ಮಂದಾನ ಮಿಂಚಿನ ಆಟದಿಂದ ದಾಖಲೆ ಬರೆದ ಭಾರತೀಯ ಮಹಿಳೆಯರು; ರೋಚಕ ಪಂದ್ಯದಲ್ಲಿ ಸೋತ ಆಸೀಸ್!
India Women vs Australia Women: 19.4 ಓವರ್ನಲ್ಲಿ ಭಾರತದ ವನಿತೆಯರು 177 ರನ್ ಚೇಸ್ ಮಾಡಿ ದಾಖಲೆ ಬರೆದರು. 177 ರನ್ ಟೀಂ ಇಂಡಿಯಾ ವನಿತೆಯರು ಟಿ-20 ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಈವರೆಗೆ ಚೇಸ್ ಮಾಡಿದ ಗರಿಷ್ಠ ಮೊತ್ತವಾಗಿದೆ.
ಭಾರತ, ಇಂಗ್ಲೆಂಡ್ ಹಾಗೂ ಆತಿಥೇಯ ಆಸ್ಟ್ರೇಲಿಯಾ ಒಳಗೊಂಡ ಮಹಿಳೆಯರ ತ್ರಿಕೋನ ಟಿ-20 ಸರಣಿ ರೋಚಕ ಘಟ್ಟಕ್ಕೆ ಬಂದು ತಲುಪಿದೆ.
2/ 12
ಇಂದು ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತೀಯ ವನಿತೆಯರು ದಾಖಲೆಯ ಜಯ ಸಾಧಿಸಿ ಸರಣಿಯನ್ನ ಜವಂತವಾಗಿರಿಸಿದೆ.
3/ 12
ಸ್ಮೃತಿ ಮಂದಾನ ಅವರ ಅಮೋಘ ಆಟದ ನೆರವಿನಿಂದ ಭಾರತ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
4/ 12
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 20 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ ಬರೋಬ್ಬರಿ 173 ರನ್ ಬಾರಿಸಿದರು.
5/ 12
ಆಸೀಸ್ ಪರ ಆಶ್ಲೆಗ್ ಗಾರ್ಡನರ್ 57 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್ ಬಾರಿಸಿ 93 ರನ್ ಚಚ್ಚಿದರು. ನಾಯಕಿ ಮೆಗ್ ಲನ್ನಿಂಗ್ 22 ಎಸೆತಗಳಲ್ಲಿ 37 ರನ್ ಬಾರಿಸಿದರು.
6/ 12
ಭಾರತ ಪರ ದೀಪ್ತಿ ಶರ್ಮಾ 2 ವಿಕೆಟ್ ಕಿತ್ತರೆ, ರಾಜೇಶ್ವರಿ ಗಾಯಕ್ವಾಡ್, ರಾಧಾ ಯಾದವ್ ಹಾಗೂ ಹರ್ಲೀನ್ ಡೊಲ್ ತಲಾ 1 ವಿಕೆಟ್ ಪಡೆದರು.
7/ 12
174 ರನ್ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಭಾರತ 19.4 ಓವರ್ನಲ್ಲೇ 3 ವಿಕೆಟ್ ನಷ್ಟಕ್ಕೆ 177 ರನ್ ಬಾರಿಸಿ ಗೆಲುವು ಸಾಧಿಸಿದತು.
8/ 12
ಭಾರತ ಪರ ಸ್ಮೃತಿ ಮಂದಾನ 48 ಎಸೆತಗಳಲ್ಲಿ 55 ರನ್ ಚಚ್ಚಿದರೆ, ಶಫಾಲಿ ವರ್ಮಾ ಕೇವಲ 28 ಎಸೆತಗಳಲ್ಲಿ 49 ರನ್ ಬಾರಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
9/ 12
19.4 ಓವರ್ನಲ್ಲಿ ಭಾರತದ ವನಿತೆಯರು 177 ರನ್ ಚೇಸ್ ಮಾಡಿ ದಾಖಲೆ ಬರೆದರು. 177 ರನ್ ಟೀಂ ಇಂಡಿಯಾ ವನಿತೆಯರು ಟಿ-20 ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಈವರೆಗೆ ಚೇಸ್ ಮಾಡಿದ ಗರಿಷ್ಠ ಮೊತ್ತವಾಗಿದೆ.
10/ 12
ಈ ಗೆಲುವಿನೊಂದಿಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ತಲಾ ಎರಡು ಗೆಲುವು ಹಾಗೂ ಸೋಲು ದಾಖಲಿಸಿರುವ ಭಾರತ ಒಟ್ಟು 4 ಅಂಕಗಳನ್ನು ಸಂಪಾದಿಸಿದೆ.
11/ 12
ಈ ಮೂಲಕ ತನ್ನ ಫೈನಲ್ ಆಸೆಯನ್ನು ಹರ್ಮನ್ಪ್ರೀತ್ ಪಡೆ ಜೀವಂತವಾಗಿರಿಸಿದೆ. ಆದರೂ ರನ್ ರೇಟ್ ನೆಗೆಟಿವ್ ಆಗಿರುವುದು ಹಿನ್ನೆಡೆಗೆ ಕಾರಣವಾಗಿದೆ.
12/ 12
ಇದೀಗ ಫೈನಲ್ ಪ್ರವೇಶಿಸಲು ಅಂತಿಮ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಆಸೀಸ್ ಸೋಲಿಗಾಗಿ ಭಾರತದ ಮಹಿಳೆಯರು ಕಾಯಬೇಕಿದೆ.