India vs Pakistan: ಸಾಂಪ್ರದಾಯಿಕ ಎದುರಾಳಿಗಳ ಕದನಕ್ಕೆ ಸಾಕ್ಷಿಯಾಗಿದ್ದ ಅಭಿಮಾನಿಗಳ ಜೋಶ್ ಹೇಗಿತ್ತು ಗೊತ್ತೆ?

ಮ್ಯಾಚೆಂಸ್ಟರ್​ನಲ್ಲಿ ಭಾನುವಾರ ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ​ ಭರ್ಜರಿ ಜಯ ಸಾಧಿಸಿದೆ. ಬ್ಲೂ ಬಾಯ್ಸ್​ ನೀಡಿದ 337 ರನ್​ಗಳ ಸವಾಲನ್ನು ಬೆನ್ನತ್ತಿದ್ದ ಸರ್ಫರಾಜ್ ಪಡೆ ಡರ್ಕ್​ವರ್ತ್​ ರೂಲ್ಸ್​ ಪ್ರಕಾರ 89 ರನ್​ಗಳ ಅಂತರದಿಂದ ಸೋಲನುಭವಿಸಿತು. ತೀವ್ರ ಹಣಾಹಣಿ ನಿರೀಕ್ಷಿಸಲಾಗಿದ್ದ ಈ ಪಂದ್ಯದ ಟಿಕೆಟ್ ಒಂದೇ ದಿನದಲ್ಲಿ ಸೇಲ್ ಆಗಿದ್ದವು. ಅದಕ್ಕೆ ಸಾಕ್ಷಿ ಎಂಬಂತೆ ಉಭಯ ತಂಡಗಳ ಕ್ರೀಡಾ ಪ್ರೇಮಿಗಳು ಗ್ಯಾಲರಿಯಲ್ಲಿ ಕಿಕ್ಕಿರಿದು ತುಂಬಿದ್ದರು. ಕೆಲವರು ವಿಭಿನ್ನ ವೇಷ ಭೂಷಣದ ಮೂಲಕ ಗಮನ ಸೆಳೆದರೆ, ಮತ್ತೆ ಕೆಲವರು ರಾಷ್ಟ್ರ ಧ್ವಜ ಹಿಡಿದು ತಮ್ಮ ತಂಡವನ್ನು ಹುರಿದುಂಬಿಸಿದರು. ಹಲವು ದಾಖಲೆಗಳಿಗೆ ಸಾಕ್ಷಿಯಾಗಿದ್ದ ಈ ಪಂದ್ಯವನ್ನು ಕ್ರೀಡಾಂಗಣದಲ್ಲೇ ಕಣ್ತುಂಬಿಕೊಂಡ ಅಭಿಮಾನಿಗಳ ಹರ್ಷೋದ್ಘಾರ ಹೇಗಿತ್ತು ಎಂಬುದರ ಫೋಟೋ ಝಲಕ್ ಇಲ್ಲಿದೆ.

  • News18
  • |
First published: