ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. 332 ಆಟಗಾರರ ಪೈಕಿ 8 ತಂಡಗಳು ಸೇರಿ ಒಟ್ಟು 73 ಆಟಗಾರರನ್ನು ಖರೀದಿಸಿದ್ದಾರೆ. ಈ ಪೈಕಿ ಚೆನ್ನೈ ತಂಡ ವಿಶೇಷವಾಗಿತ್ತು.
2/ 10
ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಹರಾಜಿನಲ್ಲಿ ಕೇವಲ 4 ಆಟಗಾರರನ್ನಷ್ಟೆ ಖರೀದಿ ಮಾಡಿತು. ಆದರೆ, ಈ ನಾಲ್ವರು ಪ್ರಮುಖ ಸ್ಟಾರ್ ಆಟಗಾರರು.
3/ 10
ಚೆನ್ನೈ ಗರಿಷ್ಠ ಮೊತ್ತಕ್ಕೆ ಖರೀದಿ ಮಾಡಿದ್ದು ಟೀಂ ಇಂಡಿಯಾ ಸ್ಪಿನ್ನರ್ ಪಿಯೂಷ್ ಚಾವ್ಲಾರನ್ನು. 6 ಕೋಟಿ 75 ಲಕ್ಷಕ್ಕೆ ಚಾವ್ಲಾ ಸಿಎಸ್ಕೆ ತಂಡ ಸೇರಿಕೊಂಡರು. (ಫೋಟೋ ಕೃಪೆ: CSK Twitter)
4/ 10
ಈ ಬಗ್ಗೆ ಮಾತನಾಡಿದ ಚಾವ್ಲಾ ಚೆನ್ನೈ ಸೂಪರ್ ಕಿಂಗ್ಸ್ ನನ್ನನ್ನು ಖರೀದಿ ಮಾಡಿದ್ದಕ್ಕೆ ತುಂಬಾ ಸಂತಸವಾಗಿದೆ ಎಂದು ಹೇಳಿದ್ದಾರೆ.
5/ 10
ಐಪಿಎಲ್ನಲ್ಲಿ ಆಡಲು ಚೆನ್ನೈಗಿಂತ ಉತ್ತಮ ತಂಡ ನನಗೆ ಬೇರೆಯಿಲ್ಲ. ಅದರಲ್ಲು ಎಂಎಸ್ ಧೋನಿಯಂತಹ ಅತ್ಯುತ್ತಮ ನಾಯಕತ್ವದಲ್ಲಿ ಆಡುವ ಅವಕಾಶ ಸಿಕ್ಕಿದೆ ಎಂದು ಚಾವ್ಲಾ ಖುಷಿ ಹಂಚಿಕೊಂಡಿದ್ದಾರೆ.
6/ 10
2020 ಐಪಿಎಲ್ ಹರಾಜು ಪ್ರಕ್ರಿಯೆಗೂ ಮುನ್ನ ಪಿಯೂಷ್ ಚಾವ್ಲಾರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ತಂಡದಿಂದ ಕೈಬಿಟ್ಟಿತ್ತು. 1 ಕೋಟಿ ಮೂಲಬೆಲೆಗೆ ಲಭ್ಯರಿದ್ದ ಚಾವ್ಲಾರನ್ನು ಚೆನ್ನೈ 6.75 ಕೋಟಿಗೆ ಖರೀದಿ ಮಾಡಿತು.
7/ 10
ಉಳಿದ 3 ಆಟಗಾರರ ಪೈಕಿ ಸ್ಯಾಮ್ ಕುರ್ರನ್ 5.5 ಕೋಟಿ, ಜೋಶ್ ಹ್ಯಾಜ್ಲೆವುಡ್ 2 ಕೋಟಿ ಹಾಗೂ ಆರ್ ಸಾಯ್ ಕಿಶೋರ್ 20 ಲಕ್ಷ ಕೊಟ್ಟು ಚೆನ್ನೈ ಈ ಬಾರಿಯ ಹರಾಜಿನಲ್ಲಿ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. (ಫೋಟೋ ಕೃಪೆ: CSK Twitter)
8/ 10
ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಗರಿಷ್ಠ ಮೊತ್ತಕ್ಕೆ ಸೇಲ್ ಆಗಿದ್ದು ಆಸ್ಟ್ರೇಲಿಯಾ ಆಟಗಾರ ಪ್ಯಾಟ್ ಕಮಿನ್ಸ್. ಇವರು ಬರೋಬ್ಬರಿ 15 ಕೋಟಿಯ 50 ಲಕ್ಷಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸೇರಿಸಿಕೊಂಡಿದ್ದಾರೆ.
9/ 10
ಗ್ಲೆನ್ ಮ್ಯಾಕ್ಸ್ವೆಲ್ 10 ಕೋಟಿ 75 ಲಕ್ಷಕ್ಕೆ ಕಿಂಗ್ಸ್ ಇಲೆವೆನ್ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.
10/ 10
ಆರ್ಸಿಬಿ ಕ್ರಿಸ್ ಮೊರೀಸ್ ಅವರನ್ನು 10 ಕೋಟಿ ಕೊಟ್ಟು ಖರೀದಿ ಮಾಡಿದ್ದು ಗರಿಷ್ಠ ಮೊತ್ತಕ್ಕೆ ಸೇಲ್ ಆದ 3ನೇ ಆಟಗಾರರಾಗಿದ್ದಾರೆ.