ಐಪಿಎಲ್ 13 ಆವೃತ್ತಿಗೆ ಇನ್ನೇನು ಕೆಲವು ತಿಂಗಳುಗಳಷ್ಟೆ ಬಾಕಿಯಿದೆ. ಬಿಸಿಸಿಐ ಈಗಾಗಲೇ ಭರ್ಜರಿ ತಯಾರಿಯಲ್ಲಿದ್ದು, ವೇಳಾಪಟ್ಟಿ ಪ್ರಕಟಿಸುವ ಕುರಿತು ಚಿಂತನೆ ನಡೆಸುತ್ತಿದೆ.
2/ 17
ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅಧಿಕೃತವಾಗಿದೆ.
3/ 17
ಮಾರ್ಚ್ 29 ರಂದು ವಾಂಖೆಡೆಯಲ್ಲಿ ಐಪಿಎಲ್ ಉದ್ಘಾಟನೆ ಪಂದ್ಯ, ಮೇ 24ರಂದು ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ ಎಂಬುದನ್ನು ಬಿಸಿಸಿಐ ಖಾತ್ರಿಪಡಿಸಿದೆ.
4/ 17
ಅದೇರೀತಿ ಈ ಬಾರಿಯ ಐಪಿಎಲ್ ಕೆಲ ಪ್ರಮುಖ ಸ್ಟಾರ್ ಆಟಗಾರರಿಗೆ ಪದಾರ್ಪಣೆಯ ಪಂದ್ಯವಾಗಲಿದೆ. ಆ ಆಟಗಾರರು ಯಾರು ಎಂಬುವುದನ್ನು ನೋಡುವುದಾದರೆ…
5/ 17
ಶೆಲ್ಡನ್ ಕಾಟ್ರೆಲ್: ಈ ಬಾರಿಯ ಐಪಿಎಲ್ ಹರಾಜಿನಲ್ಲಿ ವೆಸ್ಟ್ ಇಂಡೀಸ್ ತಂಡ ಮಾರಕ ಬೌಲರ್ ಶೆಲ್ಡನ್ ಕಾಟ್ರೆಲ್ 8.5 ಕೋಟಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪಾಲಾದರು.
6/ 17
ಕಳೆದ 1 ವರ್ಷದಿಂದ ವೆಸ್ಟ್ ಇಂಡೀಸ್ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಕಾಟ್ರೆಲ್ 13ನೇ ಆವೃತ್ತಿಯ ಐಪಿಎಲ್ನಲ್ಲಿ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
7/ 17
ಟಾಮ್ ಬಾಂಟನ್: ಇಂಗ್ಲೆಂಡ್ ತಂಡದ ಯುವ ಪ್ರತಿಭೆ ಟಾಮ್ ಬಾಂಟನ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹರಾಜಿನಲ್ಲಿ 1 ಕೋಟಿಗೆ ಖರೀದಿ ಮಾಡಿತ್ತು.
8/ 17
ಬಿಗ್ಬ್ಯಾಷ್ನಲ್ಲಿ ಅಬ್ಬರಿಸುತ್ತಿರುವ ಟಾಮ್ ತಮ್ಮ ಚೊಚ್ಚಲ ಐಪಿಎಲ್ನಲ್ಲಿ ಯಾವರೀತಿ ಪ್ರದರ್ಶನ ನೀಡುತ್ತಾರೆ ಎಂಬುವುದು ಕುತೂಹಲ ಕೆರಳಿಸಿದೆ.
9/ 17
ಜೋಷ್ ಹ್ಯಾಜ್ಲೆವುಡ್: 2 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾದ ಆಸೀಸ್ ವೇಗಿ ಹ್ಯಾಜ್ಲೆವುಡ್ಗೂ ಇದು ಮೊದಲ ಐಪಿಎಲ್ ಟೂರ್ನಿ.
10/ 17
29 ವರ್ಷ ಪ್ರಾಯದ ಹ್ಯಾಜ್ಲೆವುಡ್ ಈ ಹಿಂದಿನ ಒಂದು ಸೀನನ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರು. ಆದರೆ, ಇವರಿಗೆ ಒಂದೂ ಪಂದ್ಯ ಆಡಲು ಅವಕಾಶ ಸಿಕ್ಕಿರಲಿಲ್ಲ.
11/ 17
ಅಲೆಕ್ಸ್ ಕ್ಯಾರಿ: ಕಳೆದ ಏಕದಿನ ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ ಅಲೆಕ್ಸ್ ಕ್ಯಾರಿ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ.
12/ 17
2.4 ಕೋಟಿಗೆ ಡೆಲ್ಲಿ ಇವರನ್ನ ಖರೀದಿ ಮಾಡಿದ್ದು, ತಮ್ಮ ಚೊಚ್ಚಲ ಐಪಿಎಲ್ನಲ್ಲಿ ಯಾವರೀತಿ ಪ್ರದರ್ಶನ ನೀಡುತ್ತಾರೆ ಎಂಬುದನ್ನು ನೋಡಬೇಕಿದೆ.
13/ 17
ಫಾಬಿನ್ ಅಲೆನ್: ವೆಸ್ಟ್ ಇಂಡೀಸ್ ತಂಡದ ಪ್ರಮುಖ ಆಲ್ರೌಂಡರ್ ಆಟಗಾರ ಫಾಬಿನ್ ಅಲೆನ್ಗೂ ಇದು ಪದಾರ್ಪಣೆಯ ಐಪಿಎಲ್.
14/ 17
ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಇವರನ್ನು 50 ಲಕ್ಷ ನೀಡಿ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು.
15/ 17
ಈ ಬಾರಿಯ ಐಪಿಎಲ್ 45 ದಿನಗಳ ಬದಲಾಗಿ 57 ದಿನಗಳ ಕಾಲ ನಡೆಯಲಿದೆ ಎಂಬ ಹೊಸ ವಿಚಾರ ಕೇಳಿಬರುತ್ತಿದೆ. ಒಂದು ವೇಳೆ 57 ದಿನಗಳು ಐಪಿಎಲ್ ನಡೆಯಲಿದೆ ಎಂದರೆ 2020ರ ಆವೃತ್ತಿಯಲ್ಲಿ ದಿನಕ್ಕೆ ಒಂದೇ ಪಂದ್ಯ ನಡೆಯಲಿದೆ ಎಂಬ ವಿಚಾರ ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.
16/ 17
ಒಂದು ವೇಳೆ 57 ದಿನಗಳು ಐಪಿಎಲ್ ನಡೆಯಲಿದೆ ಎಂದರೆ 2020ರ ಆವೃತ್ತಿಯಲ್ಲಿ ದಿನಕ್ಕೆ ಒಂದೇ ಪಂದ್ಯ ನಡೆಯಲಿದೆ ಎಂಬ ವಿಚಾರ ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.
17/ 17
ಆದರೆ, ಸಂಪೂರ್ಣ ವೇಳಾಪಟ್ಟಿ ಇನ್ನೂ ಸಿದ್ಧವಾಗಿಲ್ಲ. ಫೈನಲ್ ಪಂದ್ಯ ಮೇ 24 ರಂದು ನಡೆಯಲಿದ್ದು, ಬ್ರಾಡ್ಕಾಸ್ಟಿಂಗ್ ಚಾನೆಲ್ಗಳ ಮನವಿಯ ಮೇರೆಗೆ ಪಂದ್ಯ 7:30 ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.