ಮಿಚೆಲ್ ಸ್ಟಾರ್ಕ್: ಆಸೀಸ್ನ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್ ಟಿ-20 ಕ್ರಿಕೆಟ್ನ ಡೆತ್ ಓವರ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡವರು. ಸ್ಟೈನ್, ಕಲ್ಟನ್ ನೈಲ್ ಹಾಗೂ ಟಿಮ್ ಸೌಥಿ ಕೈಬಿಟ್ಟಿರುವ ಆರ್ಸಿಬಿಗೆ ಅಪಾಯಕಾರಿ ಬೌಲರ್ನ ಅಗತ್ಯವಿದೆ. ಇತ್ತ ಸಿಎಸ್ಕೆ ತಂಡಕ್ಕೂ ಪ್ರಮುಖ ವೇಗಿಯ ಅವಶ್ಯತೆಯಿದೆ. ಹೀಗಾಗಿ ಸ್ಟಾರ್ಕ್ಗಾಗಿ ಹರಾಜಿನಲ್ಲಿ ಈ ಎರಡು ತಂಡದ ನಡುವೆ ಫೈಟ್ ನಡೆಯಲಿದೆ ಎಂದು ಹೇಳಲಾಗಿದೆ.
ಸಿಎಸ್ಕೆ ತನ್ನಲ್ಲೆ ಉಳಿಸಿಕೊಂಡ ಆಟಗಾರರು: ಎಂಎಸ್ ಧೋನಿ, ಸುರೇಶ್ ರೈನಾ, ಫಾಫ್ ಡುಪ್ಲೆಸಿಸ್, ಅಂಬಟಿ ರಾಯುಡು, ಮುರಳಿ ವಿಜಯ್, ರುತುರಾಜ್ ಗಾಯಕ್ವಾಡ್, ಶೇನ್ ವಾಟ್ಸನ್, ಡ್ವೇನ್ ಬ್ರಾವೋ, ಕೇದರ್ ಜಾಧವ್, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟನರ್, ಮೋನು ಕುಮಾರ್, ಎನ್ ಜಗದೀಶನ್, ಹರ್ಭಜನ್ ಸಿಂಗ್, ಕರ್ಣ್ ಶರ್ಮಾ, ಇಮ್ರಾನ್ ತಾಹಿರ್, ದೀಪಕ್ ಚಹಾರ್, ಕೆಎಂ ಆಸಿಫ್.