India vs New Zealand: ಪಾಂಡೆ ಸಮಯೋಚಿತ ಆಟ; ಧೋನಿ ಜೊತೆಗೆ ವಿಶೇಷ ದಾಖಲೆ ಹಂಚಿಕೊಂಡ ಮನೀಶ್!
India vs New Zealand, 4th T20I Match: ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. 11.3 ಓವರ್ಗಳಲ್ಲೇ 88 ರನ್ಗೆ ಆರು ವಿಕೆಟುಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದ ಸಂದರ್ಭ ತಂಡಕ್ಕೆ ಆಸರೆಯಾಗಿದ್ದು ಮನೀಶ್ ಪಾಂಡೆ.
ನ್ಯೂಜಿಲೆಂಡ್ ವಿರುದ್ಧದ 4ನೇ ಟಿ-20 ಪಂದ್ಯ ರೋಚಕ ಸೂಪರ್ ಓವರ್ನಲ್ಲಿ ಅಂತ್ಯಕಂಡಿತು. ಭಾರತ ಭರ್ಜರಿ ಗೆಲುವು ಸಾಧಿಸುವ ಮೂಲಕ ಐದು ಟಿ-20 ಸರಣಿಯಲ್ಲಿ 4-0 ಅಂತರದ ಮುನ್ನಡೆ ಸಾಧಿಸಿತು.
2/ 13
20 ಓವರ್ನಲ್ಲಿ ಭಾರತ 8 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿದರೆ, ನ್ಯೂಜಿಲೆಂಡ್ ಕೂಡ 20 ಓವರ್ನಲ್ಲಿ 7 ವಿಕೆಟ್ ಕಳೆದುಕೊಂಡು 165 ರನ್ ಕಲೆಹಾಕಿತು.
3/ 13
ಹೀಗಾಗಿ ನಡೆದ ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 13 ರನ್ ಬಾರಿಸಿತು.
4/ 13
14 ರನ್ಗಳ ಟಾರ್ಗೆಟ್ ಅನ್ನು ಭಾರತ 5 ಎಸೆತದಲ್ಲೇ ಪೂರ್ಣಗೊಳಿಸಿ ಅಮೋಘ ಗೆಲುವು ಕಂಡಿತು.
5/ 13
ಇಂದಿನ ಪಂದ್ಯಕ್ಕೆ ಭಾರತ ಕೆಲವು ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಆದರೆ, ಬ್ಯಾಟಿಂಗ್ನಲ್ಲಿ ಕೊಹ್ಲಿ ಪಡೆ ಸಂಪೂರ್ಣ ವೈಫಲ್ಯ ಅನುಭವಿಸಿತು.
6/ 13
ಮನೀಶ್ ಪಾಂಡೆ ಸಮಯೋಚಿತ ಆಟ ತಂಡಕ್ಕೆ ನೆರವಾಯಿತಷ್ಟೆ. ಪಾಂಡೆ 36 ಎಸೆತಗಳಲ್ಲಿ ಅಜೇಯ 50 ರನ್ ಬಾರಿಸಿದರು.
7/ 13
ಇದರೊಂದಿಗೆ ಪಾಂಡೆ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ ಮೂರನೇ ಅರ್ಧಶತಕದ ಸಾಧನೆ ಮಾಡಿದರು. ಜೊತೆಗೆ ಹೊಸ ದಾಖಲೆಯನ್ನೂ ಬರೆದರು.
8/ 13
ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆರು ಅಥವಾ ಅದಕ್ಕಿಂತಲೂ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ಗಿಳಿದು ಅರ್ಧಶತಕ ಸಾಧನೆ ಮಾಡಿರುವ ಭಾರತದ ಎರಡನೇ ಬ್ಯಾಟ್ಸ್ಮನ್ ಎಂಬ ಸಾಧನೆಯನ್ನು ಪಾಂಡೆ ಮಾಡಿದ್ದಾರೆ.
9/ 13
ಇದಕ್ಕೂ ಮುನ್ನ ಎಂಎಸ್ ಧೋನಿ 2018ರಲ್ಲಿ ಸೆಂಚುರಿಯನ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 52 ರನ್ ಗಳಿಸಿ ಈ ಸಾಧನೆ ಮಾಡಿದ್ದರು. ಸದ್ಯ ಪಾಂಡೆ ಕೂಡ ಅಪರೂಪದ ದಾಖಲೆ ಮಾಡಿದ್ದಾರೆ.
10/ 13
ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. 11.3 ಓವರ್ಗಳಲ್ಲೇ 88 ರನ್ಗೆ ಆರು ವಿಕೆಟುಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದ ಸಂದರ್ಭ ತಂಡಕ್ಕೆ ಆಸರೆಯಾಗಿದ್ದು ಮನೀಶ್ ಪಾಂಡೆ.
11/ 13
ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಪಾಂಡೆ, ಬಾಲಂಗೋಚಿಗಳ ಜೊತೆಗೆ ಸೇರಿ ಅಮೂಲ್ಯ ಇನ್ನಿಂಗ್ಸ್ ಕಟ್ಟಿದರು. ಹೆಚ್ಚೇನು ಬೌಂಡರಿ-ಸಿಕ್ಸರ್ಗಳು ಬಾರಿಸಿದೆ ಒಂದು-ಎರಡು ರನ್ ಕಲೆಹಾಕಿಯೇ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
12/ 13
ಅಂತಿಮವಾಗಿ ಭಾರತ ಸೂಪರ್ ಓವರ್ನಲ್ಲಿ ಗೆಲುವು ಕಾಣುವ ಮೂಲಕ ಐದು ಟಿ-20 ಸರಣಿಯಲ್ಲಿ 4-0 ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
13/ 13
ಅಂತಿಮ ಐದನೇ ಟಿ-20 ಪಂದ್ಯ ಫೆಬ್ರವರಿ 2 ಭಾನುವಾರದಂದು ಮೌಂಟ್ ಮೌಂಗನಿಯಲ್ಲಿ ನಡೆಯಲಿದೆ.
First published:
113