IND vs AUS: ಧೋನಿ ಅಲ್ಲ: 350+ ಟಾರ್ಗೆಟ್ ಇದ್ದು ಗೆಲ್ಲಬೇಕಾದ್ರೆ ಭಾರತಕ್ಕೆ ಈ ಬ್ಯಾಟ್ಸ್ಮನ್ ಬೇಕೆಬೇಕು
ಟೀಂ ಇಂಡಿಯಾ ಟೆಸ್ಟ್ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಆಕಾಶ್ ಚೋಪ್ರಾ, ಏಕದಿನ ಕ್ರಿಕೆಟ್ನಲ್ಲಿ 350ಕ್ಕೂ ಹೆಚ್ಚಿನ ಗುರಿ ಬೆನ್ನತ್ತಲು ಭಾರತ ತಂಡಕ್ಕೆ ರೋಹಿತ್ ಶರ್ಮಾ ಸೇವೆಯ ಅನಿವಾರ್ಯತೆ ಖಂಡಿತಾ ಇದೆ ಎಂದಿದ್ದಾರೆ.
ಕಾಂಗರೂಗಳ ನಾಡಿನಲ್ಲಿ ಭಾರತ ಕ್ರಿಕೆಟ್ ತಂಡ ಸತತ ಎರಡು ಸೋಲಿನೊಂದಿಗೆ ಪ್ರವಾಸ ಆರಂಭಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 66 ರನ್ಗಳ ಸೋಲುಕಂಡರೆ, ಎರಡನೇ ಪಂದ್ಯದಲ್ಲಿ 51 ರನ್ಗಳಿಂದ ಪರಾಭವಗೊಂಡಿತು. ವಿರಾಟ್ ಕೊಹ್ಲಿ ಪಡೆ 0-2 ರಿಂದ ಏಕದಿನ ಸರಣಿ ಕೈಚೆಲ್ಲಿದೆ.
2/ 10
ನಾಳೆ ಬುಧವಾರ ಅಂತಿಮ ಮೂರನೇ ಏಕದಿನ ಪಂದ್ಯ ನಡೆಯಲಿದ್ದು ಪ್ರತಿಷ್ಠೆ ಉಳಿಸಿಕೊಳ್ಳಲು ಟೀಂ ಇಂಡಿಯಾ ಗೆಲ್ಲುತ್ತಾ ಎಂಬುದು ನೋಡಬೇಕಿದೆ.
3/ 10
350+ ಟಾರ್ಗೆಟ್ ಇದ್ದರೆ ಕೊಹ್ಲಿ ಟೀಂಗೆ ಗೆಲ್ಲಲು ಸಾಧ್ಯವಿಲ್ಲ ಎಂದು ಸಾಮಾಜಿಕ ತಾಣಗಳಲ್ಲಿ ಕಮೆಂಟ್ ಬೀಳುತ್ತಿದೆ. ಆಸೀಸ್ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕುವಲ್ಲಿ ಒಂದುಕಡೆ ಬೌಲರ್ಗಳು ವಿಫಲವಾದರೆ, ಚೇಸಿಂಗ್ ಮಾಡುವಲ್ಲಿ ಭಾರತೀಯ ಬ್ಯಾಟ್ಸ್ಮನ್ಸ್ ಯಶಸ್ವಿಯಾಗಲಿಲ್ಲ.
4/ 10
ಆಸ್ಟ್ರೇಲಿಯಾ ಮೊದಲ ಎರಡೂ ಏಕದಿನ ಪಂದ್ಯದಲ್ಲಿ 350ಕ್ಕಿಂತ ಅಧಿಕ ರನ್ ಕಲೆಹಾಕಿ ಭಾರತಕ್ಕೆ ಬೆಟ್ಟದಂತಹ ಟಾರ್ಗೆಟ್ ನೀಡಿತು. ಆದರೆ, ಭಾರತಕ್ಕೆ ಗುರಿ ಮುಟ್ಟಲು ಸಾಧ್ಯವಾಗಲೇಯಿಲ್ಲ.
5/ 10
ಹೀಗಿರುವಾಗ ಭಾರತ ಟೆಸ್ಟ್ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಆಕಾಶ್ ಚೋಪ್ರಾ, ಏಕದಿನ ಕ್ರಿಕೆಟ್ನಲ್ಲಿ 350ಕ್ಕೂ ಹೆಚ್ಚಿನ ಗುರಿ ಬೆನ್ನತ್ತಲು ಭಾರತ ತಂಡಕ್ಕೆ ರೋಹಿತ್ ಶರ್ಮಾ ಸೇವೆಯ ಅನಿವಾರ್ಯತೆ ಖಂಡಿತಾ ಇದೆ ಎಂದಿದ್ದಾರೆ.
6/ 10
ಭಾರತ ತಂಡಕ್ಕೆ 350ಕ್ಕಿಂತ ಅಧಿಕ ಟಾರ್ಗೆಟ್ ಇದ್ದರೆ ಬ್ಯಾಟಿಂಗ್ ವಿಭಾಗಕ್ಕೆ ರನ್ಗಳಿಸುವುದು ಬಹಳಾ ಕಷ್ಟವಾದಂತ್ತಿದೆ. ಒಂದು ವೇಳೆ ರೋಹಿತ್ ಶರ್ಮಾ ತಂಡದಲ್ಲಿ ಇದ್ದಿದ್ದರೆ, ಇಂತಹ ದೊಡ್ಡ ಮೊತ್ತಗಳನ್ನು ಭಾರತ ತಂಡ ಮತ್ತಷ್ಟು ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿರುತ್ತಿತ್ತು ಎಂದಿದ್ದಾರೆ.
7/ 10
ಭಾರತ ಸೋಲು ಕಾಣಲು ಒಂದು ಕಾರಣ ರೋಹಿತ್ ಸೇವೆ ಇಲ್ಲದಿರುವುದು. 350ಕ್ಕೂ ಹೆಚ್ಚಿನ ಗುರಿ ಬೆನ್ನತ್ತಲು ರೋಹಿತ್ ಬೇಕೇಬೇಕು ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
8/ 10
ರೋಹಿತ್ ಶರ್ಮಾ ಸದ್ಯ ಐಪಿಎಲ್ನಲ್ಲಾದ ಇಂಜುರಿಯಿಂದ ಬಳಲುತ್ತಿದ್ದು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ಟಿ-20 ಸರಣಿಗೆ ಆಯ್ಕೆ ಆಗಿರಲಿಲ್ಲ. ಆದರೆ, ಡಿ. 17 ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿವೇಳೆ ಚೇತರಿಸಿಕೊಳ್ಳಬಹುದು ಎಂದು ನಂಬಲಾಗಿದೆ.
9/ 10
ಇನ್ನೂ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಕೆ. ಎಲ್ ರಾಹುಲ್ ಬಗ್ಗೆ ಮಾತನಾಡಿರುವ ಚೋಪ್ರಾ, 5ನೇ ಕ್ರಮಾಂಕದಲ್ಲಿ ಆಡಿಸುವ ಮೂಲಕ ಭಾರತ ತಂಡ ರಾಹುಲ್ ಅವರ ಸಾಮರ್ಥ್ಯದ ಸಂಪೂರ್ಣ ಲಾಭ ಪಡೆದುಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.
10/ 10
ಶಿಖರ್ ಧವನ್ ಜೊತೆಗೆ ಮಯಾಂಕ್ ಅಗರ್ವಾಲ್ ಇನ್ನಿಂಗ್ಸ್ ಆರಂಭಿಸುವ ಬದಲು ಈ ಅವಕಾಶ ರಾಹುಲ್ಗೆ ಸಿಗಬೇಕು ಎಂಬುದು ಆಕಾಶ್ ಚೋಪ್ರಾ ಅಭಿಪ್ರಾಯವಾಗಿದೆ.