ಇನ್ನು ವಿರೇಂದ್ರ ಸೆಹ್ವಾಗ್ ಇಂತಹದೊಂದು ಟ್ವೀಟ್ ಮಾಡಲು ಮುಖ್ಯ ಕಾರಣ, 3ನೇ ಟೆಸ್ಟ್ ಪಂದ್ಯದ ವೇಳೆ ರವೀಂದ್ರ ಜಡೇಜಾ ಗಾಯಗೊಂಡು ಅಂತಿಮ ಪಂದ್ಯದಿಂದ ಹೊರಗುಳಿದ್ದಾರೆ. ಹಾಗೆಯೇ ಹನುಮ ವಿಹಾರಿ ಹಾಗೂ ಜಸ್ಪ್ರೀತ್ ಬುಮ್ರಾ ಗಾಯಗೊಂಡಿದ್ದಾರೆ. ಇನ್ನು ಬದಲಿ ಆಯ್ಕೆಯಾಗಿದ್ದ ಮಯಾಂಕ್ ಕೂಡ ಅಭ್ಯಾಸದ ಗಾಯಕ್ಕೆ ತುತ್ತಾಗಿದ್ದಾರೆ. ಇತ್ತ ತಂಡದಲ್ಲಿ ಅನುಭವಿ ಆಟಗಾರರ ಕೊರತೆ ಕೂಡ ಇದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.