ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲು ತಿಂಗಳುಗಳು ಮಾತ್ರ ಉಳಿದಿವೆ. ಇದರ ಬೆನ್ನಲ್ಲೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರರೊಬ್ಬರು ಟೂರ್ನಿಯಿಂದ ಹೊರಬಿದ್ದಿದ್ದಾರೆ.
2/ 13
ಇಂಡಿಯನ್ ಪ್ರೀಮಿಯರ್ ಲೀಗ್ನ ಅತ್ಯಂತ ಹಿರಿಯ ಆಟಗಾರ ಪ್ರವೀಣ್ ತಾಂಬೆ ಅವರ ಆಯ್ಕೆ ವಿವಾದಕ್ಕೆ ಕಾರಣವಾಗಿತ್ತು.
3/ 13
13ನೇ ಸೀಸನ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 20 ಲಕ್ಷ ರೂ. ನೀಡಿ ತಾಂಬೆಯನ್ನು ಖರೀದಿಸಿತ್ತು. ಆದರೀಗ ಐಪಿಎಲ್ನಿಂದ ಹಿರಿಯ ಆಟಗಾರನನ್ನು ಅನರ್ಹಗೊಳಿಸಲಾಗಿದ.
4/ 13
48 ವರ್ಷದ ಅನುಭವಿ ಲೆಗ್ ಸ್ಪಿನ್ನರ್ ಈ ಮೊದಲು ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ಪರ ಆಡಿದ್ದರು. 2013 ರಲ್ಲಿ ಐಪಿಎಲ್ ಪದಾರ್ಪಣೆ ಮಾಡಿದ್ದ ತಾಂಬೆ, ನಾಲ್ಕು ಸೀಸನ್ಗಳನ್ನು ಪ್ರತಿನಿಧಿಸಿದ್ದರು.
5/ 13
ಕಾಪರ್ ಲೆಗ್ ಬ್ರೇಕ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಂಗೆಡಿಸುವ ತಾಂಬೆ ಇದುವರೆಗೆ 33 ಐಪಿಎಲ್ ಪಂದ್ಯಗಳನ್ನಾಡಿದ್ದಾರೆ. ಅದರಲ್ಲಿ 28 ವಿಕೆಟ್ ಕಬಳಿಸುವ ಮೂಲಕ ಗಮನ ಸೆಳೆದಿದ್ದರು.
6/ 13
61 ಟಿ 20 ಪಂದ್ಯಗಳಿಂದ 67 ವಿಕೆಟ್ ಪಡೆದು ಮಿಂಚಿರುವ ತಾಂಬೆ 2016 ರಲ್ಲಿ ಕೊನೆಯ ಬಾರಿ ಸನ್‌ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದಿದ್ದರು.
7/ 13
ಆ ಬಳಿಕ ಐಪಿಎಲ್ನಿಂದ ದೂರ ಉಳಿದಿದ್ದ ತಾಂಬೆ ಕಳೆದ ವರ್ಷ ವಿದೇಶದಲ್ಲಿ ನಡೆದ ಟಿ10 ಕ್ರಿಕೆಟ್ನಲ್ಲಿ ಅದ್ಭುತ ಬೌಲಿಂಗ್ ಮೂಲಕ 15ಕ್ಕೆ 5 ವಿಕೆಟ್ ಉರುಳಿಸಿ ಗಮನ ಸೆಳೆದಿದ್ದರು. ಈ ಪ್ರದರ್ಶನದಿಂದ 2020 ಐಪಿಎಲ್ ಹರಾಜು ಪಟ್ಟಿಯಲ್ಲಿ ತಾಂಬೆಗೆ ಅವಕಾಶ ನೀಡಲಾಗಿತ್ತು.
8/ 13
ಆದರೀಗ ಅದುವೇ ತಾಂಬೆಗೆ ಮುಳುವಾಗಲಿದೆ. ಏಕೆಂದರೆ ಬಿಸಿಸಿಐ ಒಪ್ಪಂದದ ನಿಯಮದ ಪ್ರಕಾರ ಭಾರತದ ಯಾವುದೇ ಕ್ರಿಕೆಟಿಗ ವಿಶ್ವದ ಬೇರೆ ಭಾಗಗಳಲ್ಲಿ ನಡೆಯುವ ಲೀಗ್ನಲ್ಲಿ ಪಾಲ್ಗೊಳ್ಳುವಂತಿಲ್ಲ. ಹೀಗಾಗಿ 2020ರ ಐಪಿಎಲ್‌ನಲ್ಲಿ ತಾಂಬೆ ಅವರಿಗೆ ಅವಕಾಶ ನೀಡಿದ ಬಗ್ಗೆ ಪ್ರಶ್ನೆಗಳೆದ್ದಿತ್ತು.
9/ 13
ಬಿಸಿಸಿಐ ಒಪ್ಪಂದ ಪಡೆದಿರುವ ಯಾವುದೇ ಆಟಗಾರ ವಿಶ್ವದ ಇತರೆ ಟೂರ್ನಿಯಲ್ಲಿ ಭಾಗವಹಿಸುವಂತಿಲ್ಲ. ಅದು ಟಿ 20 ಮತ್ತು ಟಿ 10 ಲೀಗ್ಗೂ ಅನ್ವಯಿಸುತ್ತದೆ. ಇನ್ನು ಏಕದಿನ ಕ್ರಿಕೆಟ್ ಅಥವಾ ಕೌಂಟಿ ಕ್ರಿಕೆಟ್‌ಗಳಲ್ಲಿ ಭಾಗವಹಿಸಲು ಬಿಸಿಸಿಐನಿಂದ ಅನುಮತಿ ಪಡೆದಿರಬೇಕು.
10/ 13
ಹೀಗಾಗಿ ಪ್ರವೀಣ್ ತಾಂಬೆ ವಿಚಾರವನ್ನು ಪರಿಶೀಲಿಸುತ್ತಿದ್ದೇವೆ ಎಂದು ಐಪಿಎಲ್ ಆಡಳಿತ ಮಂಡಳಿ ಈ ಹಿಂದೆ ತಿಳಿಸಿತ್ತು.
11/ 13
ಹೀಗಾಗಿ ತಾಂಬೆ ಅವರನ್ನು ಐಪಿಎಲ್ ನಲ್ಲಿ ಆಡುವುದನ್ನು ಬಹಿಷ್ಕರಿಸಲಾಗಿದೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.
12/ 13
ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ತಾಂಬೆ ಬದಲಿಗೆ ಮತ್ತೋರ್ವ ಆಟಗಾರನ ಆಯ್ಕೆಗೆ ಐಪಿಎಲ್ ಆಡಳಿತ ಮಂಡಳಿ ಅವಕಾಶ ನೀಡಲಿದೆ ಎಂದು ಹೇಳಲಾಗಿದೆ.
13/ 13
ಹೀಗಾಗಿ ಯಾವ ಆಟಗಾರನಿಗೆ ಮತ್ತೆ ಐಪಿಎಲ್ 2020 ಆಡುವ ಅದೃಷ್ಟ ಸಿಗಲಿದೆ ಎಂಬ ಕುತೂಹಲ ಕೂಡ ಕೆಕೆಆರ್ ಅಭಿಮಾನಿಗಳಲ್ಲಿದೆ.
First published:
113
IPL 2020: ಐಪಿಎಲ್ ಆರಂಭಕ್ಕೂ ಮುನ್ನವೇ ಕೆಕೆಆರ್ ಆಟಗಾರನಿಗೆ ನಿಷೇಧ