ತನ್ನ ಗುರುವಿನ ದಾಖಲೆಯನ್ನೇ ಸರಿಗಟ್ಟಿದ ಕೆಎಲ್ ರಾಹುಲ್; ಕನ್ನಡಿಗನಿಂದ ಕೊಹ್ಲಿ ಸಾಧನೆಯೂ ಉಡೀಸ್!
India vs New Zealand, 3rd ODI: ಟೀಂ ಇಂಡಿಯಾ ಬ್ಯಾಟ್ಸ್ಮನ್ನಿಂದ 5ನೇ ಕ್ರಮಾಂಕದಲ್ಲಿ 3 ವರ್ಷಗಳ ಬಳಿಕ ಶತಕ ಸಿಡಿದು ಬಂದಿದೆ. ಏಕದಿನದಲ್ಲಿ 5 ಅಥವಾ ಅದಕ್ಕಿಂತಲೂ ಕೆಳ ಕ್ರಮಾಂಕದ ಭಾರತೀಯ ಬ್ಯಾಟ್ಸ್ಮನ್ನಿಂದ ದಾಖಲಾದ ಮೊದಲ ಶತಕ ಇದಾಗಿದೆ.
ಓಪನರ್, 3ನೇ ಕ್ರಮಾಂಕ, 5ನೇ ಕ್ರಮಾಂಕ, ವಿಕೆಟ್ ಕೀಪರ್ ಹೀಗೆ ಯಾವುದೇ ಸ್ಥಾನ ನೀಡಿದರೂ ಅದನ್ನು ಅದ್ಭುತವಾಗಿ ಉಪಯೋಗಿಸಿಕೊಳ್ಳುತ್ತಿರುವ ಕೆ ಎಲ್ ರಾಹುಲ್ ಟೀಂ ಇಂಡಿಯಾದಲ್ಲಿ ಮಿಂಚು ಹರಿಸುತ್ತಿದ್ದಾರೆ.
2/ 13
ಸದ್ಯ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಮೂರನೇ ಏಕದಿನ ಪಂದ್ಯದಲ್ಲೂ ರಾಹುಲ್ ಆಕರ್ಷಕ ಶತಕ ಸಿಡಿಸಿ ಅಬ್ಬರಿಸಿದರು. 113 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಸಿಡಿಸಿ ರಾಹುಲ್ 112 ರನ್ ಚಚ್ಚಿದರು.
3/ 13
ಇದರೊಂದಿಗೆ ಕೆ ಎಲ್ ರಾಹುಲ್ ಕೆಲವೊಂದು ದಾಖಲೆ ಸೃಷ್ಟಿಸಿದ್ದಾರೆ. ಅದುಕೂಡ ತನ್ನ ಗುರುವಿನ ದಾಖಲೆಯೇ ಸರಿಗಟ್ಟಿದ ಸಾಧನೆ ಮಾಡಿದ್ದಾರೆ.
4/ 13
ರಾಹುಲ್ ದ್ರಾವಿಡ್ ಬಳಿಕ ಏಷ್ಯಾದ ಆಚೆಗೆ ಶತಕ ಸಿಡಿಸಿದ ಭಾರತೀಯ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಎಂಬ ಹಿರಿಮೆಗೆ ಕೆ ಎಲ್ ಭಾಜನವಾದರು.
5/ 13
ಶ್ರೀಲಂಕಾ ವಿರುದ್ಧ 1999 ರಲ್ಲಿ ಇಂಗ್ಲೆಂಡ್ನ ಟೌಂಟನ್ ಮೈದಾನದಲ್ಲಿ ರಾಹುಲ್ ದ್ರಾವಿಡ್ 145 ಬಾರಿಸಿ ಶತಕದ ಸಾಧನೆ ಮಾಡಿದ್ದರು. ಇದೀಗ ಎರಡು ದಶಕಗಳ ಬಳಿಕ ದ್ರಾವಿಡ್ ಸಾಧನೆಯನ್ನು ಕೆಎಲ್ ರಾಹುಲ್ ಸರಿಗಟ್ಟಿದ್ದಾರೆ.
6/ 13
ಇನ್ನು ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್ನಲ್ಲಿ ಅತಿ ವೇಗದಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ ಬ್ಯಾಟ್ಸ್ಮನ್ಗಳ ಪೈಕಿ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ರಾಹುಲ್ ಮುರಿದಿದ್ದಾರೆ.
7/ 13
ತಮ್ಮ 31ನೇ ಇನ್ನಿಂಗ್ಸ್ನಲ್ಲಿ ಕೆಎಲ್ ರಾಹುಲ್ ನಾಲ್ಕನೇ ಶತಕದ ಸಾಧನೆ ಮಾಡಿದ್ದಾರೆ. ಕೊಹ್ಲಿ ಈ ದಾಖಲೆ ಮಾಡಲು 36 ಇನ್ನಿಂಗ್ಸ್ ತೆಗೆದುಕೊಂಡಿದ್ದರು.
8/ 13
ಇದರ ಜೊತೆಗೆ ಟೀಂ ಇಂಡಿಯಾ ಬ್ಯಾಟ್ಸ್ಮನ್ನಿಂದ 5ನೇ ಕ್ರಮಾಂಕದಲ್ಲಿ 3 ವರ್ಷಗಳ ಬಳಿಕ ಶತಕ ಸಿಡಿದು ಬಂದಿದೆ. ಏಕದಿನದಲ್ಲಿ 5 ಅಥವಾ ಅದಕ್ಕಿಂತಲೂ ಕೆಳ ಕ್ರಮಾಂಕದ ಭಾರತೀಯ ಬ್ಯಾಟ್ಸ್ಮನ್ನಿಂದ ದಾಖಲಾದ ಮೊದಲ ಶತಕ ಇದಾಗಿದೆ.
9/ 13
ಇದಕ್ಕೂ ಮುನ್ನ 2017ರಲ್ಲಿ ಇಂಗ್ಲೆಂಡ್ ವಿರುದ್ಧ ಕಟಕ್ನಲ್ಲಿ ನಡೆದ ಪಂದ್ಯದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 5ನೇ ಕ್ರಮಾಂಕದಲ್ಲಿ ಶತಕ ಸಾಧನೆ ಮಾಡಿದ್ದರು.
10/ 13
ಇದಿಷ್ಟೇ ಅಲ್ಲದೆ ನ್ಯೂಜಿಲೆಂಡ್ ಮಣ್ಣಿನಲ್ಲಿ 5 ಅಥವಾ ಅದಕ್ಕಿಂತಲೂ ಕೆಳ ಕ್ರಮಾಂಕದಲ್ಲಿ ಶತಕ ಬಾರಿಸಿದ 2ನೇ ಭಾರತೀಯ ಬ್ಯಾಟ್ಸ್ಮನ್ ಕೆ ಎಲ್ ರಾಹುಲ್ ಆಗಿದ್ದಾರೆ.
11/ 13
ಮೌಂಟ್ ಮೌಂಗಾನುಯ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ಗೆ ಗೆಲ್ಲಲು 297 ರನ್ಗಳ ಸವಾಲಿನ ಟಾರ್ಗೆಟ್ ನೀಡಿದೆ.
12/ 13
ಭಾರತ ಪರ ಶ್ರೇಯಸ್ ಅಯ್ಯರ್ 63 ಎಸೆತಗಳಲ್ಲಿ 9 ಬೌಂಡರಿ ಬಾರಿಸಿ 62 ರನ್ ಬಾರಿಸಿದರು.
13/ 13
ರಾಹುಲ್ ಒಂದಿಗೆ ಶತಕದ ಜೊತೆಯತಾಟ ಆಡಿದ ಮನೀಶ್ ಪಾಂಡೆ 48 ಎಸೆತಗಳಲ್ಲಿ 42 ರನ್ ಗಳಿಸಿ ನೆರವಾದರು.