ಈ ಹಿಂದೆ ಕರ್ನಾಟಕದ ಕ್ರಿಕೆಟಿಗ ಜಾವಗಲ್ ಶ್ರೀನಾಥ್ 12 ಟೆಸ್ಟ್ ಪಂದ್ಯಗಳ ಬಳಿಕ ಭಾರತದಲ್ಲಿ ಮೊದಲ ಪಂದ್ಯವನ್ನು ಆಡಿರುವುದು ದಾಖಲೆಯಾಗಿತ್ತು. ಅಲ್ಲದೆ ಆರ್ಪಿ ಸಿಂಗ್ 11, ಸಚಿನ್ ತೆಂಡೂಲ್ಕರ್ 10 ಪಂದ್ಯಗಳನ್ನು ವಿದೇಶದಲ್ಲಿ ಆಡಿದ ಬಳಿಕ ತವರಿನಲ್ಲಿ ಕಣಕ್ಕಿಳಿದಿದ್ದರು. ಇದೀಗ 17 ಪಂದ್ಯಗಳ ಬಳಿಕ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಈ ಹಿಂದಿನ ಎಲ್ಲಾ ದಾಖಲೆಯನ್ನು ಬುಮ್ರಾ ಅಳಿಸಿಹಾಕಿದ್ದಾರೆ.