India vs South Africa: ಮುಂದಿನ ಎರಡೂ ಏಕದಿನ ಪಂದ್ಯ ನಿಗದಿಯಂತೆ ನಡೆಯಲಿದೆ; ಆದರೆ...
India vs South Africa, ODI series: ಎಲ್ಲಾದರು ಬಿಸಿಸಿಐ ಈ ಕುರಿತು ಕಠಿಣ ಕ್ರಮ ಕೈಗೊಂಡಲ್ಲಿ ಭಾರತ- ಆಫ್ರಿಕಾ ನಡುವಣ ಎರಡನೇ ಹಾಗೂ ಮೂರನೇ ಏಕದಿನ ಪಂದ್ಯವನ್ನು ಅಭಿಮಾನಿಗಳು ಟಿ.ವಿ ಯಲ್ಲಿ ಮಾತ್ರ ನೋಡಬಹುದಾಗುವೆ.
ಧರ್ಮಶಾಲದ ಹಿಮಾಚಲ ಪ್ರದೇಶ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಯಿತು.
2/ 10
ಸದ್ಯ ಉಳಿದಿರುವ ಎರಡು ಪಂದ್ಯಗಳ ಪೈಕಿ ಮಾರ್ಚ್ 15 ಭಾನುವಾರದಂದು ಲಕ್ನೋದಲ್ಲಿ ಎರಡನೇ ಪಂದ್ಯ ಹಾಗೂ ಮಾರ್ಚ್ 18 ಬುಧವಾರದಂದು ಕೋಲ್ಕತ್ತಾದಲ್ಲಿ ಅಂತಿಮ ಮೂರನೇ ಏಕದಿನ ಪಂದ್ಯ ನಡೆಯಲಿವೆ.
3/ 10
ಆದರೆ, ಈ ಎರಡೂ ಪಂದ್ಯ ಮುಚ್ಚಿದ ಬಾಗಿನಲ್ಲಿ ನಡೆಯಲಿವೆ ಎಂದು ಹೇಳಲಾಗಿದೆ. ಅಂದರೆ ಪ್ರೇಕ್ಷಕರಿಲ್ಲದೆ ಖಾಲಿ ಮೈದಾನದಲ್ಲಿ ಈ ಎರಡೂ ಪಂದ್ಯ ಜರುಗಲಿವೆ.
4/ 10
ಭಾರತದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜನರೇ ಇಲ್ಲದ ಖಾಲಿ ಮೈದಾನದಲ್ಲಿ ಕ್ರಿಕೆಟ್ ಆಯೋಜಿಸುವಂತೆ ಕೇಂದ್ರ ಕ್ರೀಡಾ ಸಚಿವಾಲಯ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಿದೆ.
5/ 10
ಇದೇ ಕಾರಣಕ್ಕಾಗಿ ಸದ್ಯ ಬಿಸಿಸಿಐ ಪ್ರೇಕ್ಷಕರೇ ಇಲ್ಲದ ಖಾಲಿ ಮೈದಾನದಲ್ಲಿ ಕ್ರಿಕೆಟ್ ಆಡಿಸುವ ಕುರಿತು ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ.
6/ 10
ಎಲ್ಲಾದರು ಬಿಸಿಸಿಐ ಈ ಕುರಿತು ಕಠಿಣ ಕ್ರಮ ಕೈಗೊಂಡಲ್ಲಿ ಭಾರತ- ಆಫ್ರಿಕಾ ನಡುವಣ ಎರಡನೇ ಹಾಗೂ ಮೂರನೇ ಏಕದಿನ ಪಂದ್ಯವನ್ನು ಅಭಿಮಾನಿಗಳು ಟಿ.ವಿ ಯಲ್ಲಿ ಮಾತ್ರ ನೋಡಬಹುದಾಗುದೆ.
7/ 10
ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಏಕದಿನ ಹಾಗೂ ಟೆಸ್ಟ್ ಸರಣಿಯಲ್ಲಿ ವೈಟ್ವಾಷ್ ಮುಖಭಂಗ ಅನುಭವಿಸಿದ ಬಳಿಕ ದ. ಆಫ್ರಿಕಾ ವಿರುದ್ಧ ಏಕದಿನ ಸರಣಿ ಆಡುತ್ತಿದೆ.
8/ 10
ಹೀಗಾಗಿ ಭಾರತಕ್ಕೆ ಈ ಸರಣಿ ತುಂಬಾನೇ ಮುಖ್ಯವಾಗಿರುವುದರಿಂದ ಆಟ ನೋಡಲು ಮೈದಾನದಲ್ಲಿ ಪ್ರೇಕ್ಷಕರು ಕಿಕ್ಕಿರಿದು ತುಂಬುದರಲ್ಲಿ ಅನುಮಾನವಿಲ್ಲ. ಇದರಿಂದ ಸೋಂಕು ಪೀಡಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಖಾಲಿ ಮೈದಾನದಲ್ಲಿ ಕ್ರಿಕೆಟ್ ಆಡುವಂತೆ ಕೇಂದ್ರ ಸರ್ಕಾರ ಭಾರತ ಕ್ರಿಕೆಟ್ ತಂಡಕ್ಕೆ ಆದೇಶಿಸಿದೆ ಎನ್ನಲಾಗಿದೆ.
9/ 10
ಇನ್ನೂ 12ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ವಿಚಾರದಲ್ಲೂ ಬಿಸಿಸಿಐ ಇದೇ ತೀರ್ಮಾನ ಕೈಗೋಳ್ಳಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
10/ 10
ಇಷ್ಟೇ ಅಲ್ಲದೆ, ರಾಜತಾಂತ್ರಿಕ, ಆಡಳಿತಾತ್ಮಕ ಮತ್ತು ಉದ್ಯೋಗ ವೀಸಾಗಳನ್ನು ಹೊರತುಪಡಿಸಿ ಉಳಿದೆಲ್ಲ ವೀಸಾಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಹೀಗಾಗಿ ಏಪ್ರಿಲ್ 15ನೇ ತಾರೀಕಿನ ವರೆಗೆ ವಿದೇಶಿ ಆಟಗಾರರು ಐಪಿಎಲ್ಗಾಗಿ ಭಾರತಕ್ಕೆ ಬರಲು ಸಾಧ್ಯವಾಗುವುದಿಲ್ಲ.