IND vs AUS: ಮೈದಾನದಲ್ಲೇ ಇಶಾನ್ ಕಿಶನ್ ಮೇಲೆ ರೋಹಿತ್ ಅಸಮಾಧಾನ! ಕೋಪದಲ್ಲಿ ಹೊಡೆಯಲು ಕೈ ಎತ್ತಿದ ಕ್ಯಾಪ್ಟನ್

ಬಾರ್ಡರ್​ ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳಾದ ಉಸ್ಮಾನ್ ಖವಾಜಾ ಮತ್ತು ಕ್ಯಾಮರೂನ್ ಗ್ರೀನ್ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಮೊದಲ ದಿನ ಖವಾಜಾ ಶತಕ ಸಿಡಿಸಿದರೆ, ಎರಡನೇ ದಿನ ಗ್ರೀನ್ ಶತಕ ದಾಖಲಿಸಿದರು. ಸದ್ಯ ಆಸ್ಟ್ರೇಲಿಯಾ ಬೃಹತ್ ಮೊತ್ತದತ್ತ ಸಾಗುತ್ತಿದೆ

First published:

  • 17

    IND vs AUS: ಮೈದಾನದಲ್ಲೇ ಇಶಾನ್ ಕಿಶನ್ ಮೇಲೆ ರೋಹಿತ್ ಅಸಮಾಧಾನ! ಕೋಪದಲ್ಲಿ ಹೊಡೆಯಲು ಕೈ ಎತ್ತಿದ ಕ್ಯಾಪ್ಟನ್

    ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತದ ಬೌಲರ್‌ಗಳು ಯಾವುದೇ ಅವಕಾಶ ನೀಡದೆ ರನ್‌ಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

    MORE
    GALLERIES

  • 27

    IND vs AUS: ಮೈದಾನದಲ್ಲೇ ಇಶಾನ್ ಕಿಶನ್ ಮೇಲೆ ರೋಹಿತ್ ಅಸಮಾಧಾನ! ಕೋಪದಲ್ಲಿ ಹೊಡೆಯಲು ಕೈ ಎತ್ತಿದ ಕ್ಯಾಪ್ಟನ್

    ನಾಲ್ಕನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳಾದ ಉಸ್ಮಾನ್ ಖವಾಜಾ ಮತ್ತು ಕ್ಯಾಮರೂನ್ ಗ್ರೀನ್ ಶತಕ ಬಾರಿಸಿದರು. ಮೊದಲ ದಿನ ಖವಾಜಾ ಶತಕ ಸಿಡಿಸಿದರೆ, ಎರಡನೇ ದಿನ ಗ್ರೀನ್ ಶತಕ ದಾಖಲಿಸಿದರು. ಸದ್ಯ ಆಸ್ಟ್ರೇಲಿಯಾ ಬೃಹತ್ ಸ್ಕೋರ್ ಮೇಲೆ ಕಣ್ಣಿಟ್ಟಿದೆ.

    MORE
    GALLERIES

  • 37

    IND vs AUS: ಮೈದಾನದಲ್ಲೇ ಇಶಾನ್ ಕಿಶನ್ ಮೇಲೆ ರೋಹಿತ್ ಅಸಮಾಧಾನ! ಕೋಪದಲ್ಲಿ ಹೊಡೆಯಲು ಕೈ ಎತ್ತಿದ ಕ್ಯಾಪ್ಟನ್

    ಮೊದಲ ದಿನದ ಆಟದಲ್ಲಿ ರೋಹಿತ್ ಶರ್ಮಾ ಸಹ ಆಟಗಾರ ಇಶಾನ್ ಕಿಶನ್ ವಿರುದ್ಧ ಅಸಹನೆ ವ್ಯಕ್ತಪಡಿಸಿದ ಘಟನೆ ನಡೆದಿದೆ. ಆಡುವ ಬಳಗದಲ್ಲಿಇಲ್ಲದ ಇಶಾನ್ ಕಿಶನ್ ಮೊದಲ ದಿನ ಡ್ರಿಂಕ್ಸ್ ಬಾಯ್ ಆಗಿದ್ದರು. ಪಂದ್ಯದ ಮಧ್ಯೆ ಭಾರತದ ಆಟಗಾರರಿಗೆ ಡ್ರಿಂಕ್ಸ್ ತಂದು ಕೊಡುತ್ತಿದ್ದರು.

    MORE
    GALLERIES

  • 47

    IND vs AUS: ಮೈದಾನದಲ್ಲೇ ಇಶಾನ್ ಕಿಶನ್ ಮೇಲೆ ರೋಹಿತ್ ಅಸಮಾಧಾನ! ಕೋಪದಲ್ಲಿ ಹೊಡೆಯಲು ಕೈ ಎತ್ತಿದ ಕ್ಯಾಪ್ಟನ್

    ನೀರು ಕುಡಿದ ನಂತರ ರೋಹಿತ್ ಶರ್ಮಾ ಬಾಟಲಿಯನ್ನು ಇಶಾನ್ ಕಿಶನ್​​ಗೆ ನೀಡಿದ್ದರು. ಆದರೆ ಇಶಾನ್ ಕಿಶನ್ ಬಾಟಲಿಯನ್ನು ಕೈಬಿಟ್ಟರು. ಹೀಗಾಗಿ ರೋಹಿತ್ ಕೋಪದಲ್ಲಿ ಇಶಾನ್​ಗೆ ಹೊಡೆಯಲು ಯತ್ನಿಸಿದ್ದಾರೆ. ಆದಾಗ್ಯೂ, ಈ ಬಗ್ಗೆ ಅಭಿಮಾನಿಗಳು ವಿಭಿನ್ನ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 57

    IND vs AUS: ಮೈದಾನದಲ್ಲೇ ಇಶಾನ್ ಕಿಶನ್ ಮೇಲೆ ರೋಹಿತ್ ಅಸಮಾಧಾನ! ಕೋಪದಲ್ಲಿ ಹೊಡೆಯಲು ಕೈ ಎತ್ತಿದ ಕ್ಯಾಪ್ಟನ್

    ಆಸ್ಟ್ರೇಲಿಯಾ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದು, ವಿಕೆಟ್ ಕೊರತೆಯಿಂದ ತಾಳ್ಮೆ ಕಳೆದುಕೊಂಡ ರೋಹಿತ್ ತಮ್ಮ ಅಸಹನೆಯನ್ನು ಇಶಾನ್ ಮೇಲೆ ತೋರಿಸಲು ಯತ್ನಿಸಿದ್ದಾರೆ ಎಂದು ಕೆಲವು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಬಾಟಲ್ ಬಿಸಾಕಿದರೆ ಹೊಡೆಯುತ್ತಾರೆಯೇ ಎಂದು ರೋಹಿತ್ ವಿರುದ್ಧ ಕಟುವಾದ ಕಮೆಂಟ್​ಗಳನ್ನು ಮಾಡುತ್ತಿದ್ದಾರೆ.

    MORE
    GALLERIES

  • 67

    IND vs AUS: ಮೈದಾನದಲ್ಲೇ ಇಶಾನ್ ಕಿಶನ್ ಮೇಲೆ ರೋಹಿತ್ ಅಸಮಾಧಾನ! ಕೋಪದಲ್ಲಿ ಹೊಡೆಯಲು ಕೈ ಎತ್ತಿದ ಕ್ಯಾಪ್ಟನ್

    ಸದ್ಯ ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಲ್ಲದೆ ಅಭಿಮಾನಗಳು ಮೂರನೇ ಟೆಸ್ಟ್‌ನಲ್ಲಿ ನಿಧಾನವಾಗಿ ಆಡುತ್ತಿದ್ದ ಪೂಜಾರಾಗೆ ದೊಡ್ಡ ಹೊಡೆತಗಳನ್ನು ಆಡುವಂತೆ ಇಶಾನ್ ಕಿಶನ್​ರೊಂದಿಗೆ ಹೇಳುವ ವಿಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.

    MORE
    GALLERIES

  • 77

    IND vs AUS: ಮೈದಾನದಲ್ಲೇ ಇಶಾನ್ ಕಿಶನ್ ಮೇಲೆ ರೋಹಿತ್ ಅಸಮಾಧಾನ! ಕೋಪದಲ್ಲಿ ಹೊಡೆಯಲು ಕೈ ಎತ್ತಿದ ಕ್ಯಾಪ್ಟನ್

    ಮೊದಲ ಮೂರು ಟೆಸ್ಟ್‌ಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ನಾಲ್ಕನೇ ಟೆಸ್ಟ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾ 150 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 417 ರನ್ ಗಳಿಸಿದೆ. ಖವಾಜಾ 180 ಮತ್ತು ಗ್ರೀನ್ 114 ರನ್​ಗಳಿಸಿದ ತಂಡದ ಮೊತ್ತವನ್ನು 400 ಗಡಿ ದಾಟಲು ನೆರವಾಗಿದ್ದರು.

    MORE
    GALLERIES