ಭಾರತ ಅಕ್ಟೋಬರ್ 24 ರಂದು ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯವನ್ನು ಆಡುವ ಮೂಲಕ ಟಿ20 ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಆದರೆ, ಅದಕ್ಕೆ ಮುನ್ನ ಸೋಮವಾರ ಮತ್ತು ಬುಧವಾರ ಇಂಗ್ಲೆಂಡ್-ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಆದರೆ, ಈ ಪಂದ್ಯದಲ್ಲಿ ಇಶಾನ್ ಕಿಶನ್ - ಕೆ.ಎಲ್. ರಾಹುಲ್ ಬ್ಯಾಟಿಂಗ್ ಆರ್ಡರ್ ಮತ್ತು ಹಾರ್ದಿಕ್ ಪಾಂಡ್ಯ ಫಾರ್ಮ್ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗಿದೆ.
ಪ್ರಸ್ತುತ ಭಾರತ ತಂಡದಲ್ಲಿರುವ ಎಲ್ಲಾ ಆಟಗಾರರು ನೇರವಾಗಿ ಐಪಿಎಲ್ ಟೂರ್ನಿಯಿಂದ ವಿಶ್ವ ಟಿ20 ಗೆ ಆಗಮಿಸಿದ್ದು, ಅಭ್ಯಾಸದ ವಿಚಾರಗಳು ತಂಡಕ್ಕೆ ಹೆಚ್ಚು ತಲೆನೋವಾಗಿ ಪರಿಣಮಿಸಿಲ್ಲ. ಏಕೆಂದರೆ ಎಲ್ಲರೂ ಐಪಿಎಲ್ನಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಆದರೆ, ಪಾಕಿಸ್ತಾನದ ಎದುರಿನ ಪಂದ್ಯಕ್ಕಿಂತ ಮುನ್ನ ಭಾರತ ತಂಡವನ್ನು ಫೈನ್ ಟ್ಯೂನ್ ಮಾಡುವ ಅಗತ್ಯ ಮತ್ತು ಜವಾಬ್ದಾರಿ ನಾಯಕ ವಿರಾಟ್ ಕೊಹ್ಲಿ-ಎಂ.ಎಸ್. ಧೋನಿ ಮುಂದೆ ಇದೆ.
ಇಂಗ್ಲೆಂಡ್ ಮತ್ತು ಬುಧವಾರ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಎಲ್ಲಾ ಆಟಗಾರರಿಗೂ ಹೆಚ್ಚಿನ ಓವರ್ಗಳನ್ನು ನೀಡಲು ಅಥವಾ ಬ್ಯಾಟಿಂಗ್ ಮಾಡಲು ಅವಕಾಶ ಕಲ್ಪಿಸಿಕೊಡಬೇಕಾಗಿದೆ. ಇನ್ನೂ ಬ್ಯಾಟಿಂಗ್ ವಿಭಾಗದಲ್ಲಿ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯುವುದು ಖಚಿತವಾಗಿದೆ. ಆದರೆ, ಅವರ ಜೊತೆಗೆ ಕಣಕ್ಕಿಳಿಯುವವರು ಯಾರ? ಎಂಬ ಪ್ರಶ್ನೆ ಕಾಡುತ್ತಿದೆ.
ಇನ್ನೂ ಇಶಾನ್ ಕಿಶನ್ ಎಡಗೈ ಬ್ಯಾಟ್ಸ್ಮನ್ ಆಗಿದ್ದು, ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ ಐಪಿಎಲ್ನ ಕೊನೆಯ ಪಂದ್ಯದಲ್ಲಿನ ಅವರ ಅಬ್ಬರದ ಆಟವನ್ನು ಯಾರೂ ಮರೆಯಲಿಕ್ಕೆ ಸಾಧ್ಯವಿಲ್ಲ. ಇದಲ್ಲದೆ, ಅನೇಕ ಪಂದ್ಯಗಳಲ್ಲಿ ಕಿಶನ್ ಉತ್ತಮ ಬ್ಯಾಟಿಂಗ್ ನಡೆಸಿದ್ದಾರೆ. ಮುಂಬೈ ತಂಡದಲ್ಲಿ ಅವರು ರಾಹುಲ್ ಜೊತೆ ಕಣಕ್ಕಿಳಿದ ಅನುಭವ ಹೊಂದಿದ್ದಾರೆ. ಹೀಗಾಗಿ ಕಿಶನ್-ರಾಹುಲ್ ಇಬ್ಬರಲ್ಲಿ ಒಬ್ಬರ ಆಯ್ಕೆ ನಾಯಕ ಕೊಹ್ಲಿಗೆ ತಲೆನೋವಾಗಲಿದೆ.
ಇದಲ್ಲದೆ, ಹಾರ್ದಿಕ್ ಪಾಂಡ್ಯ ಫಾರ್ಮ್ ಮತ್ತು ಅವರನ್ನು ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಸಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಹಾರ್ದಿಕ್ ಅವರನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ನಂ .6 ಸ್ಥಾನಕ್ಕೆ ಬಲವಂತಪಡಿಸಬಹುದು, ಇದು ಫಿನಿಶರ್ಗೆ ಸೂಕ್ತವಾದ ಕ್ರಮಾಂಕ. ಆದರೆ, ಐಪಿಎಲ್ನಲ್ಲಿ ಹಾರ್ದಿಕ್ ಪಾಂಡ್ಯ ಉತ್ತಮ ಫಾರ್ಮ್ನಲ್ಲಿದ್ದು ದೊಡ್ಡ ತಲೆನೋವಾಗಿದೆ. ಅಲ್ಲದೆ, ಅವರು ಬೌಲಿಂಗ್ ಮಾಡ್ತಾರ? ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಕೆಳಕ್ರಮಾಂಕದಲ್ಲಿ ರಿಷಬ್ ಪಂತ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಯುವುದು ಖಚಿತವಾಗಿದೆ. ಆದರೆ, 6ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ನಡುವೆ ಪೈಪೋಟಿ ಇದೆ. ಆಲ್ರೌಂಡರ್ ಕೋಟಾದಲ್ಲಿ ಜಡೇಜಾ ಕಣಕ್ಕಿಳಿಯುವುದು ಖಚಿತವಾಗಿದೆ. ಅಲ್ಲದೆ, ಅವರು ಬ್ಯಾಟಿಂಗ್ ಫಾರ್ಮ್ನಲ್ಲಿರುವ ಕಾರಣ ಹಾರ್ದಿಕ್ಗಿಂತ ಮುನ್ನ ಕಣಕ್ಕಿಳಿಯಲಿದ್ದಾರ? ಎಂಬ ಪ್ರಶ್ನೆ ಹುಟ್ಟಿದೆ.