ಏಕೆಂದರೆ ರಹಾನೆ ಕೊಹ್ಲಿಗಿಂತ ಉತ್ತಮ ನಾಯಕ. ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಆಟಗಾರರು ಒಂದು ಹೆಜ್ಜೆಯಿಡಲು ಭಯಪಡುತ್ತಾರೆ ಎಂಬುದು ನನ್ನ ಅನಿಸಿಕೆ. ಕೊಹ್ಲಿ ಪ್ರತಿಯೊಬ್ಬರಿಂದಲೂ ಸಂಪೂರ್ಣ ವೃತಿಪರತೆಯನ್ನು ಬಯಸುತ್ತಾರೆ. ಎಲ್ಲರೂ ಫಿಟ್ ಆಗಿರಬೇಕು. ಶ್ರೇಷ್ಠ ಪ್ರದರ್ಶನ ನೀಡಬೇಕು. ಉತ್ತಮ ಕ್ಯಾಚ್ಗಳನ್ನು ಪಡೆಯಬೇಕು ಎಂದು ಬಯಸುತ್ತಾರೆ. ಇದು ಆಟಗಾರರಲ್ಲಿ ಚಿಂತೆಯನ್ನು ಮೂಡಿಸುತ್ತದೆ. ಆದರೆ ರಹಾನೆ ನಾಯಕತ್ವದಲ್ಲಿ ಎಲ್ಲಾ ಆಟಗಾರರು ನಿರಾಳವಾಗಿರುವಂತೆ ಕಂಡು ಬರುತ್ತಾರೆ ಎಂದು ಶೇನ್ ಲೀ ಹೇಳಿದ್ದಾರೆ.