ನಿನ್ನೆ ಮುಷ್ತಾಕ್ ಟ್ರೋಫಿ ಗೆಲ್ಲಿಸಿ ಇಂದು ಹಸೆಮಣೆ ಏರಿದ ಮನೀಶ್ ಪಾಂಡೆ; ಖ್ಯಾತ ನಟಿಯ ಜೊತೆ ಕರ್ನಾಟಕ ಕ್ಯಾಪ್ಟನ್ ವಿವಾಹ
Manish Pandey Weds Ashrita Shetty: ಮನೀಶ್ ಪಾಂಡೆಯನ್ನು ವರಿಸಿದ ನಟಿ ಆಶ್ರಿತಾ ಶೆಟ್ಟಿ ಮೂಲತಃ ಮಂಗಳೂರಿನವರಾಗಿದ್ದು, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಆಟಗಾರ ಮನೀಶ್ ಪಾಂಡೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
2/ 14
ಮನೀಶ್ ಪಾಂಡೆ ದಕ್ಷಿಣ ಭಾರತದ ಖ್ಯಾತ ನಟಿ ಆಶ್ರಿತಾ ಶೆಟ್ಟಿ ಅವರನ್ನು ವಿವಾಹವಾಗಿದ್ದಾರೆ
3/ 14
ನಿನ್ನೆ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ನಾಯಕ ಮನೀಶ್ ಪಾಂಡೆ ಇಂದು ಗೆಳತಿ ಆಶ್ರಿತಾರೊಂದಿಗೆ ಮುಂಬೈನಲ್ಲಿ ವಿವಾಹವಾಗಿದ್ದಾರೆ.
ಮನೀಶ್ ಪಾಂಡೆಯನ್ನು ವರಿಸಿದ ನಟಿ ಆಶ್ರಿತಾ ಶೆಟ್ಟಿ ಮೂಲತಃ ಮಂಗಳೂರಿನವರಾಗಿದ್ದು, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
6/ 14
ಈ ಹಿಂದೆ ‘ಉದಯಂ ಎನ್ಎಚ್4‘, ‘ಇಂದ್ರಜಿತ್‘, ‘ಒರು ಕನ್ನಿಯುಂ ಮೂನು‘ , ಅಂತೆಯೇ ‘ತೆಲಿಕೆದ ಬೊಳ್ಳಿ‘ ತುಳು ಸಿನಿಮಾ ಸೇರಿದಂತೆ ಪ್ರಮುಖ ಚಿತ್ರಗಳಲ್ಲಿ ಆಶ್ರಿತಾ ಶೆಟ್ಟಿ ನಟಿಸಿದ್ದಾ ರೆ
7/ 14
ಕಳೆದ ರಾತ್ರಿ ಸೂರತ್ನಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಪೈನಲ್ ಪಂದ್ಯ ನಡೆದಿತ್ತು. ರೋಚಕವಾಗಿ ನಡೆದ ಅಂತಿಮ ಹಣಾಹಣಿಯಲ್ಲಿ ತಮಿಳುನಾಡು ತಂಡವನ್ನು ಅಂತಿಮ ಎಸೆತದಲ್ಲಿ ಸೋಲಿಸಿ ಟ್ರೋಫಿಗೆ ಮುತ್ತಿಕ್ಕಿತು.
8/ 14
ನಾಯಕ ಮಣೀಶ್ ಪಾಂಡೆ 60 ರನ್ಗಳಿಸಿ ತಂಡ ಗೆಲ್ಲಲು ಪ್ರಮುಖ ಕಾರಣರಾದರು.
9/ 14
ಇದೇ ತಾರೀಕಿಗೆ ಆರಂಭವಾಗಲಿರುವ ವೆಸ್ಟ್ಇಂಡೀಶ್ ವಿರುದ್ಧದ ಸರಣಿಗೆ ಮನೀಶ್ ಪಾಂಡೆ ಆಯ್ಕೆಯಾಗಿದ್ದಾರೆ.
10/ 14
ಇಲ್ಲಿಯವರೆಗೆ ಮನೀಶ್ ಪಾಂಡೆ 23 ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, 32 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.
11/ 14
ಏಕದಿನದಲ್ಲಿ ಒಂದು ಶತಕ ಹಾಗೂ ಎರಡು ಅರ್ಧ ಶತಕ ಬಾರಿಸಿರುವ ಪಾಂಡೆ ಟಿ20 ಪಂದ್ಯಗಳಲ್ಲಿ ಎರಡು ಅರ್ಧ ಶತಕ ಬಾರಿಸಿದ್ದಾರೆ.