ಗಬ್ಬಾದಲ್ಲಿ ಸಾಗುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಂತಿಮ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕಾಂಗರೂ ಪಡೆ ಉತ್ತಮ ಮೊತ್ತದತ್ತ ಸಾಗುತ್ತಿದೆ. ಆದರೆ, ಇತ್ತ ಟೀಂ ಇಂಡಿಯಾಕ್ಕೆ ಮೊದಲ ದಿನವೇ ಮತ್ತೆ ಗಾಯದ ಸಮಸ್ಯೆ ಎದುರಾಗಿದೆ.
2/ 10
ಹೌದು, ತಂಡದ ಪ್ರಮುಖ ವೇಗಿ ನವ್ದೀಪ್ ಸೈನಿ ಇಂಜುರಿಗೆ ತುತ್ತಾಗಿದ್ದು ಮೈದಾನದಿಂದ ಹೊರ ನಡೆದಿದ್ದಾರೆ. ಈಗಾಗಲೇ ಪ್ರಮುಖ ಸ್ಟಾರ್ ಆಟಗಾರರು ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.
3/ 10
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಉತ್ತಮವಾಗಿ ರನ್ ಕಲೆಹಾಕುತ್ತಿತ್ತು. 36ನೇ ಓವರ್ ಎಸೆಯಲು ಬಂದ ನವ್ದೀಪ್ ಸೈನಿ ಬೌಲಿಂಗ್ ಮಾಡುವ ವೇಳೆ ಗಾಯಕ್ಕೆ ತುತ್ತಾದರು.
4/ 10
ತೊಡೆಸಂದು ನೋವು ಕಾಣಿಸಿಕೊಂಡು ಮೈದಾನದಲ್ಲೇ ಕುಳಿತರು. ತಕ್ಷಣವೆ ಭಾರತದ ಫಿಸಿಯೋ ಬಂದು ವಿಚಾರಣೆ ನಡೆಸಿ ಮೈದಾನದಿಂದ ಹೊರ ನಡೆದರು.
5/ 10
ಹೀಗಾಗಿ ಸೈನಿ ತನ್ನ ಓವರ್ನ ಕೊನೆಯ ಎಸೆತವನ್ನು ಬೌಲ್ ಮಾಡಲು ಸಾಧ್ಯವಾಗಲಿಲ್ಲ. ರೋಹಿತ್ ಶರ್ಮಾ ಸೈನಿ ಓವರನ್ನು ಪೂರ್ಣಗೊಳಿಸಿದರು.
6/ 10
ಆಸೀಸ್ ಪ್ರವಾಸಕ್ಕೂ ಮೊದಲೇ ಭಾರತ ತಂಡ ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್ ಅವರಂತಹ ಅನುಭವಿ ವೇಗಿಗಳ ಸೇವೆ ಕಳೆದುಕೊಂಡರೆ, ಬಳಿಕ ಮೊಹಮ್ಮದ್ ಶಮಿ, ಉಮೇಶ್ ಯಾದವ್ ಮತ್ತು ಕೆಎಲ್ ರಾಹುಲ್ ಸೇವೆಯನ್ನೂ ಕಳೆದುಕೊಳ್ಳುವಂತಾಯಿತು.
7/ 10
ಕಳೆದ ಮೂರನೇ ಟೆಸ್ಟ್ನಲ್ಲಿ ಗಾಯಾಳುಗಳ ಪಟ್ಟಿಗೆ ಅಶ್ವಿನ್, ಜಡೇಜಾ, ಬುಮ್ರಾ ಮತ್ತು ವಿಹಾರಿ ಕೂಡ ಸೇರ್ಪಡೆಯಾದರು.
8/ 10
ಸದ್ಯ ನವ್ದೀಪ್ ಸೈನಿ ಕೂಡ ಇಂಜುರಿಗೆ ತುತ್ತಾಗಿ ಮೈದಾನದಿಂದ ಹೊರನಡೆದಿದ್ದಾರೆ. ಇದು ಭಾರತಕ್ಕೆ ದೊಡ್ಡ ಹಿನ್ನಡೆಯಾಗಲಿದೆ.
9/ 10
ಇನ್ನೂ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಇಬ್ಬರು ಆಟಗಾರರು ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ. ಯಾರ್ಕರ್ ಕಿಂಗ್ ಟಿ. ನಟರಾಜನ್ ಹಾಗೂ ವಾಷಿಂಗ್ಟನ್ ಸುಂದರ್ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ.
10/ 10
ಜೊತೆಗೆ ಶಾರ್ದೂಲ್ ಠಾಕೂರ್ ಹಾಗೂ ಮಯಾಂಕ್ ಅಗರ್ವಾಲ್ ಕೂಡ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.