ಇನ್ನು ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ನ ಅತ್ಯಂತ ಯಶಸ್ವಿ ಬೌಲರ್ ಎಂಬ ದಾಖಲೆ ಅಶ್ವಿನ್ ಮುಂದಿದೆ. ಈ ಪಟ್ಟಿಯಲ್ಲಿ 619 ವಿಕೆಟ್ ಉರುಳಿಸಿರುವ ಅನಿಲ್ ಕುಂಬ್ಳೆ ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ 417 ವಿಕೆಟ್ ಕಬಳಿಸಿರುವ ಹರ್ಭಜನ್ ಸಿಂಗ್ ಇದ್ದು, ಭಜ್ಜಿಯ ಈ ದಾಖಲೆ ಮುರಿಯಲು ಸದ್ಯ ಅಶ್ವಿನ್ಗೆ ಕೇವಲ 17 ವಿಕೆಟ್ಗಳ ಅವಶ್ಯಕತೆಯಿದೆ.