India vs New Zealand: ಭಾರತ ಸೋಲುಂಡಿದ್ದು ಕೇವಲ ಬೌಲರ್ಗಳಿಂದ ಮಾತ್ರವಲ್ಲ; ಇಲ್ಲಿವೆ 3 ಕಾರಣ
India vs New Zealand 2020: ಟೀಂ ಇಂಡಿಯಾ ಫೀಲ್ಡಿಂಗ್ ಕೂಡ ನಿನ್ನೆಯ ಪಂದ್ಯದಲ್ಲಿ ಕಳಪೆಯಾಗಿತ್ತು. ವಿರಾಟ್ ಕೊಹ್ಲಿ ರನೌಟ್ ಮಾಡಿದ್ದು ಬಿಟ್ಟರೆ ಫೀಲ್ಡಿಂಗ್ನಲ್ಲಿ ಉಳಿದವರ ಪ್ರದರ್ಶನ ಕೆಟ್ಟದಾಗಿತ್ತು.
ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಕಳಪೆ ಪ್ರದರ್ಶನ ನೀಡಿತು. ಟಿ-20 ಸರಣಿ ಕ್ಲೀನ್ಸ್ವೀಪ್ ಮಾಡಿ ಬೀಗುತ್ತಿದ್ದ ಕೊಹ್ಲಿ ಪಡೆಗೆ ಕಿವೀಸ್ ಶಾಕ್ ನೀಡಿತು.
2/ 11
ಇನ್ನು ಉಳಿದಿರುವ ಎರಡು ಪಂದ್ಯಗಳಲ್ಲಿ ಸರಣಿ ವಶಪಡಿಸಿಕೊಳ್ಳ ಬೇಕಾದರೆ ಟೀಂ ಇಂಡಿಯಾ ಎರಡೂ ಪಂದ್ಯವನ್ನು ಗೆಲ್ಲಬೇಕಾಗಿದೆ.
3/ 11
ಭಾರತ ಮೊದಲ ಏಕದಿನ ಪಂದ್ಯದಲ್ಲಿ ಸೋಲಲು ಬೌಲರ್ಗಳು ದುಬಾರಿ ಎನಿಸಿಕೊಂಡಿದ್ದು ಪ್ರಮುಖ ಕಾರಣ ಹೌದು. ಆದರೆ, ಇದರ ಜೊತೆ ಇನ್ನೆರಡು ಅಂಶಕೂಡ ಇವೆ.
4/ 11
ರಾಸ್ ಟೇಲರ್ ಹಾಗೂ ನಾಯಕ ಟಾಮ್ ಲೇಥಮ್ ಬ್ಯಾಟಿಂಗ್ ಅಬ್ಬರವನ್ನು ಕಟ್ಟಿ ಹಾಕಲು ಭಾರತ ಎಡವಿತು.
5/ 11
ಬೌಂಡರಿ-ಸಿಕ್ಸರ್ಗಳ ಮಳೆ ಸುರಿಸಿದ ಟೇಲರ್-ಲೇಥಮ್ ತಂಡಕ್ಕೆ ಗೆಲುವನ್ನು ತುಂಬಾ ಹತ್ತಿರ ಮಾಡಿಬಿಟ್ಟರು. ಅದರಲ್ಲು ಒಂದು ಸಂದರ್ಭದಲ್ಲಿ ಕೇವಲ 4 ಓವರ್ನಲ್ಲಿ ಈ ಜೋಡಿ 57 ರನ್ಗಳನ್ನು ಚಚ್ಚಿತು.
6/ 11
ಅದರಲ್ಲು ಟೀಂ ಇಂಡಿಯಾ ಪ್ರಮುಖ ಸ್ಪಿನ್ನರ್ ಕುಲ್ದೀಪ್ ಯಾದವ್ 10 ಓವರ್ನಲ್ಲಿ ಬರೋಬ್ಬರಿ 84 ರನ್ ಹಾಗೂ ಶಾರ್ದೂಲ್ ಠಾಕೂರ್ 9 ಓವರ್ಗೆ 80 ರನ್ ನೀಡಿ ಅತ್ಯಂತ ಕಳಪೆ ಪ್ರದರ್ಶನ ತೋರಿದರು.
7/ 11
ಟೀಂ ಇಂಡಿಯಾ ಫೀಲ್ಡಿಂಗ್ ಕೂಡ ನಿನ್ನೆಯ ಪಂದ್ಯದಲ್ಲಿ ಕಳಪೆಯಾಗಿತ್ತು. ವಿರಾಟ್ ಕೊಹ್ಲಿ ರನೌಟ್ ಮಾಡಿದ್ದು ಬಿಟ್ಟರೆ ಫೀಲ್ಡಿಂಗ್ನಲ್ಲಿ ಉಳಿದವರ ಪ್ರದರ್ಶನ ಕೆಟ್ಟದಾಗಿತ್ತು.
8/ 11
ಕಿವೀಸ್ ಗೆಲುವಿನ ರುವಾರಿ ರಾಸ್ ಟೇಲರ್ ಅವರ ಕ್ಯಾಚ್ ಅನ್ನು ಕುಲ್ದೀಪ್ ಯಾದವ್ ಬಿಟ್ಟಿದ್ದಕ್ಕೆ ಭಾರತ ಭಾರೀ ಬೆಲೆ ತೆತ್ತಬೇಕಾಯಿತು.
9/ 11
ಇದರ ಜೊತೆಗೆ ಬೌಂಡರಿ ಲೈನ್ ಪಕ್ಕ ಭಾರತೀಯ ಆಟಗಾರರು ಅನೇಕ ತಪ್ಪುಗಳನ್ನು ಮಾಡಿದರು. ಇದು ಕಿವೀಸ್ ಖಾತೆಗೆ ಸಾಕಷ್ಟು ರನ್ ಹರಿಬರುವಂತೆ ಮಾಡಿತು.
10/ 11
ಪರಿಣಾಮ ನ್ಯೂಜಿಲೆಂಡ್ 4 ವಿಕೆಟ್ಗಳ ಗೆಲುವು ಸಾಧಿಸುವಂತಾಯಿತು. ಮೂರು ಏಕದಿನ ಪಂದ್ಯದಲ್ಲಿ 1-0 ಮುನ್ನಡೆ ಸಾಧಿಸಿತು.
11/ 11
ಎಡರಡನೇ ಏಕದಿನ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಫೆಬ್ರವರಿ 8 ರಂದು ಆಕ್ಲೆಂಡ್ನಲ್ಲಿ ಈ ಪಂದ್ಯ ನಡೆಯಲಿದೆ.