ಮಾಜಿ ಸಿಎಸ್ಕೆ ಆಟಗಾರ ಅಲ್ಬಿ ಮೊರ್ಕಲ್ ಕೂಡ ರೈನಾ ಅನುಪಸ್ಥಿತಿ ತಂಡದ ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆ ಎಂದು ಅಭಿಪ್ರಾಯಪಟ್ಟಿದ್ದರು. ಏಕೆಂದರೆ ರೈನಾ ಕೇವಲ ಬ್ಯಾಟ್ಸ್ಮನ್ ಮಾತ್ರವಲ್ಲ, ಉತ್ತಮ ಫೀಲ್ಡರ್ ಕೂಡ. ಹೀಗಾಗಿ ರೈನಾ ಅಲಭ್ಯತೆ ಚೆನ್ನೈ ತಂಡವನ್ನು ಕಾಡಲಿದೆ ಎಂದಿದ್ದರು.
IPLನ ಬಲಿಷ್ಠ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಒಂದು. ಆದರೆ ಪ್ರತಿಯೊಂದು ತಂಡಕ್ಕೂ ತನ್ನದೆಯಾದ ದೌರ್ಬಲ್ಯಗಳಿರುತ್ತವೆ ಎಂಬುದನ್ನು ಅಲ್ಲೆಗೆಳೆಯುವಂತಿಲ್ಲ. ಇದೀಗ ಸಿಎಸ್ಕೆ ತಂಡದ ಇಂತಹದೊಂದು ದೌರ್ಬಲ್ಯವನ್ನು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಬಹಿರಂಗಪಡಿಸಿದ್ದಾರೆ.
2/ 6
ಈಗಾಗಲೇ ತಂಡದಿಂದ ಸುರೇಶ್ ರೈನಾ ಹೊರಗುಳಿದಿರುವುದು ಸಿಎಸ್ಕೆ ತಂಡಕ್ಕೆ ಹಿನ್ನಡೆಯಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಜೋನ್ಸ್, ಈ ಅನುಪಸ್ಥಿತಿ ತಂಡವನ್ನು ಕಾಡಲಿದೆ ಎಂದಿದ್ದಾರೆ.
3/ 6
ಏಕೆಂದರೆ ರೈನಾ ಐಪಿಎಲ್ನಲ್ಲಿ ಅತೀ ಹೆಚ್ಚು ರನ್ಗಳಿಸಿದ ಆಟಗಾರರ ಪಟ್ಟಿಯಲ್ಲಿ ಟಾಪ್ 5 ಯಲ್ಲಿ ಇದ್ದಾರೆ. ಇಲ್ಲಿ ಮತ್ತೊಂದು ವಿಶೇಷತೆ ಎಂದರೆ ರೈನಾ ಎಡಗೈ ದಾಂಡಿಗ. ಹೀಗಾಗಿ ಸ್ಪಿನ್ ಬೌಲಿಂಗ್ಗೆ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದರು.
4/ 6
ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಇರುವವರು ಹೆಚ್ಚಿನವರು ಬಲಗೈ ಬ್ಯಾಟ್ಸ್ಮನ್ಗಳು. ಹೀಗಾಗಿ ತಂಡಕ್ಕೆ ಎಡಗೈ ಆಟಗಾರರ ಅವಶ್ಯಕತೆಯಿದೆ. ಇದುವೇ ತಂಡದ ದೌರ್ಬಲ್ಯವಾಗಿ ಪರಿಣಮಿಸಲಿದೆ ಎಂದು ಡೀನ್ ಜೋನ್ಸ್ ಅಭಿಪ್ರಾಯಪಟ್ಟಿದ್ದಾರೆ.
5/ 6
ಈ ಹಿಂದೆ ಮಾಜಿ ಸಿಎಸ್ಕೆ ಆಟಗಾರ ಅಲ್ಬಿ ಮೊರ್ಕಲ್ ಕೂಡ ರೈನಾ ಅನುಪಸ್ಥಿತಿ ತಂಡದ ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆ ಎಂದು ಅಭಿಪ್ರಾಯಪಟ್ಟಿದ್ದರು. ಏಕೆಂದರೆ ರೈನಾ ಕೇವಲ ಬ್ಯಾಟ್ಸ್ಮನ್ ಮಾತ್ರವಲ್ಲ, ಉತ್ತಮ ಫೀಲ್ಡರ್ ಕೂಡ. ಹೀಗಾಗಿ ರೈನಾ ಅಲಭ್ಯತೆ ಚೆನ್ನೈಯನ್ನು ಕಾಡಲಿದೆ ಎಂದಿದ್ದರು.
6/ 6
ಸದ್ಯ ಸಿಎಸ್ಕೆ ರೈನಾ ಹಾಗೂ ಹರ್ಭಜನ್ ಸ್ಥಾನದಲ್ಲಿ ಯುವ ಆಟಗಾರರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ಸೆಪ್ಟೆಂಬರ್ 19 ರಂದು ನಡೆಯಲಿರುವ ಮೊದಲ ಪಂದ್ಯದಲ್ಲೇ ಮುಂಬೈ ವಿರುದ್ಧ ಈ ಪ್ರಯೋಗ ಮಾಡಲು ಧೋನಿ ಅ್ಯಂಡ್ ಟೀಮ್ ಪ್ಲ್ಯಾನ್ ಮಾಡಿಕೊಂಡಿದೆ.