India vs Australia: ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಬಹುತೇಕ ಔಟ್: ಬದಲಿ ಆಟಗಾರ ಯಾರು ಗೊತ್ತೇ?

ರೋಹಿತ್ ಶರ್ಮಾ ಟೆಸ್ಟ್ ಸರಣಿಯಿಂದ ಹೊರಗುಳಿದರೆ ಭಾರತ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ. ಯಾಕಂದ್ರೆ ಮೊದಲ ಟೆಸ್ಟ್ ಬಳಿಕ ನಾಯಕ ವಿರಾಟ್ ಕೊಹ್ಲಿ ಕೂಡ ಮುಂದಿನ 3 ಟೆಸ್ಟ್ ಪಂದ್ಯಗಳಿಗೆ ಲಭ್ಯರಿಲ್ಲ.

First published:

  • 112

    India vs Australia: ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಬಹುತೇಕ ಔಟ್: ಬದಲಿ ಆಟಗಾರ ಯಾರು ಗೊತ್ತೇ?

    ಕಾಂಗರೂಗಳ ನಾಡಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಸಜ್ಜಾಗಿರುವ ಟೀಂ ಇಂಡಿಯಾಕ್ಕೆ ಈಗ ಮತ್ತೊಂದು ಹೊಡೆತ ಬಿದ್ದಿದೆ. ಇಂಜುರಿಯಿಂದ ಸಂಪೂರ್ಣ ಗುಣಮುಖರಾಗದೆ ಫಿಟ್​ನೆಸ್ ತೊಂದರೆ ಅನುಭವಿಸುತ್ತಿರುವ ಹಿಟ್​ಮ್ಯಾನ್ ರೋಹಿತ್ ಶರ್ಮಾ ಹಾಗೂ ಇಶಾಂತ್ ಶರ್ಮಾ ಟೆಸ್ಟ್ ಸರಣಿಯಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.

    MORE
    GALLERIES

  • 212

    India vs Australia: ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಬಹುತೇಕ ಔಟ್: ಬದಲಿ ಆಟಗಾರ ಯಾರು ಗೊತ್ತೇ?

    13ನೇ ಆವೃತ್ತಿಯ ಐಪಿಎಲ್​ನ ಅಂತಿಮ ಹಂತದವೇಳೆ ರೋಹಿತ್ ಶರ್ಮಾ ತೊಡೆಯ ಸ್ನಾಯು ಸೆಳೆತ ಸಮಸ್ಯೆಗೆ ತುತ್ತಾಗಿದ್ದರು. ಹೀಗಾಗಿ ಬಿಸಿಸಿಐ ಇವರನ್ನು ಏಕದಿನ ಹಾಗೂ ಟಿ-20 ಸರಣಿಯಿಂದ ವಿಶ್ರಾಂತಿ ನೀಡಿತ್ತು.

    MORE
    GALLERIES

  • 312

    India vs Australia: ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಬಹುತೇಕ ಔಟ್: ಬದಲಿ ಆಟಗಾರ ಯಾರು ಗೊತ್ತೇ?

    ಆದರೆ, ನಂತರದಲ್ಲಿ ಡಿ. 17 ರಂದು ಆರಂಭವಾಗುವ ಆಸೀಸ್ ವಿರುದ್ಧದ ಟೆಸ್ಟ್ ಸರಣಿವೇಳೆ ಗುಣಮುಖರಾಗಬಹುದು ಎಂದು ಟೆಸ್ಟ್ ತಂಡದಲ್ಲಿ ಸ್ಥಾನ ನೀಡಲಾಯಿತು. ಆದರೆ, ಸದ್ಯ ರೋಹಿತ್ ಫಿಟ್ನೆಸ್ ಟೆಟ್ಸ್​ನಲ್ಲಿ ಸಂಪೂರ್ಣವಾಗಿ ಪಾಸ್ ಆಗಿಲ್ಲ.

    MORE
    GALLERIES

  • 412

    India vs Australia: ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಬಹುತೇಕ ಔಟ್: ಬದಲಿ ಆಟಗಾರ ಯಾರು ಗೊತ್ತೇ?

    ಅಲ್ಲದೆ ಎನ್​ಸಿಎ ರೋಹಿತ್ ಶರ್ಮಾ ಫಿಟ್​ನೆಸ್ ಬಗ್ಗೆ ತೃಪ್ತಿಗೊಂಡಿಲ್ಲ ಎಂದು ಹೇಳಿದೆ. ಈ ವಿಚಾರದ ಬಗ್ಗೆ ಎನ್​ಸಿಎ ಈಗಾಗಲೇ ಬಿಸಿಸಿಐಗೆ ಮಾಹಿತಿ ನೀಡಿದ್ದು ಸದ್ಯದಲ್ಲೆ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

    MORE
    GALLERIES

  • 512

    India vs Australia: ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಬಹುತೇಕ ಔಟ್: ಬದಲಿ ಆಟಗಾರ ಯಾರು ಗೊತ್ತೇ?

    ಇತ್ತ ಇಶಾಂತ್ ಶರ್ಮಾ ಕೂಡ ಐಪಿಎಲ್ ಮಧ್ಯದಲ್ಲಿ ಸೈಡ್ ಸ್ಟ್ರೇನ್​ಗೆ (ಹೊಟ್ಟೆ ಭಾಗದ ಬದಿಯ ಸ್ನಾಯುಗಳು ಅಥವಾ ಜಾಯಿಂಟ್ ಬೇನೆ) ಒಳಗಾಗಿದ್ದರು. ಸದ್ಯ ರೋಹಿತ್ ಹಾಗೂ ಇಶಾಂತ್ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

    MORE
    GALLERIES

  • 612

    India vs Australia: ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಬಹುತೇಕ ಔಟ್: ಬದಲಿ ಆಟಗಾರ ಯಾರು ಗೊತ್ತೇ?

    ಇನ್ನೂ ರೋಹಿತ್ ಶರ್ಮಾ ಟೆಸ್ಟ್ ಸರಣಿಯಿಂದ ಹೊರಗುಳಿದರೆ ಭಾರತ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ. ಯಾಕಂದ್ರೆ ಮೊದಲ ಟೆಸ್ಟ್ ಬಳಿಕ ನಾಯಕ ವಿರಾಟ್ ಕೊಹ್ಲಿ ಕೂಡ ಮುಂದಿನ 3 ಟೆಸ್ಟ್ ಪಂದ್ಯಗಳಿಗೆ ಲಭ್ಯರಿಲ್ಲ.

    MORE
    GALLERIES

  • 712

    India vs Australia: ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಬಹುತೇಕ ಔಟ್: ಬದಲಿ ಆಟಗಾರ ಯಾರು ಗೊತ್ತೇ?

    2021ರ ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ಜೊತೆ ಇರಲು ಬಯಸಿರುವುದರಿಂದ ಬಿಸಿಸಿಐ ಪಿತೃತ್ವ ರಜೆಯ ಅವಕಾಶ ನೀಡಿದೆ. ಹೀಗಾಗಿ ಕೊಹ್ಲಿ ಅವರು ಮೊದಲ ಟೆಸ್ಟ್ ನಂತರ ಭಾರತಕ್ಕೆ ವಾಪಸ್ ಬರಲಿದ್ದಾರೆ.

    MORE
    GALLERIES

  • 812

    India vs Australia: ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಬಹುತೇಕ ಔಟ್: ಬದಲಿ ಆಟಗಾರ ಯಾರು ಗೊತ್ತೇ?

    ಕೊಹ್ಲಿ ಅಲಭ್ಯತೆಯಲ್ಲಿ ಅಜಿಂಕ್ಯಾ ರಹಾನೆ ನಾಯಕತ್ವ ವಹಿಸಿಕೊಂಡರೆ, ರೋಹಿತ್ ಶರ್ಮಾ ಜಾಗಕ್ಕೆ ಟೀಂ ಇಂಡಿಯಾ ಏಕದಿನ ಹಾಗೂ ಟಿ-20 ತಂಡದ ಮಧ್ಯಮ ಕ್ರಮಾಂಕ ಬ್ಯಾಟ್ಸ್​ಮನ್​ ಶ್ರೇಯಸ್ ಅಯ್ಯರ್ ಆಯ್ಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    MORE
    GALLERIES

  • 912

    India vs Australia: ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಬಹುತೇಕ ಔಟ್: ಬದಲಿ ಆಟಗಾರ ಯಾರು ಗೊತ್ತೇ?

    ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಒಟ್ಟು 4 ಪಂದ್ಯಗಳ ಐದು ದಿನಗಳ ಟೆಸ್ಟ್ ಸರಣಿ ಆಡಲಿದೆ. ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಡಿಸೆಂಬರ್ 17 ರಿಂದ ಆರಂಭವಾಗಲಿದೆ. ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಹೊನಲು ಬೆಳಕಿನಲ್ಲಿ ನಡೆಯಲಿರುವುದು ವಿಶೇಷ.

    MORE
    GALLERIES

  • 1012

    India vs Australia: ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಬಹುತೇಕ ಔಟ್: ಬದಲಿ ಆಟಗಾರ ಯಾರು ಗೊತ್ತೇ?

    ಅಲ್ಲದೆ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ವಿದೇಶಿ ನೆಲದಲ್ಲಿ ಪಿಂಕ್ ಬಾಲ್ ಟೆಸ್ಟ್ ಆಡಲಿದೆ. ಈ ಪಂದ್ಯ ಬೆಳಗ್ಗೆ 9:30ಕ್ಕೆ ಆರಂಭವಾಗಲಿದೆ.

    MORE
    GALLERIES

  • 1112

    India vs Australia: ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಬಹುತೇಕ ಔಟ್: ಬದಲಿ ಆಟಗಾರ ಯಾರು ಗೊತ್ತೇ?

    ಎರಡನೇ ಟೆಸ್ಟ್ ಡಿಸೆಂಬರ್ 26 ರಿಂದ 30ರವರೆಗೆ ಮೆಲ್ಬೋರ್ನ್ನಲ್ಲಿ, 3ನೇ ಟೆಸ್ಟ್ ಪಂದ್ಯ ಜನವರಿ 7 ರಿಂದ 11 ರವರೆಗೆ ಸಿಡ್ನಿ ಮೈದಾನದಲ್ಲಿ ಹಾಗೂ ಅಂತಿಮ ಟೆಸ್ಟ್ ಬ್ರಿಸ್ಬೇನ್​ನಲ್ಲಿ ಜನವರಿ 15 ರಿಂದ 19 ರವರೆಗೆ ನಡೆಯಲಿದೆ.

    MORE
    GALLERIES

  • 1212

    India vs Australia: ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಬಹುತೇಕ ಔಟ್: ಬದಲಿ ಆಟಗಾರ ಯಾರು ಗೊತ್ತೇ?

    ಎರಡು ಹಾಗೂ ಮೂರನೇ ಟೆಸ್ಟ್ ಮುಂಜಾನೆ 5 ಗಂಟೆಗೆ ಶುರುವಾದರೆ, ಅಂತಿಮ ಟೆಸ್ಟ್ 5:30ಕ್ಕೆ ಆರಂಭವಾಗಲಿದೆ.

    MORE
    GALLERIES