ಐಪಿಎಲ್ 13ನೇ ಆವೃತ್ತಿಗೆ ಇನ್ನೇನು ಸುಮಾರು ಒಂದು ತಿಂಗಳಷ್ಟೆ ಬಾಕಿಯಿದೆ. ಈ ಕ್ರೀಡಾ ಹಬ್ಬಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
2/ 13
ಇನ್ನೊಂದಿಡೆ ಎಂಟು ಫ್ರಾಂಚೈಸಿಗಳು ಕೂಡ ಪ್ರಶಸ್ತಿಗೆ ಮುತ್ತಿಕ್ಕಲು ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿವೆ.
3/ 13
ಮುಂದಿನ ತಿಂಗಳು ಮಾರ್ಚ್ 29 ರಿಂದ ಐಪಿಎಲ್ 13ನೇ ಆವೃತ್ತಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು ಮೇ 24ರಂದು ಫೈನಲ್ ಪಂದ್ಯ ಆಯೋಜಿಸಲಾಗಿದೆ.
4/ 13
ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಸೇಲ್ ಆದ ಆಟಗಾರ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್. ಇವರು 15 ಕೋಟಿ 50 ಲಕ್ಷಕ್ಕೆ ಕೆಕೆಆರ್ ತಂಡದ ಪಾಲಾದರು.
5/ 13
ಎರಡನೇಯವರಾಗಿ ಆಸೀಸ್ನ ಸ್ಫೋಟಕ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು 10 ಕೋಟಿ 75 ಲಕ್ಷಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ಖರೀದಿ ಮಾಡಿತ್ತು.
6/ 13
ಸದ್ಯ ಗ್ಲೆನ್ ಮ್ಯಾಕ್ಸ್ವೆಲ್ ಈ ಬಾರಿಯ ಐಪಿಎಲ್ನಲ್ಲಿ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.
7/ 13
ಮೊಣಕೈಯ ಗಾಯಕ್ಕೆ ಒಳಗಾಗಿರುವ ಮ್ಯಾಕ್ಸ್ವೆಲ್ ಅವರು ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಯಿಂದ ಹೊರಬಿದ್ದಿದ್ದಾರೆ.
8/ 13
ಪರಿಪೂರ್ಣ ದೈಹಿಕ ಕ್ಷಮತೆ ಹೊಂದಲು ಮ್ಯಾಕ್ಸ್ವೆಲ್ ಅವರಿಗೆ ಸುಮಾರು 8 ವಾರ ಬೇಕಾಗ ಬಹುದು. ಹೀಗಾಗಿ ಅವರು ಐಪಿಎಲ್ನ ಆರಂಭಿಕ ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ.
9/ 13
ಎಲ್ಲಾದರು ಮ್ಯಾಕ್ಸ್ವೆಲ್ ಐಪಿಎಲ್ ಪ್ರಾರಂಭವಾದ ಮೇಲೂ ಗುಣಮುಖರಾಗದಿದ್ದಲ್ಲಿ ಸಂಪೂರ್ಣ ವಿಶ್ರಾಂತಿ ಪಡೆಬಹುದು.
10/ 13
ದಕ್ಷಿಣ ಆಫ್ರಿಕಾ ಪ್ರವಾಸವು ಫೆ. 21ರಿಂದ ಆರಂಭವಾಗಲಿದೆ. ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಮ್ಯಾಕ್ಸ್ವೆಲ್ ಬದಲಿಗೆ ಎರಡೂ ತಂಡಗಳಲ್ಲಿ ಡಾರ್ಸಿ ಶಾರ್ಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
11/ 13
ಇತ್ತೀಚೆಗಷ್ಟೆ ನಡೆದ ಐಪಿಎಲ್ ಸಭೆಯಲ್ಲಿ ಪಂದ್ಯದ ಆರಂಭದ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ ಎಂಬ ತೀರ್ಮಾನ ಕೈಗೊಳ್ಳಲಾಗಿದೆ. ಸಂಜೆ 4 ಮತ್ತು ರಾತ್ರಿ 8 ಗಂಟೆಗೆ ಪಂದ್ಯಗಳು ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿದೆ.
12/ 13
ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನೂತನ ನಿಯಮದಂತೆ ಕನ್ಕಷನ್ ಸಬ್ಸ್ಟ್ಯೂಟ್ ಆಯ್ಕೆಯನ್ನು ಈ ಬಾರಿಯ ಐಪಿಎಲ್ನಿಂದ ಜಾರಿಗೆ ತರಲಾಗಿದೆ.
13/ 13
ಅದರಂತೆ ಈ ಬಾರಿ ಐಪಿಎಲ್ನಲ್ಲಿ ಗಾಯಗೊಂಡು ಮತ್ತೆ ಆಡಲಾಗದ ಆಟಗಾರರ ಬದಲಿಗೆ ಬೇರೊಬ್ಬ ಆಟಗಾರ ತಂಡ ಭಾಗವಾಗಿ ಮೈದಾನಕ್ಕಿಳಿಯುವ ಅವಕಾಶವಿರಲಿದೆ. ಅಂದರೆ ಬದಲಿ ಆಟಗಾರನಿಗೆ ಬೌಲಿಂಗ್ ಮತ್ತು ಬ್ಯಾಟಿಂಗ್ ಸಹ ಮಾಡಬಹುದು.