India vs Australia: ಬ್ಯಾಟಿಂಗ್ನಲ್ಲಿ ಬುಮ್ರಾ ಬೂಂ: ಅರ್ಧಶತಕ ಸಿಡಿಸಿ ಟೀಂ ಇಂಡಿಯಾ ಮಾನ ಕಾಪಾಡಿದ ಜಸ್ಪ್ರೀತ್
ಭಾರತ 123 ರನ್ಗೆ 9 ವಿಕೆಟ್ ಕಳೆದುಕೊಂಡಿತು. ಆದರೆ, ಈ ಸಂದರ್ಭ ಒಂದಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ಬುಮ್ರಾ ಕೆಲ ಹೊತ್ತು ಆಸೀಸ್ ಬೌಲರ್ಗಳ ಬೆವರಿಳಿಸಿದರು.
ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳು ಅತ್ಯಂತ ಕಳಪೆ ಪ್ರದರ್ಶನ ತೋರಿದ್ದಾರೆ. ಆದರೆ, ಬೌಲರ್ ಜಸ್ಪ್ರೀತ್ ಬುಮ್ರಾ ಅರ್ಧಶತಕ ಸಿಡಿಸಿ ತಂಡ 150 ರನ್ಗೂ ಮುನ್ನವೇ ಆಲೌಟ್ ಆಗುವುದನ್ನು ತಪ್ಪಿಸಿ ಮಾನಕಾಪಾಡಿದರು.
2/ 9
ಮೊದಲ ಇನ್ನಿಂಗ್ಸ್ನಲ್ಲಿ ಭಾರತ ತಂಡ ಆಸೀಸ್ ಬೌಲರ್ಗಳ ಮಾರಕ ದಾಳಿಗೆ ತತ್ತರಿಸಿ 48.3 ಓವರ್ನಲ್ಲಿ ಕೇವಲ 194 ರನ್ಗೆ ಸರ್ವಪತನ ಕಂಡಿತು. ಸದ್ಯ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ಎ ಉತ್ತಮ ಆರಂಭ ಪಡೆದುಕೊಂಡಿದೆ.
3/ 9
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಜಿಂಕ್ಯಾ ರಹಾನೆ ನೇತೃತ್ವದ ಭಾರತ ತಂಡ 9 ರನ್ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಮಯಾಂಕ್ ಅಗರ್ವಾಲ್ ಕೇವಲ 2 ರನ್ಗೆ ನಿರ್ಗಮಿಸಿದರು.
4/ 9
ಈ ಸಂದರ್ಭ ಪೃಥ್ವಿ ಶಾ ಹಾಗೂ ಶುಭ್ಮನ್ ಗಿಲ್ ತಂಡಕ್ಕೆ ಆಸರೆಯಾಗಿ ನಿಂತು 63 ರನ್ಗಳ ಕಾಣಿಕೆ ನೀಡಿದರು. ಸ್ಫೋಟಕ ಆಟವಾಡಿದ ಶಾ ಕೇವಲ 29 ಎಸೆತಗಳಲ್ಲಿ 40 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
5/ 9
ಗಿಲ್ ಆಟ 58 ಎಸೆತಗಳಲ್ಲಿ 43 ರನ್ಗೆ ಅಂತ್ಯವಾಯಿತು. ಬಳಿಕ ಬಂದ ಬ್ಯಾಟ್ಸ್ಮನ್ಗಳು ಯಾರೂ ಹೆಚ್ಚುಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
6/ 9
ಹನುಮಾ ವಿಹಾರು 15 ರನ್ಗೆ ಸುಸ್ತಾದರೆ, ಮೊದಲ ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿದ್ದ ನಾಯಕ ರಹಾನೆ 4 ರನ್ಗೆ ಬ್ಯಾಟ್ ಕೆಳಗಿಟ್ಟರು. ರಿಷಭ್ ಪಂತ್ 5, ನವ್ದೀಪ್ ಸೈನಿ 4 ರನ್ಗೆ ವಿಫಲರಾದರೆ, ವೃದ್ದಿಮಾನ್ ಸಾಹ ಹಾಗೂ ಮೊಹಮ್ಮದ್ ಶಮಿ ಸೊನ್ನೆ ಸುತ್ತಿದರು.
7/ 9
ಹೀಗೆ ಭಾರತ 123 ರನ್ಗೆ 9 ವಿಕೆಟ್ ಕಳೆದುಕೊಂಡಿತು. ಆದರೆ, ಈ ಸಂದರ್ಭ ಒಂದಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ಬುಮ್ರಾ ಕೆಲ ಹೊತ್ತು ಆಸೀಸ್ ಬೌಲರ್ಗಳ ಬೆವರಿಳಿಸಿದರು. ಈ ಜೋಡಿ ಕೊನೆಯ ವಿಕೆಟ್ಗೆ 71 ರನ್ಗಳ ಜೊತೆಯಾಟ ಆಡಿತು.
8/ 9
ಬುಮ್ರಾ 57 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಬಾರಿಸಿ ಅಜೇಯ 55 ರನ್ ಗಳಿಸಿದರೆ, ಸಿರಾಜ್ 34 ಎಸೆತಗಳಲ್ಲಿ 22 ರನ್ ಗಳಿಸಿ ಔಟ್ ಆದರು. ಈ ಮೂಲಕ ಬಾರತ 48.3 ಓವರ್ನಲ್ಲಿ 194 ರನ್ಗೆ ಆಲೌಟ್ ಆಯಿತು.
9/ 9
ಆಸ್ಟ್ರೇಲಿಯಾ ಎ ಪರ ಸಿಯಾನ್ ಅಬಾಟ್ ಹಾಗೂ ಜ್ಯಾಕ್ ವೈಲ್ಡರ್ಮತ್ ತಲಾ 3 ವಿಕೆಟ್ ಕಿತ್ತು ಮಿಂಚಿದರು.