ದಾರೆ.