ಹೊಸ ವರ್ಷದ ಮೊದಲ ಸರಣಿಯನ್ನು ಟೀಂ ಇಂಡಿಯಾ ಭರ್ಜರಿ ಆಗಿ ಆರಂಭಿಸಿದೆ. ಮೊದಲ ಪಂದ್ಯ ಮಳೆಗೆ ರದ್ದಾದರೂ ಎರಡನೇ ಟಿ-20 ಪಂದ್ಯದಲ್ಲಿ 7 ವಿಕೆಟ್ಗಳ ಅಮೋಘ ಜಯ ಸಾಧಿಸಿ 3 ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.
2/ 15
ನಾಳೆ (ಜ. 10) ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಅಂತಿಮ ಟಿ-20 ನಡೆಯಲಿದ್ದು ನಿರ್ಣಾಯಕ ಪಂದ್ಯವಾಗಿದೆ.
3/ 15
ಉಭಯ ತಂಡಗಳಿಗೂ ನಾಳೆಯ ಪಂದ್ಯ ಪ್ರಮುಖವಾಗಿದ್ದು, ಪುಣೆಯಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.
4/ 15
ಈ ನಡುವೆ ಇಂದೋರ್ನಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ವೇಗಿ ಶಾರ್ದೂಲ್ ಠಾಕೂರ್ ತಮ್ಮ ಕೊನೇಯ ಓವರ್ನ ಕೊನೇ ಎರಡು ಎಸೆತಗಳಲ್ಲಿ ವಿಕೆಟ್ ಉರುಳಿಸಿದ್ದರು.
5/ 15
19ನೇ ಓವರ್ ಬೌಲಿಂಗ್ ಮಾಡಿದ ಶಾರ್ದೂಲ್ 5ನೇ ಎಸೆತದಲ್ಲಿ ಇಸುರು ಉದಾನ ವಿಕಟ್ ಕಿತ್ತರೆ, 6ನೇ ಎಸೆತದಲ್ಲಿ ಲಸಿತ್ ಮಲಿಂಗಾ ಅವರನ್ನು ಪೆವಿಲಿಯನ್ಗೆ ಅಟ್ಟಿದ್ದರು.
6/ 15
ಹೀಗೆ ತಮ್ಮ ಕೊನೆಯ ಓವರ್ನ ಕೊನೆಯ 2 ಎಸೆತದಲ್ಲಿ ವಿಕೆಟ್ ಕಿತ್ತಿದ್ದರು. ಈ ಮೂಲಕ ಮುಂದಿನ ಪಂದ್ಯದಲ್ಲಿ ಶಾರ್ದೂಲ್ ಮಾಡುವ ಮೊದಲ ಓವರ್ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದರೆ ಹ್ಯಾಟ್ರಿಕ್ ಪಡೆಯಲಿದ್ದಾರೆಂದು ಹೇಳಲಾಗಿತ್ತು.
7/ 15
ಆದರೆ, ಪುಣೆಯಲ್ಲಿ ನಡೆಯಲಿರುವ 3ನೇ ಟಿ-20 ಪಂದ್ಯದಲ್ಲಿ ಅವರು ಮೊದಲ ಎಸೆತದಲ್ಲಿ ವಿಕೆಟ್ ಪಡೆದರೆ ಇದು ಹ್ಯಾಟ್ರಿಕ್ ಎಂದು ಪರಿಗಣನೆಯಾಗುವುದಿಲ್ಲ.
8/ 15
ಎರಡು ಭಿನ್ನ ಪಂದ್ಯಗಳಲ್ಲಿ ಸತತ ಮೂರು ವಿಕೆಟ್ ಸಂಪಾದನೆ ಮಾಡಿದರೆ ಅದನ್ನು ಹ್ಯಾಟ್ರಿಕ್ ಎಂದು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.
9/ 15
ಕ್ರಿಕೆಟ್ ನಿಯಮದ ಪ್ರಕಾರ, ಒಂದೇ ಪಂದ್ಯದ ಸತತ ಮೂರು ಎಸೆತಗಳಲ್ಲಿ ವಿಕೆಟ್ ಉರುಳಿಸಿದರೆ ಮಾತ್ರ ಅದನ್ನು ಹ್ಯಾಟ್ರಿಕ್ ಎಂದು ಪರಿಗಣಿಸಲಾಗುತ್ತದೆ.
10/ 15
ಎರಡನೇ ಟಿ-20 ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದರು. 4 ಓವರ್ ಬೌಲಿಂಗ್ ಮಾಡಿ ಕೇವಲ 23 ರನ್ ನೀಡಿ 3 ವಿಕೆಟ್ ಕಿತ್ತಿದ್ದರು.
11/ 15
ನಾಳೆ ಅಂತಿಮ ಟಿ-20 ಪಂದ್ಯ ನಡೆಯಲಿದೆ. ಶ್ರೀಲಂಕಾ ಕನಿಷ್ಠ ಸರಣಿಯನ್ನು ಸಮಬಲ ಮಾಡುವ ಅಂದಾಜಿನಲ್ಲಿದ್ದರೆ, ಇತ್ತ ಕೊಹ್ಲಿ ಪಡೆ ಸರಣಿ ಗೆದ್ದು ತನ್ನ ಹಳೆಯ ದಾಖಲೆಯನ್ನು ಮುಂದುವರೆಸುವ ಇರಾದೆ ಹೊಂದಿದೆ.
12/ 15
ಕಳೆದ 12 ವರ್ಷಗಳಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಒಂದೇ ಒಂದು ಸರಣಿಯಲ್ಲಿ ಸೋಲು ಕಾಣಲಿಲ್ಲ.
13/ 15
2008 ಆಗಸ್ಟ್ ಬಳಿಕ ಟೆಸ್ಟ್, ಏಕದಿನ ಹಾಗೂ ಟಿ-20 ಸೇರಿ ಭಾರತ- ಲಂಕಾ ಒಟ್ಟು 60 ಪಂದ್ಯಗಳನ್ನಾಡಿದೆ. ಇದರಲ್ಲಿ ಭಾರತ 45 ಪಂದ್ಯಗಳಲ್ಲಿ ಗೆದ್ದರೆ, ಕೇವಲ 10 ರಲ್ಲಿ ಮಾತ್ರ ಸೋಲುಂಡಿದೆ.
14/ 15
12 ವರ್ಷಗಳ ಸರಣಿಯಲ್ಲಿ ಟೀಂ ಇಂಡಿಯಾ ಲಂಕಾ ವಿರುದ್ಧ 16-0 ಅಂತರದಿಂದ ಮೇಲುಗೈ ಸಾಧಿಸಿದೆ. ವಿರಾಟ್ ಕೊಹ್ಲಿ ಕಾಲಿಟ್ಟ ಬಳಿಕವಂತು ಭಾರತ ತಂಡ ಶ್ರೀಲಂಕಾ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದೆ.
15/ 15
ಕೊಹ್ಲಿ ನಾಯಕತ್ವದಲ್ಲಿ ಭಾರತ ಆಡಿದ 7 ಸರಣಿಗಳಲ್ಲಿ ಏಳನ್ನೂ ಗೆದ್ದು ಬೀಗಿದೆ. ಆಡಿದ 6 ಟಿ-20 ಪಂದ್ಯಗಳಲ್ಲಿ 5 ರಲ್ಲಿ ಗೆದ್ದರೆ ಒಂದು ಡ್ರಾ ಆಗಿದೆ.