ಅಂತರಾಷ್ಟ್ರೀಯ ತಂಡದಲ್ಲಿನ ಸ್ಥಾನಕ್ಕಾಗಿ ಕಾದು ಕಾದು ಸಂಜು ಸ್ಯಾಮ್ಸನ್ ಕಳೆದ ತಿಂಗಳು ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಗೆ ಆಯ್ಕೆಯಾದರು. ಈ ಮೂಲಕ 2014ರ ಬಳಿಕ ಮತ್ತೆ ಸ್ಯಾಮ್ಸನ್ ಟೀಂ ಇಂಡಿಯಾ ಸೇರಿದರು.
2/ 10
ಆದರೆ, ಸ್ಯಾಮ್ಸನ್ ತಂಡಕ್ಕೆ ಆಯ್ಕೆಯಾಗಿದ್ದು ಬಿಟ್ಟರೆ ಮೂರು ಪಂದ್ಯಗಳಲ್ಲಿ ಬೆಂಚ್ ಕಾದಿದ್ದೇ ಬಂತು. ವಿಂಡೀಸ್ ವಿರುದ್ಧದ ಟಿ-20 ಸರಣಿಗೆ ಸ್ಯಾಮ್ಸನ್ರನ್ನು ಆರಂಭದಲ್ಲಿ ಕೈಬಿಡಲಾಯಿತಾದರು, ಬಳಿಕ ಶಿಖರ್ ಧವನ್ ಇಂಜುರಿಗೆ ತುತ್ತಾದ ಪರಿಣಾಮ ಅವರ ಬದಲು ಸ್ಥಾನ ಪಡೆದುಕೊಂಡರು.
3/ 10
ನಾಳೆಯಿಂದ ವಿಡೀಸ್ ವಿರುದ್ಧ ಮೂರು ಪಂದ್ಯಗಳ ಟಿ-20 ಸರಣಿ ಪೈಕಿ ಮೊದಲ ಪಂದ್ಯ ನಡೆಯಲಿದೆ. ಆದರೆ, ಈ ಸರಣಿಯಲ್ಲೂ ಸ್ಯಾಮ್ಸನ್ ಕಣಕ್ಕಿಳಿಯುವುದು ಅನುಮಾನು ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಇಲ್ಲಿದೆ.
4/ 10
ವಿರಾಟ್ ಕಮ್ಬ್ಯಾಕ್: ಬಾಂಗ್ಲಾ ವಿರುದ್ಧದ ಟಿ-20 ಸರಣಿಯಲ್ಲಿ ಕೊಹ್ಲಿಗೆ ವಿಶ್ರಾಂತಿ ನೀಡಿದ ಪರಿಣಾಮ ಸ್ಯಾಮ್ಸನ್ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ, ಕೊಹ್ಲಿ ಸ್ಥಾನದಲ್ಲಿ ಕೆ ಎಲ್ ರಾಹುಲ್ರನ್ನು ಕಣಕ್ಕಿಳಿಸಿದರು. ರಾಹುಲ್ ಉತ್ತಮ ಪ್ರದರ್ಶನ ನೀಡಿದರು.
5/ 10
ಸದ್ಯ ಧವನ್ ಅನುಪಸ್ಥಿಯಲ್ಲಿ ಸಂಜು ಸ್ಥಾನ ಪಡೆದುಕೊಂಡಿದ್ದಾರೆ. ಕೊಹ್ಲಿ ತಂಡಕ್ಕೆ ಮರಳಿರುವ ಕಾರಣ ರಾಹುಲ್ ಅವರು ರೋಹಿತ್ ಶರ್ಮಾ ಜೊತೆ ಓಪನರ್ ಆಗಿ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.
6/ 10
3ನೇ ಕ್ರಮಾಂಕದಲ್ಲಿ ಕೊಹ್ಲಿ, 4ನೇ ಕ್ರಮಾಂಕದಲ್ಲಿ ಶ್ರೇಯಸ್ ಐಯರ್ ಕಣಕ್ಕಿಳಿಯುವುದು ಖಚಿತ. ಹೀಗಾಗಿ ನಂತರದ ಸ್ಥಾನದಲ್ಲಿ ಸ್ಯಾಮ್ಸನ್ ಆಡುವುದು ಅನುಮಾನ.
7/ 10
ಮನೀಶ್ ಪಾಂಡೆ ಫಾರ್ಮ್: ಸ್ಯಾಮ್ಸನ್ರನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಸಲು ಬಯಸಿದರೆ ಆ ಜಾಗದಲ್ಲಿ ಸದ್ಯ ಭರ್ಜರಿ ಫಾರ್ಮ್ನಲ್ಲಿರುವ ಮನೀಶ್ ಪಾಂಡೆ ಅಬ್ಬರಿಸಲು ತಯಾರಾಗಿದ್ದಾರೆ.
8/ 10
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ತಂಡವನ್ನು ಗೆಲ್ಲಿಸಿಕೊಟ್ಟ ಪಾಂಡೆ ಮೇಲೆ ಹೆಚ್ಚಿನ ನಿರೀಕ್ಷೆ ಇರುವ ಕಾರಣ ಇಲ್ಲಿಯೂ ಸ್ಯಾಮ್ಸನ್ಗೆ ಜಾಗವಿಲ್ಲ. ಅಲ್ಲದೆ ಜಡೇಜಾ ಕೂಡ ತಂಡ ಸೇರಿದ್ದು ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
9/ 10
ಪಂತ್ಗೆ ಮತ್ತಷ್ಟು ಅವಕಾಶ: ಸ್ಯಾಮ್ಸನ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲು ಕೊನೆಯ ಅವಕಾಶ ರಿಷಭ್ ಪಂತ್ ಅನುಪಸ್ಥಿತಿ. ಆದರೆ, ಪಂತ್ಗೆ ವೆಸ್ಟ್ ಇಂಡೀಸ್ ಸರಣಿ ಬಹುಮುಖ್ಯ. ಇದರಲ್ಲೂ ಪಂತ್ ವೈಫಲ್ಯ ಅನುಭವಿಸಿದರೆ ಮತ್ತೆ ತಂಡ ಸೇರುವುದು ಅನುಮಾನ.
10/ 10
ಪಂತ್ ಎಲ್ಲಾದರು ಕಳಪೆ ಪ್ರದರ್ಶನ ಮುಂದುವರೆಸಿದರೆ ಜನವರಿಯಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಟಿ-20 ಸರಣಿಯಲ್ಲಿ ಸ್ಯಾಮ್ಸನ್ಗೆ ಅವಕಾಶ ಸಿಗಬಹುದು. ಹೀಗಾಗಿ ವಿಂಡೀಸ್ ಸರಣಿಯಲ್ಲಿ ಸ್ಯಾಮ್ಸನ್ ಬೆಂಚ್ ಕಾಯಬೇಕಾದ ಸ್ಥಿತಿ ದಟ್ಟವಾಗಿದೆ.