ರಸ್ತೆ ಸುರಕ್ಷತೆ ಜಾಗೃತಿಗಾಗಿ ಆಯೋಜಿಸಲಾಗಿರುವ ರಸ್ತೆ ಸುರಕ್ಷತೆ ವಿಶ್ವ ಸರಣಿ ಮುಂದಿನ ತಿಂಗಳು ಮಾರ್ಚ್ 7 ರಿಂದ ಶುರುವಾಗಲಿದೆ. ಸದ್ಯ ಈ ಸರಣಿಗೆ ಟೀಂ ಇಂಡಿಯಾದ 12 ದಿಗ್ಗಜ ಆಟಗಾರರ ಹೆಸರು ಪ್ರಕಟವಾಗಿದೆ.
2/ 11
ಕ್ರಿಕೆಟ್ ಲೋಕದ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವೆಸ್ಟ್ ಇಂಡೀಸ್ನ ಮಾಜಿ ಆಟಗಾರ ಬ್ರಿಯಾನ್ ಲಾರಾ ಸೇರಿದಂತೆ ಒಂದಷ್ಟು ಮಾಜಿ ಕ್ರಿಕೆಟಿಗರು ಈ ವಿಶೇಷ ಟಿ-20 ಪಂದ್ಯದಲ್ಲಿ ಬ್ಯಾಟ್ ಬೀಸಲು ತಯಾರಾಗಿದ್ದಾರೆ.
3/ 11
ಭಾರತ ತಂಡವನ್ನು ಸಚಿನ್ ತೆಂಡೂಲ್ಕರ್ ನಾಯಕನಾಗಿ ಮುನ್ನಡೆಸಲಿದ್ದಾರೆ. ಸಚಿನ್ ಜೊತೆ ಓಪನರ್ ಆಗಿ ವಿರೇಂದ್ರ ಸೆಹ್ವಾಗ್ ಕಣಕ್ಕಿಳಿದರೆ, ಯುವರಾಜ್ ಸಿಂಗ್ ಕೂಡ ತಂಡದಲ್ಲಿದ್ದಾರೆ.
4/ 11
ಭಾರತ ದಿಗ್ಗಜರ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಸಚಿನ್ ತೆಂಡೂಲ್ಕರ್ (ನಾಯಕ), ವಿರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್ ಇದ್ದಾರೆ.
5/ 11
ಬೌಲಿಂಗ್ ವಿಭಾಗದಲ್ಲಿ ಜಹೀರ್ ಖಾನ್, ಇರ್ಫಾನ್ ಪಠಾಣ್, ಅಜಿತ್ ಅಗರ್ಕರ್, ಸಂಜಯ್ ಬಂಗಾರ್, ಮುನಾಫ್ ಪಟೇಲ್, ಪ್ರಗ್ಯಾನ್ ಓಜಾ, ಸೈರಾಜ್ ಬಹುತುಲೆ ಇದ್ದು ಸಮೀರ್ ದಿಘ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆದುಕೊಂಡಿದ್ದಾರೆ.
6/ 11
ಭಾರತ ದಿಗ್ಗಜರು ವೆಸ್ಟ್ ಇಂಡೀಸ್ ದಿಗ್ಗಜರ ವಿರುದ್ಧ ಮಾರ್ಚ್ 7 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲ ಪಂದ್ಯವನ್ನು ಆಡಲಿದೆ.
7/ 11
ಬಳಿಕ ಮಾರ್ಚ್ 10 ರಂದು ಮುತ್ತಯ್ಯ ಮುರಳೀಧರ್ ನಾಯಕತ್ವದ ಶ್ರೀಲಂಕಾ ತಂಡವನ್ನು ಎದುರಿಸಲಿದೆ.
8/ 11
ಮಾರ್ಚ್ 14 ರಂದು ದಕ್ಷಿಣ ಆಫ್ರಿಕಾ ಲೆಜೆಂಡ್ ವಿರುದ್ಧ ಹಾಗೂ ಮಾರ್ಚ್ 20 ರಂದು ಆಸ್ಟ್ರೇಲಿಯಾ ಲೆಜೆಂಡ್ ವಿರುದ್ಧ ಭಾರತ ಸೆಣೆಸಾಟ ನಡೆಸಲಿದೆ.
9/ 11
2013ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ಸಚಿನ್, ಬಳಿಕ 2015ರಲ್ಲಿ ಯುಎಸ್ಎನಲ್ಲಿ ಕ್ರಿಕೆಟ್ ಪ್ರಚಾರಕ್ಕಾಗಿ ಟಿ-20 ಟೂರ್ನಮೆಂಟ್ನಲ್ಲಿ ಕಾಣಿಸಿಕೊಂಡಿದ್ದರು. ಇದೇ ಮಾದರಿಯಲ್ಲಿ ಇರಲಿದೆ ಭಾರತದಲ್ಲಿ ಆಯೋಜಿಸಲಾಗುವ ರಸ್ತೆ ಸುರಕ್ಷತಾ ಜಾಗೃತಿ ಟೂರ್ನಿ.
10/ 11
ರಸ್ತೆ ಸುರಕ್ಷತಾ ವಿಶ್ವ ಸಿರೀಸ್ನಲ್ಲಿ ಒಟ್ಟು 11 ಪಂದ್ಯಗಳು ನಡೆಯಲಿದೆ. 6 ತಂಡಗಳು ಪಾಲ್ಗೊಳ್ಳುತ್ತಿದೆ.
11/ 11
ಎರಡು ಪಂದ್ಯಗಳು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದರೆ, ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಾಲ್ಕು ಹಾಗೂ ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಾಲ್ಕು ಪಂದ್ಯಗಳು ಆಯೋಜಿಸಲಾಗಿದೆ.