India vs England: ದಾಖಲೆ ಪುಟ ಸೇರಿದ ಭಾರತ-ಇಂಗ್ಲೆಂಡ್​ ನಡುವಣ 3ನೇ ಟೆಸ್ಟ್ ಪಂದ್ಯ..!

2018 ರಲ್ಲಿ ಆಕ್ಲಂಡ್​ನಲ್ಲಿ ನಡೆದ ಪಿಂಕ್ ಬಾಲ್​ ಟೆಸ್ಟ್​ನಲ್ಲಿ ಇಂಗ್ಲೆಂಡ್(10)-ನ್ಯೂಜಿಲಾಂಡ್(3) ಮೊದಲ ದಿನ 233 ರನ್​ಗೆ 13 ವಿಕೆಟ್ ಉರುಳಿದಿರುವುದು ಇದುವರೆಗಿನ ದಾಖಲೆಯಾಗಿತ್ತು.

First published:

  • 19

    India vs England: ದಾಖಲೆ ಪುಟ ಸೇರಿದ ಭಾರತ-ಇಂಗ್ಲೆಂಡ್​ ನಡುವಣ 3ನೇ ಟೆಸ್ಟ್ ಪಂದ್ಯ..!

    ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಡೇಡಿಯಂ ನರೇಂದ್ರ ಮೋದಿ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ ಪಿಂಕ್ ಬಾಲ್ ಟೆಸ್ಟ್​ನ ಮೊದಲ ದಿನದಾಟ ದಾಖಲೆ ಪುಟ ಸೇರಿದೆ.

    MORE
    GALLERIES

  • 29

    India vs England: ದಾಖಲೆ ಪುಟ ಸೇರಿದ ಭಾರತ-ಇಂಗ್ಲೆಂಡ್​ ನಡುವಣ 3ನೇ ಟೆಸ್ಟ್ ಪಂದ್ಯ..!

    ಹೌದು, ಅಹಮದಾಬಾದ್​ನಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್​ನ ಮೊದಲ ದಿನದಾಟದಲ್ಲಿ 13 ವಿಕೆಟ್ ಪತನಗೊಳ್ಳುವ ಮೂಲಕ ಡೇ ನೈಟ್​ ಟೆಸ್ಟ್​​ ಕಡಿಮೆ ಮೊತ್ತಕ್ಕೆ ಹೆಚ್ಚು ವಿಕೆಟ್ ಉರುಳಿದ ದಾಖಲೆಗೆ ಇಂಗ್ಲೆಂಡ್​-ಭಾರತ ಟೆಸ್ಟ್ ಪಂದ್ಯವು ಸೇರ್ಪಡೆಯಾಗಿದೆ.

    MORE
    GALLERIES

  • 39

    India vs England: ದಾಖಲೆ ಪುಟ ಸೇರಿದ ಭಾರತ-ಇಂಗ್ಲೆಂಡ್​ ನಡುವಣ 3ನೇ ಟೆಸ್ಟ್ ಪಂದ್ಯ..!

    ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಟೀಮ್ ಇಂಡಿಯಾ ವೇಗಿ ಇಶಾಂತ್ ಶರ್ಮಾ 3ನೇ ಓವರ್​ನಲ್ಲಿ ಆರಂಭಿಕ ಆಟಗಾರ ಸಿಬ್ಲಿಯನ್ನು ಔಟ್ ಮಾಡುವ ಮೂಲಕ ಆಂಗ್ಲರಿಗೆ ಮೊದಲ ಆಘಾತ ನೀಡಿದ್ದರು.

    MORE
    GALLERIES

  • 49

    India vs England: ದಾಖಲೆ ಪುಟ ಸೇರಿದ ಭಾರತ-ಇಂಗ್ಲೆಂಡ್​ ನಡುವಣ 3ನೇ ಟೆಸ್ಟ್ ಪಂದ್ಯ..!

    ಇದರ ಬೆನ್ನಲ್ಲೇ ದಾಳಿಗಿಳಿದ ರವಿಚಂದ್ರನ್ ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ವಿಕೆಟ್ ಪಡೆಯಲು ಪೈಪೋಟಿ ನಡೆಸಿದರು. ಪರಿಣಾಮ ಇಂಗ್ಲೆಂಡ್​ ತಂಡವು 100ರ ಗಡಿದಾಟುವ ಮುನ್ನವೇ 8 ವಿಕೆಟ್ ಕಳೆದುಕೊಂಡಿತು.

    MORE
    GALLERIES

  • 59

    India vs England: ದಾಖಲೆ ಪುಟ ಸೇರಿದ ಭಾರತ-ಇಂಗ್ಲೆಂಡ್​ ನಡುವಣ 3ನೇ ಟೆಸ್ಟ್ ಪಂದ್ಯ..!

    ಅಲ್ಲದೆ 6 ವಿಕೆಟ್ ಉರುಳಿಸಿ ಅಕ್ಷರ್ ಪಟೇಲ್ ಇಂಗ್ಲೆಂಡ್ ತಂಡವನ್ನು​ ಕೇವಲ 112 ರನ್ ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ಭಾರತ ಮೊದಲ ದಿನದಾಟದಂತ್ಯಕ್ಕೆ 3 ವಿಕೆಟ್​ ಕಳೆದುಕೊಂಡು 99 ರನ್​ಗಳಿಸಿತ್ತು.

    MORE
    GALLERIES

  • 69

    India vs England: ದಾಖಲೆ ಪುಟ ಸೇರಿದ ಭಾರತ-ಇಂಗ್ಲೆಂಡ್​ ನಡುವಣ 3ನೇ ಟೆಸ್ಟ್ ಪಂದ್ಯ..!

    ಡೇ ನೈಟ್ ಟೆಸ್ಟ್​​ನ ಮೊದಲ ದಿನದಾಟದಲ್ಲಿ ಒಟ್ಟು 13 ವಿಕೆಟ್ ಗಳು ಪತನವಾಗುವುದರೊಂದಿಗೆ ಪಿಂಕ್ ಬಾಲ್​ ಟೆಸ್ಟ್​ನಲ್ಲಿ ಒಂದೇ ದಿನ ಗರಿಷ್ಠ ವಿಕೆಟ್ ಪತನದ ಜಂಟಿ ದಾಖಲೆಗೆ ಇಂಗ್ಲೆಂಡ್-ಭಾರತ ಸಾಕ್ಷಿಯಾಯಿತು.

    MORE
    GALLERIES

  • 79

    India vs England: ದಾಖಲೆ ಪುಟ ಸೇರಿದ ಭಾರತ-ಇಂಗ್ಲೆಂಡ್​ ನಡುವಣ 3ನೇ ಟೆಸ್ಟ್ ಪಂದ್ಯ..!

    ಈ ಹಿಂದೆ ಕೂಡ ಡೇ ನೈಟ್ ಟೆಸ್ಟ್​ನಲ್ಲಿ 4 ಬಾರಿ ಮೊದಲ ದಿನ 13 ವಿಕೆಟ್​ ಉರುಳಿದ್ದವು. ಆದರೆ ಅತೀ ಕಡಿಮೆ ಮೊತ್ತದಲ್ಲಿ 13 ವಿಕೆಟ್ ಪತನವಾಗಿರುವುದು ಇದೇ ಮೊದಲು.

    MORE
    GALLERIES

  • 89

    India vs England: ದಾಖಲೆ ಪುಟ ಸೇರಿದ ಭಾರತ-ಇಂಗ್ಲೆಂಡ್​ ನಡುವಣ 3ನೇ ಟೆಸ್ಟ್ ಪಂದ್ಯ..!

    2018 ರಲ್ಲಿ ಆಕ್ಲಂಡ್​ನಲ್ಲಿ ನಡೆದ ಪಿಂಕ್ ಬಾಲ್​ ಟೆಸ್ಟ್​ನಲ್ಲಿ ಇಂಗ್ಲೆಂಡ್(10)-ನ್ಯೂಜಿಲಾಂಡ್(3) ಮೊದಲ ದಿನ 233 ರನ್​ಗೆ 13 ವಿಕೆಟ್ ಉರುಳಿದಿರುವುದು ಇದುವರೆಗಿನ ದಾಖಲೆಯಾಗಿತ್ತು. ಅಲ್ಲದೆ ಇದಕ್ಕೂ ಮುನ್ನ ಭಾರತ-ಬಾಂಗ್ಲಾದೇಶ ನಡುವೆ 2019 ರಲ್ಲಿ ನಡೆದ ಡೇ ನೈಟ್ ಟೆಸ್ಟ್​ನಲ್ಲಿ ಬಾಂಗ್ಲಾದೇಶ(10)-ಭಾರತ(3) 280 ರನ್​ಗೆ 13 ವಿಕೆಟ್ ಕಳೆದುಕೊಂಡಿದ್ದು ಭಾರತದಲ್ಲಿನ ದಾಖಲೆಯಾಗಿತ್ತು. ಇನ್ನು 2017 ರಲ್ಲಿ ದಕ್ಷಿಣ ಆಫ್ರಿಕಾ(9)-ಜಿಂಬಾಬ್ವೆ(4) 339 ರನ್​ಗೆ 13 ವಿಕೆಟ್ ಸಹ ಕಳೆದುಕೊಂಡಿತ್ತು.

    MORE
    GALLERIES

  • 99

    India vs England: ದಾಖಲೆ ಪುಟ ಸೇರಿದ ಭಾರತ-ಇಂಗ್ಲೆಂಡ್​ ನಡುವಣ 3ನೇ ಟೆಸ್ಟ್ ಪಂದ್ಯ..!

    ಇದೀಗ ವಿಶ್ವದ ಅತೀ ದೊಡ್ಡ ಕ್ರಿಕೆಟ್​ ಮೈದಾನದಲ್ಲೇ ಡೇ ನೈಟ್ ಟೆಸ್ಟ್​​ನಲ್ಲಿ ಅತೀ ಕಡಿಮೆ ಮೊತ್ತಕ್ಕೆ ಮೊದಲ ದಿನ 13 ವಿಕೆಟ್ ಪತನವಾಗುವುದರೊಂದಿಗೆ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯವು ದಾಖಲೆ ಪುಟಕ್ಕೆ ಸೇರ್ಪಡೆಯಾಗಿದೆ.

    MORE
    GALLERIES