ಮೊಹಾಲಿಯಲ್ಲಿ ನಡೆದ ಎರಡನೇ ಟಿ-20 ಪಂದ್ಯ ಗೆದ್ದು ಬೀಗಿರುವ ಭಾರತ ಅಂತಿಮ ಕದನಕ್ಕೆ ಸಜ್ಜಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೆದ್ದು ಸರಣಿ ವಶ ಪಡಿಸಿಕೊಳ್ಳುವತ್ತ ಕೊಹ್ಲಿ ಪಡೆ ಚಿತ್ತ ನೆಟ್ಟಿದೆ. ಜೊತೆಗೆ ಆಡುವ ಬಳಗದಲ್ಲಿ ಒಂದಿಷ್ಟು ಬದಲಾವಣೆ ಮಾಡುವ ಅಂದಾಜಿದೆ. ಸಂಭಾವ್ಯ ಪಟ್ಟಿ ಇಲ್ಲಿದೆ.
2/ 12
ರೋಹಿತ್ ಶರ್ಮಾ- ರೋಹಿತ್ ಶರ್ಮಾ ಕಳೆದ ಪಂದ್ಯದಲ್ಲಿ ಬೇಗನೆ ಔಟ್ ಆಗಿದ್ದರು. ಫಾರ್ಮ್ ಕಂಡುಕೊಳ್ಳಬೇಕಾದ ಅನಿವಾರ್ಯತೆ ಉಪ ನಾಯಕನ ಮೇಲಿದೆ.
3/ 12
ಶಿಖರ್ ಧವನ್- ಕೆರಿಬಿಯನ್ ಪ್ರವಾಸದಲ್ಲಿ ಫಾರ್ಮ್ ವೈಫಲ್ಯ ಅನುಭವಿಸಿದ್ದ ಧವನ್ ಕಳೆದ ಪಂದ್ಯದಲ್ಲಿ ಮಿಂಚಿದ್ದರು ಮಿಂಚಿದ್ದರು. ಹೀಗಾಗಿ ಇಂದುಕೂಡ ಧವನ್ ಬ್ಯಾಟ್ನಿಂದ ಮತ್ತಷ್ಟು ನಿರೀಕ್ಷಿಸಲಾಗಿದೆ.
4/ 12
ವಿರಾಟ್ ಕೊಹ್ಲಿ- 2ನೇ ಟಿ-20 ಪಂದ್ಯದಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದ ನಾಯಕ ವಿರಾಟ್ ಕೊಹ್ಲಿ ಇಂದು ಬೆಂಗಳೂರಿನಲ್ಲಿ ಪಂದ್ಯ ಆಗಿರುವುದರಿಂದ ಸಾಕಷ್ಟು ನಿರೀಕ್ಷೆ ಇದೆ.
5/ 12
ಶ್ರೇಯಸ್ ಐಯರ್- ಸಿಕ್ಕ ಅವಕಾಶವನ್ನು ಕೈತುಂಬಾ ಬಾಜಿಕೊಳ್ಳುತ್ತಿರುವ ಐಯರ್ ಆಯ್ಕೆ ಸಮಿತಿಯ ನಂಬಿಕೆ ಉಳಿಸಿಕೊಂಡಿದ್ದಾರೆ. ಟೀಂ ಇಂಡಿಯಾದಲ್ಲಿ ಕಾಡುತ್ತಿರುವ ಬಹುಕಾಲದ 4ನೇ ಕ್ರಮಾಂಕಕ್ಕೆ ಐಯರ್ ಸೂಕ್ತ ಆಟಗಾರ ಎಂದೇ ಹೇಳಲಾಗುತ್ತಿದೆ.
6/ 12
ರಿಷಭ್ ಪಂತ್- ಪದೇಪದೇ ವೈಫಲ್ಯ ಅನುಭವಿಸುತ್ತಿರುವ ಪಂತ್ ಇಂದಿನ ಪಂದ್ಯದಲ್ಲಿ ಅಬ್ಬರಿಸ ಬೇಕಾದ ಒತ್ತಡದಲ್ಲಿದ್ದಾರೆ.
7/ 12
ಹಾರ್ದಿಕ್ ಪಾಂಡ್ಯ- ಹಾರ್ದಿಕ್ರಿಂದ ಸ್ಫೋಟಕ ಬ್ಯಾಟಿಂಗ್ ನಿರೀಕ್ಷಿಸಲಾಗಿದೆ
8/ 12
ರವೀಂದ್ರ ಜಡೇಜಾ- ಬ್ಯಾಟಿಂಗ್-ಬೌಲಿಂಗ್-ಫಿಲ್ಡಿಂಗ್ನಲ್ಲಿ ಜಡೇಜಾ ಭಾರತಕ್ಕೆ ನೆರವಾಗಲಿದ್ದಾರೆ. ವಿಶ್ವಕಪ್ ಟಿ-20 ವೇಳೆಗೆ ಜಡೇಜಾ ಸಂಪೂರ್ಣ ಫಿಟ್ ಆದರೆ ಟೀಂ ಇಂಡಿಯಾಕ್ಕೆ ಉಪಯುಕ್ತವಾಗಲಿದೆ.
9/ 12
ವಾಷಿಂಗ್ಟನ್ ಸುಂದರ್- ಟೀಂ ಇಂಡಿಯಾ ನ್ಯೂ ಬಾಲ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್. ಈಗಾಗಲೇ ಕೊಹ್ಲಿ ತಂಡದ ಬ್ಯಾಟಿಂಗ್ ಲೈನ್ಅಪ್ ಕೆಳಕ್ರಮಾಂಕದ ವರೆಗೆ ಬರಲಿದೆ ಎಂದು ಹೇಳಿದ್ದಾರೆ. ಈ ಮೂಲಕ ಆಲ್ರೌಂಡರ್ ಸುಂದರ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಪಕ್ಕ.
10/ 12
ರಾಹುಲ್ ಚಹಾರ್- ಟೀಂ ಇಂಡಿಯಾದ ಮತ್ತೊಬ್ಬ ಯುವ ಸ್ಪಿನ್ನರ್ ರಾಹುಲ್ ಚಹಾರ್ ಕಳೆದ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಬ್ಯಾಟಿಂಗ್ ಕೂಡ ಮಾಡುವ ಸಾಮರ್ಥ್ಯ ರಾಹುಲ್ ಹೊಂದಿದ್ದಾರೆ.
11/ 12
ಖಲೀಲ್ ಅಹ್ಮದ್
12/ 12
ದೀಪಕ್ ಚಹಾರ್- ಎರಡನೇ ಟಿ-20 ಪಂದ್ಯದಲ್ಲಿ ತನ್ನ ಸ್ವಿಂಗ್ ಮೂಲಕ ಎದುರಾಳಿಗೆ ಕಾಡಿದ್ದ ಚಹಾರ್ ಈ ಬಾರಿಯು ಅದೇ ಮಾರಕ ದಾಳಿ ಸಂಘಟಿಸಿದರೆ ಟಿ-20 ಪಂದ್ಯದಲ್ಲಿ ಸ್ಥಾನ ಖಾಯಂ ಆಗಲಿದೆ.