ಏಕೆಂದರೆ ಬೈರ್‌ಸ್ಟೋ ಭಾರತದ ವಿರುದ್ಧ ಕಳೆದ 7 ಇನ್ನಿಂಗ್ಸ್‌ಗಳಲ್ಲಿ 5 ಬಾರಿ ಖಾತೆಯನ್ನೇ ತೆರೆದಿಲ್ಲ. ಅಂದರೆ ಟೀಮ್ ಇಂಡಿಯಾ ವಿರುದ್ಧದ ಕಳೆದ 7 ಇನಿಂಗ್ಸ್ನಲ್ಲಿ 5 ಇನ್ನಿಂಗ್ಸ್‌ಗಳಲ್ಲಿ ಬೈರ್‌ಸ್ಟೋ ಕಲೆಹಾಕಿದ್ದು 24 ರನ್ ಮಾತ್ರ. ಅದರಲ್ಲಿ ಒಂದು ಇನಿಂಗ್ಸ್ನಲ್ಲಿ 18 ಹಾಗೂ ಮತ್ತೊಂದು ಇನಿಂಗ್ಸ್ 6 ರನ್ ಬಾರಿಸಿದ್ದರು. ಇದಾಗಿ ಉಳಿದ 5 ಇನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟಾಗಿದ್ದರು.
2018 ರಲ್ಲಿ ಲಾರ್ಡ್ಸ್ನಲ್ಲಿ ನಡೆದ ಭಾರತದ ವಿರುದ್ಧದ ಟೆಸ್ಟ್‌ನಲ್ಲಿ ತಮ್ಮ ಕೊನೆಯ ಅರ್ಧಶತಕವನ್ನು ಬಾರಿಸಿದ್ದರು. ಮೂರು ವರ್ಷಗಳ ಹಿಂದೆ ಟೀಮ್ ಇಂಡಿಯಾ ವಿರುದ್ದ 93 ರನ್ ಬಾರಿಸಿದ ಬಳಿಕ ಬೈರ್ ಸ್ಟೋ ಮತ್ತೆ ಹಾಫ್ ಸೆಂಚುರಿ ಬಾರಿಸಿಲ್ಲ ಎಂಬುದೇ ಅಚ್ಚರಿ. ಅದರಲ್ಲೂ ಟೀಮ್ ಇಂಡಿಯಾ ವಿರುದ್ಧ ಕೊನೆಯ 7 ಇನಿಂಗ್ಸ್ನಲ್ಲಿ 5 ರಲ್ಲಿ ಶೂನ್ಯಕ್ಕೆ ಔಟಾಗಿರುವುದು ದೊಡ್ಡ ಅಚ್ಚರಿ.